ಕರ್ನಾಟಕ

karnataka

ETV Bharat / international

ಅನಧಿಕೃತ ಚಿನ್ನದ ಗಣಿಯಲ್ಲಿ ಕುಸಿತ: 12 ಮಹಿಳೆಯರ ದುರ್ಮರಣ

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿರುವ ಮೆಡಾನ್ ಎಂಬಲ್ಲಿ ಕಾನೂನುಬಾಹಿರವಾಗಿ ನಡೆಸುತ್ತಿದ್ದ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು 12 ಮಂದಿ ಮಹಿಳೆಯರು ಸಾವನ್ನಪ್ಪಿದ್ದಾರೆ.

By

Published : Apr 29, 2022, 11:08 AM IST

ಇಂಡೋನೇಷ್ಯಾದ ಅನಧಿಕೃತ ಚಿನ್ನದ ಗಣಿಯಲ್ಲಿ ಕುಸಿತ: 12 ಮಹಿಳೆಯರು ದುರ್ಮರಣ
ಪ್ರಾತಿನಿಧಿಕ ಚಿತ್ರ

ಸುಮಾತ್ರಾ(ಇಂಡೋನೇಷ್ಯಾ):ಕಾನೂನುಬಾಹಿರವಾಗಿ ನಡೆಸುತ್ತಿದ್ದ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು 12 ಮಂದಿ ಮಹಿಳೆಯರು ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿರುವ ಮೆಡಾನ್ ಎಂಬಲ್ಲಿ ನಡೆದಿದೆ. ಮಣ್ಣಿನೊಳಗೆ ಹೂತುಹೋಗಿದ್ದ ಶವಗಳನ್ನು ರಕ್ಷಣಾ ಪಡೆಗಳು ಹೊರತೆಗೆದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉತ್ತರ ಸುಮಾತ್ರದ ಮಾಂಡೈಲಿಂಗ್ ನಟಾಲ್ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಸಣ್ಣ ಪ್ರಮಾಣದಲ್ಲಿ ಕಾನೂನು ಬಾಹಿರವಾಗಿ ಚಿನ್ನದ ಗಣಿಗಾರಿಕೆ ನಡೆಸಲಾಗುತ್ತಿತ್ತು. 2 ಮೀಟರ್ (6.5 ಅಡಿ) ಆಳದ ಹೊಂಡದಲ್ಲಿ ಸುಮಾರು 14 ಮಹಿಳೆಯರು ಗುರುವಾರ ಚಿನ್ನ ಗಣಿಗಾರಿಕೆಯಲ್ಲಿ ತೊಡಗಿದ್ದರು. ಈ ವೇಳೆ, ಭೂಕುಸಿತವಾಗಿ ಅವರಲ್ಲಿ 12 ಮಂದಿ ಸಮಾಧಿಯಾಗಿದ್ದಾರೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದು, ಅವರನ್ನು ರಕ್ಷಿಸಿ, ಚಿಕಿತ್ಸೆಗೆ ದಾಖಲಿಸಲಾಗಿದೆ.

ಭೂಕುಸಿತ, ಪ್ರವಾಹ ಮುಂತಾದ ಅಪಾಯಗಳನ್ನು ಇಲ್ಲಿನ ಚಿನ್ನದ ಗಣಿಗಳು ಎದುರಿಸುತ್ತಿರುತ್ತವೆ. ಇದರ ಜೊತೆಗೆ ಚಿನ್ನದ ಅದಿರು ಸಂಸ್ಕರಣೆಗೆ ಹೆಚ್ಚು ವಿಷಕಾರಿಯಾದ ಪಾದರಸ ಮತ್ತು ಸೈನೈಡ್ ಅನ್ನು ಬಳಸಲಾಗುತ್ತದೆ. ಇದೂ ಕೂಡಾ ಅಲ್ಲಿನ ಕಾರ್ಮಿಕರಿಗೆ ಸಮಸ್ಯೆ ತಂದೊಡ್ಡುತ್ತದೆ. ಇಂಡೋನೇಷ್ಯಾದಲ್ಲಿ ಫೆಬ್ರವರಿ 2019ರಲ್ಲಿ ಇಂತಹುದ್ದೇ ಅವಘಡ ಸಂಭವಿಸಿತ್ತು. ಉತ್ತರ ಸುಲವೆಸಿ ಪ್ರಾಂತ್ಯದ ಚಿನ್ನದ ಗಣಿ ಕುಸಿದು ಸುಮಾರು 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಇದನ್ನೂ ಓದಿ:ಚೋರ್.. ಚೋರ್: ಮುಸ್ಲಿಮರ ಪವಿತ್ರ ಕ್ಷೇತ್ರ ಮದೀನಾದಲ್ಲಿ ಪಾಕ್ ಪ್ರಧಾನಿ - ನಿಯೋಗದ ವಿರುದ್ಧ ಘೋಷಣೆ

ABOUT THE AUTHOR

...view details