ಕರ್ನಾಟಕ

karnataka

ETV Bharat / international

ನಾಸಾದ ಹ್ಯೂಮನ್ ಎಕ್ಸ್‌ಪ್ಲೊರೇಶನ್ ರೋವರ್ ಚಾಲೆಂಜ್ ಗೆದ್ದ ಭಾರತೀಯ ವಿದ್ಯಾರ್ಥಿಗಳು

ಪಂಜಾಬ್‌ನ ಡೀಸೆಂಟ್ ಚಿಲ್ಡ್ರನ್ ಮಾಡೆಲ್ ಪ್ರೆಸಿಡೆನ್ಸಿ ಸ್ಕೂಲ್ ಹೈಸ್ಕೂಲ್ ವಿಭಾಗದಲ್ಲಿ ಸ್ಟೆಮ್ ಎಂಗೇಜ್‌ಮೆಂಟ್ ಪ್ರಶಸ್ತಿಯನ್ನು ಗೆದ್ದರೆ, ತಮಿಳುನಾಡಿನ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಂಡವು ವಿಶ್ವವಿದ್ಯಾಲಯ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ..

NASA
ನಾಸಾ

By

Published : May 4, 2022, 2:37 PM IST

ವಾಷಿಂಗ್ಟನ್(ಅಮೆರಿಕಾ) :ಪಂಜಾಬ್ ಮತ್ತು ತಮಿಳುನಾಡಿನ ಎರಡು ಭಾರತೀಯ ವಿದ್ಯಾರ್ಥಿ ಗುಂಪುಗಳು ನಾಸಾ 2022 ಹ್ಯೂಮನ್ ಎಕ್ಸ್‌ಪ್ಲೋರೇಶನ್ ರೋವರ್ ಚಾಲೆಂಜ್ ಅನ್ನು ಗೆದ್ದಿವೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಏಪ್ರಿಲ್ 29ರಂದು ವರ್ಚುವಲ್ ಪ್ರಶಸ್ತಿ ಸಮಾರಂಭದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಈ ಘೋಷಣೆ ಮಾಡಿದೆ.

ಈ ಸ್ಪರ್ಧೆಯಲ್ಲಿ 58 ಕಾಲೇಜುಗಳು ಮತ್ತು 33 ಪ್ರೌಢಶಾಲೆಗಳಿಂದ 91 ತಂಡಗಳು ಭಾಗವಹಿಸಿದ್ದವು. ಸೌರವ್ಯೂಹದಲ್ಲಿನ ಗ್ರಹಗಳ ಕಠಿಣ ಮೇಲ್ಮೈ ಮೇಲೆ ಚಲಿಸುವ ಮಾನವ-ಚಾಲಿತ ರೋವರ್ ಅನ್ನು ವಿನ್ಯಾಸಗೊಳಿಸುವುದು, ಅವುಗಳ ನಿರ್ವಹಣೆ ಮಾಡುವುದು ಅಂತಾರಾಷ್ಟ್ರೀಯ ವಿದ್ಯಾರ್ಥಿ ತಂಡಗಳಿಗೆ ಒಡ್ಡಲಾಗಿದ್ದ ಸ್ಪರ್ಧೆಯಾಗಿತ್ತು.

ಪಂಜಾಬ್‌ನ ಡೀಸೆಂಟ್ ಚಿಲ್ಡ್ರನ್ ಮಾಡೆಲ್ ಪ್ರೆಸಿಡೆನ್ಸಿ ಸ್ಕೂಲ್ ಹೈಸ್ಕೂಲ್ ವಿಭಾಗದಲ್ಲಿ ಸ್ಟೆಮ್ ಎಂಗೇಜ್‌ಮೆಂಟ್ ಪ್ರಶಸ್ತಿಯನ್ನು ಗೆದ್ದರೆ, ತಮಿಳುನಾಡಿನ ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಂಡವು ವಿಶ್ವವಿದ್ಯಾಲಯ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

For All Latest Updates

ABOUT THE AUTHOR

...view details