ಕರ್ನಾಟಕ

karnataka

ETV Bharat / international

ಚೀನಾ ಹಿಂದಿಕ್ಕಿದ ಭಾರತ.. ಇದೀಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾದ ಇಂಡಿಯಾ

ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. 1428.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಭಾರತೀಯರು, 1425.7 ಮಿಲಿಯನ್ ನೋಂದಾಯಿತ ಜನಸಂಖ್ಯೆ ಹೊಂದಿದ ಚೀನಾಕ್ಕಿಂತ ಮುಂದೆ ಇದ್ದಾರೆ.

India  China
ಭಾರತ ಮತ್ತು ಚೀನಾ

By

Published : Apr 19, 2023, 5:42 PM IST

ಹೈದರಾಬಾದ್ :ವಿಶ್ವಸಂಸ್ಥೆಯ ಇತ್ತೀಚಿನ ಅಂಕಿ - ಅಂಶಗಳ ಪ್ರಕಾರ, ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಈಗ ಭಾರತವು 1428.6 (142.86 ಕೋಟಿ) ಮಿಲಿಯನ್ ಜನಸಂಖ್ಯೆ ಹೊಂದಿದೆ. ಚೀನಾ ದೇಶ ಜನಸಂಖ್ಯೆ 1425.7 ಮಿಲಿಯನ್‌( 142.57 ಕೋಟಿ) ಇದೆ.

ಒಂದು ಶತಕೋಟಿಗೂ ಹೆಚ್ಚು ಬೆಳೆದ ಭಾರತದ ಜನಸಂಖ್ಯೆ:ವಿಶ್ವಸಂಸ್ಥೆಯು 1950ರಲ್ಲಿ ಜನಸಂಖ್ಯೆಯ ಡೇಟಾವನ್ನು ಸಂಗ್ರಹಿಸಲು ಪ್ರಾರಂಭಿಸಿದ ನಂತರ, ಭಾರತದ ಜನಸಂಖ್ಯೆಯು ಒಂದು ಶತಕೋಟಿಗೂ ಹೆಚ್ಚು ಬೆಳೆದಿದೆ. ಚೀನಾದ ಜನಸಂಖ್ಯೆಯು ಕಳೆದ ವರ್ಷ 1960ರ ನಂತರ ಮೊದಲ ಬಾರಿಗೆ ಕುಗ್ಗಿತ್ತು. ಚೀನಾದ ಜನನ ದರಗಳು ಕುಸಿದಿವೆ. ಅದರ ಉದ್ಯೋಗಿಗಳ ವಯಸ್ಸಿನ ಪ್ರಮಾಣ ಹೆಚ್ಚಾದ ಕಾರಣ. 2016ರಲ್ಲಿ ಬೀಜಿಂಗ್ ತನ್ನ ಕಟ್ಟುನಿಟ್ಟಾದ "ಒಂದು ಮಗುವಿನ ನೀತಿಯನ್ನು" ಕೊನೆಗೊಳಿಸಿತು. 1980ರ ದಶಕದಲ್ಲಿ ಅಧಿಕ ಜನಸಂಖ್ಯೆಯ ಭಯದ ನಡುವೆ ಈ ನಿಯಮ ವಿಧಿಸಲಾಗಿತ್ತು. ಮತ್ತು 2021ರಲ್ಲಿ ದಂಪತಿಗಳು ಮೂರು ಮಕ್ಕಳನ್ನು ಹೊಂದಲು ಅವಕಾಶವನ್ನು ನೀಡಿತ್ತು.

8.045 ಶತಕೋಟಿಗೆ ತಲುಪಲಿದೆ ವಿಶ್ವದ ಜನಸಂಖ್ಯೆ: ವಿಶ್ವಸಂಸ್ಥೆ ಮಾಹಿತಿಯ ಪ್ರಕಾರ, 2023ರ ಮಧ್ಯದ ವೇಳೆಗೆ ವಿಶ್ವದ ಜನಸಂಖ್ಯೆಯು 8.045 ಶತಕೋಟಿ( 800 ಕೋಟಿ)ಯನ್ನು ತಲುಪಲಿದೆ. ಎರಡನೇ ಅತಿದೊಡ್ಡ ಖಂಡವಾದ ಆಫ್ರಿಕಾದಲ್ಲಿ, ಜನಸಂಖ್ಯೆಯು 2100ರ ವೇಳೆಗೆ 1.4 ಶತಕೋಟಿಯಿಂದ 3.9 ಶತಕೋಟಿಗೆ ಏರುವ ನಿರೀಕ್ಷೆಯಿದೆ. ಪ್ರಪಂಚದಲ್ಲಿ 10 ದಶಲಕ್ಷಕ್ಕೂ ಹೆಚ್ಚು ನಿವಾಸಿಗಳನ್ನು ಹೊಂದಿರುವ ಎಂಟು ದೇಶಗಳಿವೆ. ಈ ಎಲ್ಲ ದೇಶಗಳು, ಹೆಚ್ಚಾಗಿ ಯುರೋಪ್​ನಲ್ಲಿ ಕಳೆದ ದಶಕದಲ್ಲಿ ಅವರ ಜನಸಂಖ್ಯೆಯು ಕುಗ್ಗುತ್ತಿದೆ. ವಯಸ್ಸಾದ ಸಮಸ್ಯೆಯಿಂದಾಗಿ ಜಪಾನ್‌ನ ಜನಸಂಖ್ಯೆ ಸಹ ಕುಸಿದಿದೆ. ದ್ವೀಪ ದೇಶವು 2011 ಮತ್ತು 2021ರ ನಡುವೆ ಮೂರು ಮಿಲಿಯನ್ ನಿವಾಸಿಗಳನ್ನು ಕಳೆದು ಕೊಂಡಿದೆ.

ವಿಶ್ವ ಜನಸಂಖ್ಯೆಯ ನಿರೀಕ್ಷೆಗಳು:ವಿಶ್ವಸಂಸ್ಥೆ ಪ್ರಕಾರ, ಇಡೀ ವಿಶ್ವದ ಜನಸಂಖ್ಯೆಯು 10.4 ಶತಕೋಟಿಗೆ ಏರುತ್ತದೆ ಮತ್ತು 2090ರ ದಶಕದಲ್ಲಿ ಇಳಿಮುಖವಾಗಲಿದೆ ಎಂದು ಅಂದಾಜಿಸಲಾಗಿದೆ. ಭವಿಷ್ಯದ ಜನಸಂಖ್ಯಾ ಬೆಳವಣಿಗೆಯು ಭವಿಷ್ಯದ ಫಲವತ್ತತೆಯ ದರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿಶ್ವ ಜನಸಂಖ್ಯೆಯ ನಿರೀಕ್ಷೆಗಳು (2022) ಜಾಗತಿಕ ಫಲವತ್ತತೆಯು 2021ರಲ್ಲಿ ಪ್ರತಿ ಮಹಿಳೆಗೆ 2.3 ಮಕ್ಕಳಿಂದ 2050ರಲ್ಲಿ 2.1ಕ್ಕೆ ಇಳಿಯುತ್ತದೆ ಎಂದು ಊಹಿಸುತ್ತದೆ. ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಜಾಗತಿಕವಾಗಿ ಜೀವಿತಾವಧಿಯಲ್ಲಿ ಗಮನಾರ್ಹ ಲಾಭಗಳನ್ನು ಸಾಧಿಸಲಾಗಿದೆ. 2019ರಲ್ಲಿ ಜನನದ ಸಮಯದಲ್ಲಿ ಜೀವಿತಾವಧಿಯು 72.8 ವರ್ಷಗಳು ಇತ್ತು. 2050ರಲ್ಲಿ 77.2 ವರ್ಷಗಳು ಏರಿಕೆಯಾಗುವ ನಿರೀಕ್ಷೆಯಿದೆ.

ಅಂತಾರಾಷ್ಟ್ರೀಯ ವಲಸೆ:ಅಂತಾರಾಷ್ಟ್ರೀಯ ವಲಸೆಯು ಜನನ ಅಥವಾ ಮರಣಕ್ಕಿಂತ ಜನಸಂಖ್ಯೆಯ ಬದಲಾವಣೆಯ ಒಂದು ಚಿಕ್ಕ ಅಂಶವಾಗಿದೆ. ಆದರೆ, ಕೆಲವು ದೇಶಗಳು ಮತ್ತು ಪ್ರದೇಶಗಳಲ್ಲಿ, ಜನಸಂಖ್ಯೆಯ ಗಾತ್ರದ ಮೇಲೆ ಅದರ ಪ್ರಭಾವವು ಗಮನಾರ್ಹವಾಗಿ ಆಗಿದೆ. 2010 ಮತ್ತು 2021ರ ನಡುವೆ ಹದಿನೇಳು ದೇಶಗಳು ಅಥವಾ ಪ್ರದೇಶಗಳು ಒಂದು ದಶಲಕ್ಷಕ್ಕೂ ಹೆಚ್ಚು ವಲಸಿಗರ ನಿವ್ವಳ ಒಳಹರಿವು ಆಗುವ ನಿರೀಕ್ಷೆಯಿದೆ. ಆದರೆ, ಹತ್ತು ದೇಶಗಳಲ್ಲಿ ಇದೇ ಪ್ರಮಾಣದ ನಿವ್ವಳ ಹೊರಹರಿವು ಕಾಣಲು ಸಾಧ್ಯವಾಗುತ್ತದೆ.

ಇದನ್ನೂ ಓದಿ:ಸುಡಾನ್​ನಲ್ಲಿನ ಭಾರತೀಯರ ಸುರಕ್ಷತೆಗೆ ಮುಂದಾದ ಭಾರತ: ವಿವಿಧ ದೇಶಗಳೊಂದಿಗೆ ಸಂಪರ್ಕ

ABOUT THE AUTHOR

...view details