ವಾಷಿಂಗ್ಟನ್: ನಾಲ್ವರು ಇಂಡೋ ಅಮೆರಿಕನ್ ಮಹಿಳೆಯರ ಗುಂಪಿನ ಮೇಲೆ ಮೆಕ್ಸಿಕನ್ ಅಮೆರಿಕನ್ ಮಹಿಳೆಯೊಬ್ಬರು ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದಂತೆ ಟೆಕ್ಸಾಸ್ ಪೊಲೀಸರು ಗುರುವಾರ ಮಹಿಳೆಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ.
ವಿಡಿಯೋದಲ್ಲಿ ಮೆಕ್ಸಿಕನ್ ಮಹಿಳೆಯು ಭಾರತೀಯರನ್ನು ನಿಂದಿಸಿರುವುದಲ್ಲೇ ಹಲ್ಲೆ ಕೂಡ ನಡೆಸಿದ್ದಾರೆ. ಜೊತೆಗೆ ನೀವು ಭಾರತಕ್ಕೆ ವಾಪಸ್ ಹೋಗಿ. ನಾನು ಭಾರತೀಯರನ್ನು ದ್ವೇಷಿಸುತ್ತೇನೆ. ಎಲ್ಲ ಭಾರತೀಯರು ಉತ್ತಮ ಜೀವನ ನಡೆಸಲು ಅಮೆರಿಕಕ್ಕೆ ಬರುತ್ತಾರೆ ಎಂದು ನಿಂದಿಸಿದ್ದಾರೆ. ಮೆಕ್ಸಿಕನ್ ಅಮೆರಿಕನ್ ಮಹಿಳೆಯ ಈ ವರ್ತನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಕೈ ಮುರಿದ ವ್ಯಕ್ತಿ ಮೇಲೆ ಹಲ್ಲೆ: ವಿಡಿಯೋ ವೈರಲ್ ಬೆನ್ನಲ್ಲೇ ಹೆಚ್ಚಿನ ತನಿಖೆಗೆ ಸೂಚಿಸಿದ ಎಸ್ಪಿ