ಮಿಚಿಗನ್, ಅಮೆರಿಕ: ಕೆಲವರಿಗೆ ಗಂಡು ಮಗು ಬೇಕಾದರೆ ಹೆಣ್ಣು ಮಗು ಸಿಗುತ್ತದೆ. ಹೆಣ್ಣು ಬೇಕೆಂದರೆ ಗಂಡು ಮಗು ಸಿಗುತ್ತದೆ. ಆದರೆ ಇಲ್ಲೊಂದು ಕುಟುಂಬದಲ್ಲಿ ಹೆಣ್ಣು ಮಗುವಿನ ಜನನಕ್ಕಾಗಿ ವರ್ಷಗಟ್ಟಲೆ ಬಿಡಿ, ದಶಕಗಳೂ ಅಲ್ಲ, ಒಟ್ಟಿಗೆ ಒಂದು ಶತಮಾನಕ್ಕೂ ಹೆಚ್ಚು ಕಾಲ ಕಾದಿರುವ ಘಟನೆ ಅಮೆರಿಕದಲ್ಲಿ ಕಂಡು ಬಂದಿದೆ.
ಕ್ಯಾರೊಲಿನ್ - ಆಂಡ್ರ್ಯೂ ಕ್ಲಾರ್ಕ್, ಮಿಚಿಗನ್‌ನ ಕ್ಯಾಲೆಡೋನಿಯಾದಲ್ಲಿ ವಾಸಿಸುವ ದಂಪತಿ. ಆದರೆ, ಆಂಡ್ರ್ಯೂ ಕುಲದಲ್ಲಿ ಹೆಣ್ಣು ಮಗು ಹುಟ್ಟಿ ಸರಿಯಾಗಿ 138 ವರ್ಷಗಳು ಕಳೆದಿವೆ. 1885 ರಲ್ಲಿ ಒಂದು ಹೆಣ್ಣು ಮಗು ಜನಿಸಿತು. ಆ ಬಳಿಕ ಆಂಡ್ರ್ಯೂ ಕುಟುಂಬದಲ್ಲಿ ಬರೀ ಗಂಡು ಮಕ್ಕಳ ಜನನವೇ ಆಗಿದೆ. ಈ ಕಾರಣದಿಂದಾಗಿ ಪ್ರತಿ ಪೀಳಿಗೆಯು ಹೆಣ್ಣು ಮಗುವನ್ನು ಹೊಂದಲು ಆಂಡ್ರ್ಯೂ ಕುಟುಂಬ ಬಯಸುತ್ತ ಬಂದಿದೆ. ಅಂತಹ ಕ್ಷಣದಲ್ಲಿ ಕ್ಯಾರೋಲಿನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಅವರ ಕುಟುಂಬದಲ್ಲಿ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಎರಡು ಬಾರಿ ಗರ್ಭಪಾತ..!: ಇನ್ನು ಈ ದಂಪತಿಗೆ ಮೊದಲು ಗಂಡು ಮಗುವಾಗಿತ್ತು. 2020 ರಲ್ಲಿ ತಮ್ಮ ಎರಡನೇ ಮಗುವಿಗೆ ಗರ್ಭಿಣಿಯಾದ ಕ್ಯಾರೋಲಿನ್, 2021 ರ ಜನವರಿಯಲ್ಲಿ ಗರ್ಭಪಾತ ಹೊಂದಿದ್ದರು. ತದನಂತರ ಮತ್ತೆ ಗರ್ಭಪಾತವಾಯಿತು. ಇದರಿಂದಾಗಿ ಅವರು ತೀವ್ರ ಮಾನಸಿಕ ನೋವು ಅನುಭವಿಸಿ ಕಳೆದ ವರ್ಷ ಮತ್ತೆ ಗರ್ಭಿಣಿಯಾದರು. ಈ ಬಾರಿ ಹೆಣ್ಣು ಮಗು ಹುಟ್ಟುತ್ತದೆಯೇ? ಗಂಡು ಮಗು ಹುಟ್ಟುತ್ತದೆಯೇ? ಆಲೋಚಿಸುವುದನ್ನು ನಿಲ್ಲಿಸಿದಳು.. ತನ್ನ ಆರೋಗ್ಯದ ಕಡೆ ಗಮನ ಹರಿಸಿದಳು.. ಆರೋಗ್ಯವಂತ ಮಗುವನ್ನು ಹೊಂದಬೇಕೆಂದು ಬಯಸಿದಳು. ಆದರೆ ತನ್ನ ಆಸೆಯ ಜೊತೆಗೆ ಕ್ಯಾರೋಲಿನ್ ಆರೋಗ್ಯವಂತಹ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನಮ್ಮ ಮದುವೆಯಾಗಿ ಹತ್ತು ವರ್ಷಗಳಾಗಿವೆ. ಡೇಟಿಂಗ್ ಮಾಡುವಾಗ ಆಂಡ್ರ್ಯೂ ನನಗೊಂದು ವಿಷಯ ಹೇಳಿದರು. ಆಂಡ್ರ್ಯೂ ಅವರ ಸಂಬಂಧಿಕರಿಗೆ ಹೆಣ್ಣುಮಕ್ಕಳಿದ್ದರೂ.. ಶತಮಾನ ಕಳೆದ್ರೂ ನಮ್ಮ ಕುಲದಲ್ಲಿ ಹೆಣ್ಣು ಮಕ್ಕಳು ಜನಿಸಿಲ್ಲ ಎಂದು ಹೇಳಿದಾಗ ನನಗೆ ಆಘಾತವಾಯಿತು. ಆದರೆ, ಇಷ್ಟು ವರ್ಷವಾದರೂ ಹೆಣ್ಣು ಮಗುವಾಗದೇ ಇದ್ದಾಗ ದೇವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾನೆ ಎಂದರ್ಥವಾಯಿತು. ನನಗೆ ಮೊದಲು ಗಂಡು ಮಗು ಜನನದ ಬಳಿಕ ನಾನು ಎರಡು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ. ಬಳಿಕ ನಾನು ಆರೋಗ್ಯಕರ ಮಗುವಿಗೆ ಜನ್ಮ ನೀಡಬೇಕು ಎಂದು ಬಯಸಿದ್ದೆ. ಆದರೆ, ನಮಗೆ ಹೆಣ್ಣು ಮಗು ಜನಿಸಿದ್ದು, ಖುಷಿಯನ್ನು ಇಮ್ಮಡಿಗೊಳಿಸಿತು ಎಂದು ಕರೋಲಿನ್ ಹೇಳಿದ್ದಾರೆ