ಕರ್ನಾಟಕ

karnataka

ETV Bharat / international

ಉತ್ತರ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಟರ್ಕಿ: ಸೈನಿಕರು ಸೇರಿ 12 ಸಾವು - ವೈಮಾನಿಕ ದಾಳಿ

ಟರ್ಕಿಯ ವೈಮಾನಿಕ ದಾಳಿಯು ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ ಸ್ಥಾನಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಸಿರಿಯನ್ ಮಾಧ್ಯಮ ವರದಿ ಮಾಡಿದೆ.

Turkey launches airstrikes over northern Syria
ಉತ್ತರ ಸಿರಿಯಾದ ಮೇಲೆ ಟರ್ಕಿ ವೈಮಾನಿಕ ದಾಳಿ

By

Published : Nov 20, 2022, 10:20 AM IST

ಬೈರೂತ್‌: ಉತ್ತರ ಸಿರಿಯಾದ ಹಲವು ಪಟ್ಟಣಗಳ ಮೇಲೆ ಟರ್ಕಿ ದೇಶವು ಶನಿವಾರ ವೈಮಾನಿಕ ದಾಳಿ ನಡೆಸಿದೆ ಎಂದು ಅಮೆರಿಕ ಬೆಂಬಲಿತ ಕುರ್ದಿಶ್ ನೇತೃತ್ವದ ಪಡೆಗಳು ತಿಳಿಸಿವೆ. ಟರ್ಕಿಯ ರಕ್ಷಣಾ ಸಚಿವಾಲಯ ಯುದ್ಧ ವಿಮಾನದ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. "ಕಿಡಿಗೇಡಿಗಳ ವಿಶ್ವಾಸಘಾತುಕ ದಾಳಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ' ಎಂದು ಎಚ್ಚರಿಕೆ ನೀಡಿದೆ.

ಟರ್ಕಿಯ ವೈಮಾನಿಕ ದಾಳಿಯು ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ ಸ್ಥಾನಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಸಿರಿಯನ್ ಮಾಧ್ಯಮ ವರದಿ ಮಾಡಿದೆ. ಆದಾಗ್ಯೂ, ಸಿರಿಯಾ ಅಥವಾ ಟರ್ಕಿ ಪ್ರಾಣ ಹಾನಿ ಬಗ್ಗೆ ವರದಿ ಮಾಡಿಲ್ಲ. ಬ್ರಿಟನ್ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್, ಸಿರಿಯನ್ ಡೆಮಾಕ್ರಟಿಕ್ ಫೋರ್ಸ್ (ಎಸ್‌ಡಿಎಫ್)​ ಮತ್ತು ಸಿರಿಯನ್ ಸೈನ್ಯದ ಸೈನಿಕರು ಸೇರಿದಂತೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಸಿರಿಯಾದುದ್ದಕ್ಕೂ "ಸುರಕ್ಷಿತ ವಲಯ"ವನ್ನು ಸ್ಥಾಪಿಸುವ ತನ್ನ ಯೋಜನೆಗಳಲ್ಲಿ ಅಂಕಾರಾ ಹಿಂದೆ ಸರಿಯಲು ಪ್ರಯತ್ನಿಸಿದ್ದ ಟರ್ಕಿಯ ಗಡಿಯ ಸಮೀಪವಿರುವ ಆಯಕಟ್ಟಿನ ಪಟ್ಟಣವಾದ ಕೊಬಾನಿಯಲ್ಲಿ ವೈಮಾನಿಕ ದಾಳಿ ನಡೆದಿದೆ ಎಸ್​ಡಿಎಫ್​​ ವಕ್ತಾರ ಫರ್ಹಾದ್ ಶಮಿ ಟ್ವೀಟ್‌ ಮಾಡಿದ್ದಾರೆ.

ಅಲೆಪ್ಪೊ, ರಕ್ಕಾ ಮತ್ತು ಹಸಾಕಾ ಗ್ರಾಮಾಂತರ ಪ್ರದೇಶಗಳಲ್ಲಿ ಟರ್ಕಿಯ ಯುದ್ಧ ವಿಮಾನಗಳು ಸುಮಾರು 25 ಕಡೆ ದಾಳಿ ನಡೆಸಿವೆ ಎಂದು ವೀಕ್ಷಣಾಲಯ ತಿಳಿಸಿದೆ. ಟರ್ಕಿ 2016 ರಿಂದ ಸಿರಿಯಾದ ಮೇಲೆ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ. ಈಗಾಗಲೇ ಉತ್ತರದಲ್ಲಿ ಕೆಲವು ಪ್ರದೇಶಗಳನ್ನು ನಿಯಂತ್ರಿಸುತ್ತದೆ.

ಕಳೆದ ವಾರ ಇಸ್ತಾನ್‌ಬುಲ್‌ನ ಹೃದಯಭಾಗದಲ್ಲಿ ಬಾಂಬ್ ಸ್ಫೋಟಗೊಂಡ ಒಂದು ವಾರದ ನಂತರ ಈ ವೈಮಾನಿಕ ದಾಳಿ ನಡೆದಿದೆ. ಘಟನೆಯಲ್ಲಿ ಆರು ಜನರು ಸಾವನ್ನಪ್ಪಿ, 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:ಇಸ್ರೇಲ್​ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಸಿರಿಯಾ ಜನ

ABOUT THE AUTHOR

...view details