ಕರ್ನಾಟಕ

karnataka

ETV Bharat / international

ನೀರವ್​ ಮೋದಿ ಮೇಲ್ಮನವಿ ಅರ್ಜಿ ತಿರಸ್ಕೃತ.. ಭಾರತಕ್ಕೆ ಹಸ್ತಾಂತರಿಸಲು ಲಂಡನ್​ ಕೋರ್ಟ್​ ಸೂಚನೆ - ಭಾರತಕ್ಕೆ ಹಸ್ತಾಂತರಿಸಲು ಲಂಡನ್​ ಕೋರ್ಟ್​ ಸೂಚನೆ

ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಬೇಕಾಗಿರುವ ವಂಚಕ ನೀರವ್​ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಲಂಡನ್​ ಕೋರ್ಟ್​ ಸೂಚಿಸಿದೆ. ಇದರ ವಿರುದ್ಧ ನೀರವ್​ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದೆ.

uk-high-court-reject-nirav-modi-appeal
ನೀರವ್​ ಮೋದಿ ಮೇಲ್ಮನವಿ ಅರ್ಜಿ ತಿರಸ್ಕೃತ

By

Published : Nov 9, 2022, 6:17 PM IST

ಲಂಡನ್:ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿ ಇಂಗ್ಲೆಂಡ್​ನಲ್ಲಿ ಜೈಲುಪಾಲಾಗಿರುವ ವಜ್ರದ ವ್ಯಾಪಾರಿ, ವಂಚಕ ನೀರವ್​ ಮೋದಿ ಭಾರತಕ್ಕೆ ತನ್ನನ್ನು ಹಸ್ತಾಂತರಿಸುವುದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಲಂಡನ್​ ಹೈಕೋರ್ಟ್​ ವಜಾ ಮಾಡಿದೆ.

ಅಕ್ರಮ ಹಣ ವರ್ಗಾವಣೆ ಮತ್ತು ಬ್ಯಾಂಕ್ ವಂಚನೆ ಕೇಸ್​ನಲ್ಲಿ ನೀರವ್​ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅಲ್ಲಿನ ಕೋರ್ಟ್​ ಈ ಹಿಂದೆ ಆದೇಶಿಸಿತ್ತು. ಇದರ ವಿರುದ್ಧ ನೀರವ್​ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ತಾವು ಮಾನಸಿಕವಾಗಿ ದೃಢವಾಗಿಲ್ಲ. ಭಾರತಕ್ಕೆ ಹಸ್ತಾಂತರಿಸಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ನೀರವ್​ ಮೋದಿ ಭಾರತದಲ್ಲಿ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದು, ವಿಚಾರಣೆಗಾಗಿ ಹಸ್ತಾಂತರಿಸುವುದು ದಬ್ಬಾಳಿಕೆ ಮತ್ತು ಅನ್ಯಾಯವಲ್ಲ. ಮಾನಸಿಕ ಅನಾರೋಗ್ಯದ ಕಾರಣಕ್ಕಾಗಿ ಹಸ್ತಾಂತರ ತಡೆಯಲು ಸಾಧ್ಯವಿಲ್ಲ ಎಂದು ಹೇಳಿ, ಭಾರತಕ್ಕೆ ಆರೋಪಿಯನ್ನು ಹಸ್ತಾಂತರಿಸಲು ಸೂಚಿಸಿತು.

2019 ರಿಂದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಲಂಡನ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನೀರವ್​ ಮೋದಿ ಭಾರತಕ್ಕೆ ಬೇಕಾಗಿರುವ ಪ್ರಮುಖ ಅಪರಾಧಿಯಾಗಿದ್ದಾನೆ. ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು, ಮರುಪಾವತಿಸಿದೇ ವಂಚಿಸಿ ಬ್ರಿಟನ್​ಗೆ ಪರಾಗಿಯಾಗಿದ್ದಾನೆ.

ನೀರವ್​ ಮೋದಿ ವಿರುದ್ಧ ಭಾರತದ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದು, ಆತನಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಓದಿ:ಮೇರಿಲ್ಯಾಂಡ್ ನ ಲೆಫ್ಟಿನೆಂಟ್ ಗವರ್ನರ್ ಆಗಿ ಭಾರತೀಯ ಅಮೆರಿಕನ್ ಅರುಣಾ ಮಿಲ್ಲರ್ ಆಯ್ಕೆ

ABOUT THE AUTHOR

...view details