ಕರ್ನಾಟಕ

karnataka

ETV Bharat / international

ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ರಿಪುದಮನ್ ಸಿಂಗ್ ಮಲಿಕ್ ಹತ್ಯೆ

ಗುರುವಾರ ಬೆಳಗ್ಗೆ ಕೆನಡಾದಲ್ಲಿ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ರಿಪುದಮನ್ ಸಿಂಗ್ ಮಲಿಕ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Ripudaman Singh Malik
ರಿಪುದಮನ್ ಸಿಂಗ್ ಮಲಿಕ್

By

Published : Jul 15, 2022, 9:53 AM IST

ವ್ಯಾಂಕೋವರ್‌/ಕೆನಡಾ: ಖಾಲ್ಸಾ ಕ್ರೆಡಿಟ್ ಯೂನಿಯನ್ ಸಂಸ್ಥಾಪಕ ಮತ್ತು 1985 ರ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ರಿಪುದಮನ್ ಸಿಂಗ್ ಮಲಿಕ್‌ನನ್ನು ಗುರುವಾರ ಬೆಳಗ್ಗೆ ಕೆನಡಾದ ವ್ಯಾಂಕೋವರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಜೂನ್ 23, 1985 ರಂದು ಮಾಂಟ್ರಿಯಲ್‌ನಿಂದ ದೆಹಲಿಗೆ ಹೊರಟಿದ್ದ ಬೋಯಿಂಗ್ 747 ಕನಿಷ್ಕ, ಏರ್ ಇಂಡಿಯಾ ವಿಮಾನ 182ರ ಸ್ಫೋಟದ ಮೂವರು ಪ್ರಮುಖ ಆರೋಪಿಗಳಲ್ಲಿ ಮಲಿಕ್, ಇಂದರ್‌ಜೀತ್ ಸಿಂಗ್ ರಿಯಾತ್ ಮತ್ತು ಅಜೈಬ್ ಸಿಂಗ್ ಬಗ್ರಿ ಇದ್ದರು. ಘಟನೆಯಲ್ಲಿ ಎಲ್ಲಾ 329 ಮಂದಿ ಪ್ರಯಾಣಿಕರು ಸಾವನ್ನಪ್ಪಿದರು.

ಒಂದು ದಶಕದ ಕಾಲ ರಿಪುದಮನ್ ಸಿಂಗ್ ಮಲಿಕ್ ಹೆಸರು ಭಾರತೀಯ ಬ್ಲಾಕ್​ ಲೀಸ್ಟ್​ನಲ್ಲಿತ್ತು. ಅವರಿಗೆ 2020 ರಲ್ಲಿ ಏಕ ಪ್ರವೇಶ ವೀಸಾ ನೀಡಲಾಗಿತ್ತು. ಇತ್ತೀಚೆಗೆ 2022 ರಲ್ಲಿ ಬಹು ವೀಸಾ ಪಡೆದು ಆಂಧ್ರ ಪ್ರದೇಶ, ದೆಹಲಿ, ಪಂಜಾಬ್ ಮತ್ತು ಮಹಾರಾಷ್ಟ್ರಕ್ಕೆ ಮೇ ತಿಂಗಳಲ್ಲಿ ತೀರ್ಥಯಾತ್ರೆ ಮಾಡಿದ್ದರು.

ಇದನ್ನೂ ಓದಿ:ಪಿಎಸ್​ಐ ಪರೀಕ್ಷಾ ಅಕ್ರಮ ಕೊಲೆಯಂತಹ ಅಪರಾಧಕ್ಕಿಂತಲೂ ಹೇಯ ಕೃತ್ಯ: ಹೈಕೋರ್ಟ್

ABOUT THE AUTHOR

...view details