ನ್ಯೂಯಾರ್ಕ್: ಬ್ರಿಟನ್ ರಾಜಕುಮಾರಿ ಡಯಾನಾ ಅಪಘಾತದಲ್ಲಿ ಸಾವನ್ನಪ್ಪಿದ ಎರಡು ದಶಕಗಳಿಗೂ ಹೆಚ್ಚು ಸಮಯ ಆದರೂ, ಆಕೆಯ ನೆನಪು ಮಾತ್ರ ಜನರಲ್ಲಿ ಅಚ್ಚಳಿಯದೇ ಇದೆ. ಆಕೆಯ ಫ್ಯಾಷನ್ ಸೆನ್ಸ್ ಮತ್ತು ಸೌಂದರ್ಯ ಇಂದಿಗೂ ಜನರನ್ನು ಬೆರುಗುಗೊಳಿಸುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಆಕೆ ಬಳಕೆ ಮಾಡುತ್ತಿದ್ದ ವಸ್ತುಗಳನ್ನು ಜನರು ಇಂದಿಗೂ ಅಭಿಮಾನದಿಂದ ಮುಗಿಬಿದ್ದು ತೆಗೆದುಕೊಳ್ಳುತ್ತಾರೆ. ರಾಜಕುಮಾರಿ ಡಯಾನಾ ಧರಿಸುತ್ತಿದ್ದ ಐಕಾನಿಕ್ ಕೆಂಪು ಬಣ್ಣದ ಬ್ಲಾಕ್ ಶೀಪ್ ಸ್ವೆಟರ್ ಒಂದು ಇದೀಗ ಬರೋಬ್ಬರಿ 1.1 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಗಳಲ್ಲಿ 9 ಕೋಟಿ ರೂ.ಗೆ ಹರಾಜಾಗಿದೆ.
ರಾಜಕುಮಾರಿ ಡಯಾನಾ ಧರಿಸುತ್ತಿದ್ದ ಕೆಂಪು ಬಣ್ಣದ ಬಿಳಿ ಕುರಿಗಳ ಮಧ್ಯೆ ಆಕರ್ಷಿಣಿಯವಾಗಿದ್ದ ಒಂದು ಕುರಿಯ ವಿನ್ಯಾಸಿತ ಸ್ವೇಟರ್ ಅನ್ನು ನ್ಯೂಯಾರ್ಕ್ನಲ್ಲಿ ಹರಾಜು ಮಾಡಲಾಗಿದೆ. ಈ ವೇಳೆ ಇದನ್ನು 1.1 ಮಿಲಿಯನ್ ಡಾಲರ್ ಕೊಟ್ಟು ಖರೀದಿಸಲಾಗಿದೆ ಎಂದು ಸೋಥೆಬಿಸ್ ತಿಳಿಸಿದ್ದಾರೆ
ಈ ಕುರಿತು ಪೋಸ್ಟ್ ಮಾಡಿರುವ ಹರಾಜು ಸಂಸ್ಥೆ, ನಮ್ಮ ಫ್ಯಾಷನ್ ಐಕಾನ್ ಹರಾಜಿನಲ್ಲಿ ರಾಜಕುಮಾರಿ ಡಯಾನಾ ಅವರ ಐತಿಹಾಸಿನ ಕಪ್ಪು ಕುರಿಯ ಬೆಚ್ಚಗಿನ ಮತ್ತು ಅದ್ಬುತ ಸ್ವೆಟರ್ ಬಿಡ್ಡಿಂಗ್ನಲ್ಲಿ 1.1 ಮಿಲಿಯನ್ ಡಾಲರ್ಗೆ ಮಾರಾಟ ಆಗಿದೆ ಎಂದಿದ್ದಾರೆ.