ಕರ್ನಾಟಕ

karnataka

ETV Bharat / international

Blast in Balochistan: ಯೂನಿಯನ್​ ಕೌನ್ಸಿಲ್​ ಅಧ್ಯಕ್ಷ ಸೇರಿ 7 ಮಂದಿ ಸಾವು!

ಪಾಕ್‌ನ ಬಲೂಚಿಸ್ತಾನದಲ್ಲಿ ನಡೆದ ನೆಲಬಾಂಬ್​​ ಸ್ಫೋಟದಲ್ಲಿ 7 ಮಂದಿ ಬಲಿಯಾಗಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ

By

Published : Aug 8, 2023, 6:57 AM IST

ಬಲೂಚಿಸ್ತಾನ(ಪಾಕಿಸ್ಥಾನ): ಸೋಮವಾರ ರಾತ್ರಿ ಬಲೂಚಿಸ್ತಾದ ಪಂಜ್ಗೂರ್​ ಜಿಲ್ಲೆಯಲ್ಲಿ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ನೆಲಬಾಂಬ್​​ ಸ್ಫೋಟದಲ್ಲಿ ಯೂನಿಯನ್​ ಕೌನ್ಸಿಲ್​(ಯುಸಿ) ಅಧ್ಯಕ್ಷ ಸೇರಿದಂತೆ ಕನಿಷ್ಠ ಏಳು ಮಂದಿ ಸಾವನಪ್ಪಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಮೃತರನ್ನು ಇಶ್ತಿಯಾಕ್​ ಯಾಕೂಬ್​, ಮೊಹಮ್ಮದ್​ ಯಾಕೂಬ್​, ಇಬ್ರಾಹಿಂ, ವಾಜಿದ್​, ಫಿದಾ ಹುಸೇನ್​, ಸರ್ಫರಾಜ್​ ಮತ್ತು ಹೈದರ್​ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ಬಲ್ಗತಾರ್​ ಯುಸಿ ಅಧ್ಯಕ್ಷ ಇಶ್ತಿಯಾಕ್​ ಯಾಕೂಬ್​ ಮತ್ತು ಇತರರನ್ನು ಒಳಗೊಂಡ ವಾಹನವನ್ನು ಗುರಿಯಾಗಿಸಲು ದುಷ್ಕರ್ಮಿಗಳು ರಿಮೋಟ್​ ಸ್ಪೋಟಕ ಸಾಧನವನ್ನು ಅಳವಡಿಸಿದ್ದರು ಎಂದು ಪಂಜ್ಗೂರ್​ನ ಡೆಪ್ಯುಟಿ ಕಮಿಷನರ್​ ಸೊಮ್ರೊ ಮಾಹಿತಿ ನೀಡಿದ್ದಾರೆ.

ವಾಹನ ಬಲ್ಗತಾರ್​ ಪ್ರದೇಶದ ಚಕರ್​ ಬಜಾರ್​ ತಲುಪುತ್ತಿದ್ದಂತೆ, ಸಾಧನ ಸ್ಪೋಟಗೊಂಡು ಜೀವಹಾನಿ ಸಂಭವಿಸಿದೆ. ಮೃತರ ಪೈಕಿ ನಾಲ್ವರ ಗುರುತುಗಳನ್ನು ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ಪತ್ತೆಹಚ್ಚಿದ್ದಾರೆ ಎಂದು ಅವರು ಹೇಳಿದರು. ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಸೆಪ್ಟೆಂಬರ್ 2014ರಲ್ಲಿ ಇದೇ ಪ್ರದೇಶದಲ್ಲಿ ಇಶಾಕ್ ಬಲ್ಗಾತ್ರಿಯ ತಂದೆ ಯಾಕುಬ್ ಬಲ್ಗಾತ್ರಿ ಮತ್ತು ಅವರ 10 ಸಹಚರರು ಕೊಲ್ಲಲ್ಪಟ್ಟಿದ್ದರು. ಬಲೂಚ್ ಲಿಬರೇಶನ್ ಫ್ರಂಟ್ (BLF) ಈ ಕಾನೂನು ಬಾಹಿರ ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿತ್ತು. ನಿನ್ನೆ ನಡೆದ ಘಟನೆಯ ಹಿಂದೆ ಅದೇ ಸಂಘಟನೆಯ ಕೈವಾಡವಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಪಾಕ್​ನ ಪತ್ರಿಕೆಯೊಂದು ವರದಿ ಮಾಡಿದೆ.

ರಾಜಕೀಯ ಪಕ್ಷದ ಸಮಾವೇಶದಲ್ಲಿ ಪ್ರಬಲ ಬಾಂಬ್​ ಸ್ಫೋಟ:ಇತ್ತಿಚೆಗೆ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ಪಕ್ಷದ ಸಮಾವೇಶದಲ್ಲಿ ಪ್ರಬಲ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 40 ಜನರು ಸಾವನ್ನಪ್ಪಿದ್ದಎಉ. ಅಲ್ಲದೇ ಸುಮಾರು 200 ಮಂದಿ ಗಾಯಗೊಂಡಿದ್ದರು. ಬಜೌರ್ ಬುಡಕಟ್ಟು ಜಿಲ್ಲೆಯ ರಾಜಧಾನಿ ಖಾರ್‌ನಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (ಜೆಯುಐ-ಎಫ್) ಕಾರ್ಯಕರ್ತರ ಸಮಾವೇಶದಲ್ಲಿ ಈ ಭೀಕರ ಸ್ಫೋಟ ಸಂಭವಿಸಿತ್ತು.

ಖೈಬರ್ ಪಖ್ತುಂಖ್ವಾದಲ್ಲಿ ಜೆಯುಐ-ಎಫ್‌ನ ವಕ್ತಾರ ಅಬ್ದುಲ್ ಜಲೀಲ್ ಖಾನ್ ಪ್ರಕಾರ, ಕಳೆದ ಜು.29ರ ಸಂಜೆ 4 ಗಂಟೆಗೆ ಈ ಪ್ರಬಲ ಬಾಂಬ್ ಸ್ಫೋಟಗೊಂಡಿತ್ತು. ಮೌಲಾನಾ ಲಯೀಕ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಸ್ಫೋಟಿಸಲಾಗಿತ್ತು. ಜೆಯುಐ-ಎಫ್ ಕೇಂದ್ರ ಸಮಿತಿ ಸದಸ್ಯರಾದ ಖೈಬರ್ ಪಖ್ತುಂಖ್ವಾ ಗವರ್ನರ್ ಹಾಜಿ ಗುಲಾಂ ಅಲಿ ಬಾಂಬ್ ಸ್ಫೋಟದಿಂದ ಉಂಟಾದ ಸಾವಿನ ಸಂಖ್ಯೆಯನ್ನು ದೃಢಪಡಿಸಿದ್ದರು. ಮತ್ತೊಂದೆಡೆ, ಗಾಯಾಳುಗಳ ಪೈಕಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿತ್ತು. ಇದೊಂದು ಆತ್ಮಾಹುತಿ ದಾಳಿಯಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಭದ್ರತಾ ಪಡೆಗಳು ಈಗಾಗಲೇ ಸ್ಥಳಕ್ಕೆ ದೌಡಾಯಿಸಿ, ಇಡೀ ಪ್ರದೇಶವನ್ನು ಸುತ್ತುವರಿದಿದ್ದವು. ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಪ್ರಾಂತ್ಯದ ಉಸ್ತುವಾರಿ ಮುಖ್ಯಮಂತ್ರಿ ಅಜಮ್ ಖಾನ್ ಅವರಿಗೆ ಒತ್ತಾಯಿಸಿದ್ದರು

ಇದನ್ನೂ ಓದಿ:Blast in Pakistan: ರಾಜಕೀಯ ಪಕ್ಷದ ಸಮಾವೇಶದಲ್ಲಿ ಪ್ರಬಲ ಬಾಂಬ್​ ಸ್ಫೋಟ.. 40 ಜನ ಬಲಿ, 200 ಮಂದಿಗೆ ಗಾಯ

ABOUT THE AUTHOR

...view details