ಟೆಲ್ ಅವಿವ್ (ಇಸ್ರೇಲ್) : ಇಸ್ರೇಲ್ ಭದ್ರತಾ ಪಡೆಗಳು ವೈಮಾನಿಕ ದಾಳಿ ನಡೆಸಿ ಪ್ಯಾಲೆಸ್ಟೈನ್ನ ಪಶ್ಚಿಮ ದಂಡೆ ಪ್ರದೇಶದಲ್ಲಿ ನೆಲೆಗೊಂಡಿರುವ ಅಲ್ ಅನ್ಸಾರ್ ಮಸೀದಿಯನ್ನು ಸ್ಫೋಟಿಸಿವೆ. ಈ ಮಸೀದಿಯ ಕೆಳಗಿರುವ ನೆಲಮಾಳಿಗೆಯಲ್ಲಿ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಹಮಾಸ್ ಮತ್ತು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ನ ಭಯೋತ್ಪಾದಕರು ಇಸ್ರೇಲ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿ ಮದ್ದುಗುಂಡುಗಳನ್ನು ಸಂಗ್ರಹಿಸಿದ್ದರು ಎಂದು ಐಡಿಎಫ್ ತಿಳಿಸಿದೆ.
ಈ ಕುರಿತು ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲಿ ಭದ್ರತಾ ಪಡೆಗಳು, ಅಲ್ ಅನ್ಸಾರ್ ಮಸೀದಿಯು ಹಮಾಸ್‌ನ ಕಮಾಂಡ್ ಸೆಂಟರ್ ಎಂದು ವಿವರಿಸಿದೆ. ಮಾಹಿತಿ ಪ್ರಕಾರ, ಜುಲೈ 2023 ರಿಂದ ಇಸ್ರೇಲ್ ಮೇಲೆ ದಾಳಿ ನಡೆಸಲು ಈ ಮಸೀದಿಯಲ್ಲಿ ಯೋಜನೆ ರೂಪಿಸಲಾಗುತ್ತಿತ್ತು ಎಂದು ತಿಳಿಸಿದೆ. ಈ ಸಂಬಂಧ ಇಸ್ರೇಲಿ ಭದ್ರತಾ ಪಡೆಗಳು ಹಲವು ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿವೆ. ಈ ಕೆಲವು ಚಿತ್ರಗಳು ಮಸೀದಿಯೊಳಗೆ ಇರಿಸಲಾಗಿರುವ ಮದ್ದುಗುಂಡುಗಳನ್ನು ತೋರಿಸುತ್ತಿದ್ದರೆ, ಮತ್ತೊಂದು ಫೋಟೋದಲ್ಲಿ ನೆಲಮಾಳಿಗೆಯ ದಾರಿಯನ್ನು ನೋಡಬಹುದು. ಜೊತೆಗೆ, ನೆಲಮಾಳಿಗೆಯಿಂದ ಮದ್ದುಗುಂಡುಗಳನ್ನು ತರಲು ಮಸೀದಿಯೊಳಗೆ ಸಣ್ಣ ಕ್ರೇನ್ ಅನ್ನು ಸಹ ಅಳವಡಿಸಲಾಗಿದೆ.
ಮಸೀದಿಯ ಬಹುಭಾಗ ಕುಸಿತ :ಮಸೀದಿಯಲ್ಲಿ ಅಪಾರ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ. ಜೊತೆಗೆ ಬಂಕರ್‌ಗಳನ್ನು ನಿರ್ಮಿಸಲಾಗಿದೆ. ದಾಳಿಗೆ ಮಸೀದಿಯ ಬಹುಭಾಗ ಕುಸಿದಿದ್ದು, ಆಂಬ್ಯುಲೆನ್ಸ್‌ಗಳು ಹತ್ತಿರದಲ್ಲಿರುವುದನ್ನು ಗಮನಿಸಬಹುದು. ಜನರು ಅವಶೇಷಗಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ :ಇಸ್ರೇಲ್, ಪ್ಯಾಲೆಸ್ತೈನ್ನಲ್ಲಿ ಶಾಂತಿ ನೆಲೆಸಬೇಕೆಂದು ಆಗ್ರಹ : ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ