ಸ್ಯಾನ್ ಡಿಯಾಗೋ(ಕ್ಯಾಲಿಫೋರ್ನಿಯಾ):ಅತಿ ಹೆಚ್ಚು ವರ್ಷ ಬದುಕಿದ ಸಣ್ಣ ಇಲಿ ಈಗ ಗಿನ್ನಿಸ್ ವಿಶ್ವ ದಾಖಲೆ ಪುಟ ಸೇರಿದೆ. ಅಮೆರಿಕದ ಖ್ಯಾತ ನಟ ಪ್ಯಾಟ್ರಿಕ್ ಸ್ಟಿವರ್ಟ್ ಹೆಸರು ಪಡೆದ ಪ್ಯಾಟ್ ಹೆಸರಿನ ಪೆಸಿಫಿಕ್ ಪಾಕೆಟ್ ಮೌಸ್ ವಿಶ್ವದ ಹಿರಿಯ ಇಲಿ ಎನಿಸಿಕೊಂಡಿದೆ. ಈಗ ಇದರ ವಯಸ್ಸು 9 ವರ್ಷ ಮತ್ತು 209 ದಿನಗಳಾಗಿದೆ. ಮಾನವ ಆರೈಕೆಯಲ್ಲಿರುವ ಅತ್ಯಂತ ಹಳೆಯ ಜೀವಂತ ಇಲಿ ಎಂದು ಗಿನ್ನಿಸ್ ಅನುಮೋದನೆಯನ್ನು ಬುಧವಾರ ಪಡೆದುಕೊಂಡಿದೆ. ಈ ಬಗ್ಗೆ ಸ್ಯಾನ್ ಡಿಯಾಗೋ ಝೂ ವೈಲ್ಡ್‌ಲೈಫ್ ಅಲೈಯನ್ಸ್ ಪ್ರಮಾಣೀಕರಣದ ನಂತರ ಘೋಷಿಸಲಾಗಿದೆ.
ಚಿಕ್ಕ ಇಲಿ ಜಾತಿ:ಪ್ಯಾಟ್ ಜುಲೈ 14, 2013 ರಂದು ಸ್ಯಾನ್ ಡಿಯಾಗೋ ಮೃಗಾಲಯದ ಸಫಾರಿ ಪಾರ್ಕ್‌ನಲ್ಲಿ ಸಂರಕ್ಷಣಾ ತಳಿಯಲ್ಲಿ ಜನಿಸಿತು ಎಂದು ಸ್ಯಾನ್ ಡಿಯಾಗೋ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಪೆಸಿಫಿಕ್ ಪಾಕೆಟ್ ಮೌಸ್, ಮೂರು ಪೆನ್ನಿಗಳಷ್ಟು ತೂಗುತ್ತದೆ. ಇದು ಉತ್ತರ ಅಮೆರಿಕಾದಲ್ಲಿ ಚಿಕ್ಕ ಇಲಿ ಜಾತಿಯಾಗಿದೆ. ಇವು ಕರಾವಳಿಯ ಮರಳು ಪ್ರದೇಶದಲ್ಲಿ ವಾಸಿಸುತ್ತವೆ. ಬೀಜಗಳು ಮತ್ತು ಕೆಲವು ಕೀಟಗಳನ್ನು ತಿನ್ನುತ್ತದೆ. 1993ರವರೆಗೂ ಇದು ಅಳಿವಿನಂಚಿನಲ್ಲಿದೆ ಎಂದು ನಂಬಲಾಗಿತ್ತು ಎಂದು ವನ್ಯಜೀವಿ ಒಕ್ಕೂಟ ಹೇಳಿದೆ.
ಈ ಇಲಿಗಳು ಲಾಸ್ ಏಂಜಲೀಸ್‌ನಿಂದ ದಕ್ಷಿಣಕ್ಕೆ ಟಿಜುವಾನಾ ನದಿ ಕಣಿವೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದವು. ಆದರೆ 1932ರ ನಂತರ ಮಾನವ ಅತಿಕ್ರಮಣ ಮತ್ತು ಆವಾಸಸ್ಥಾನದ ನಾಶದಿಂದಾಗಿ ಇವುಗಳ ಸಂಖ್ಯೆಯು ಕುಸಿಯಿತು ಎಂದು ವನ್ಯಜೀವಿ ಒಕ್ಕೂಟ ಹೇಳಿದೆ. 1994ರಲ್ಲಿ ಆರೆಂಜ್ ಕೌಂಟಿಯ ಡಾನಾ ಪಾಯಿಂಟ್‌ನಲ್ಲಿ ಮರುಶೋಧಿಸಿದಾಗ ಈ ಇಲಿಗಳು 20 ವರ್ಷಗಳವರೆಗೆ ಅಳಿವಿನಂಚಿನಲ್ಲಿದೆ ಎಂದು ಹೇಳಲಾಗಿದೆ.