ವಾಷಿಂಗ್ಟನ್(ಅಮೆರಿಕ): ಭಾರತವು ರೋಮಾಂಚಕ ಪ್ರಜಾಪ್ರಭುತ್ವವಾಗಿದೆ ಮತ್ತು ನವದೆಹಲಿಗೆ ಹೋದ ಯಾರಾದರು ಅದನ್ನು ಸ್ವತಃ ನೋಡಬಹುದು ಎಂದು ಅಮೆರಿಕಾದ ಶ್ವೇತಭವನ ಸೋಮಾವಾರ ಹೇಳಿದೆ. ಈ ಹೇಳಿಕೆಯಿಂದ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಇರುವ ಕಳವಳವನ್ನು ತಳ್ಳಿ ಹಾಕಿದಂತೆ ಕಂಡು ಬಂದಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುನ್ನ ಭಾರತದ ಪ್ರಜಾಪ್ರಭುತ್ವ, ಇತರ ರಾಷ್ಟ್ರಗಳಿಗೆ ಭಾರತದ ಅಗತ್ಯತೆ ಬಗ್ಗೆ ಅಮೆರಿಕ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಇಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಭಾರತದ ಪ್ರಜಾಪ್ರಭುತ್ವದ ಕುರಿತು ತಿಳಿಸಿದ್ದಾರೆ. 'ನಿಮಗೆ ತಿಳಿದಿರುವ ಯಾರಾದರೂ, ನವದೆಹಲಿಗೆ ಹೋದರೆ ಪ್ರಜಾಪ್ರಭುತ್ವದ ರೋಮಾಂಚಕತೆ, ಅದ್ಭುತವನ್ನು ಸ್ವತಃ ನೋಡಬಹುದು. ಮತ್ತು ಇದರಿಂದ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಶಕ್ತಿ ಮತ್ತು ಆರೋಗ್ಯ, ಅಭಿವೃದ್ದಿಯು ಚರ್ಚೆಯ ಭಾಗವಾಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ' ಎಂದು ಹೇಳಿದ್ದಾರೆ.‘
ಇದನ್ನೂ ಓದಿ:ಶ್ವೇತಭವನದ ಮೇಲೆ ಅನುಮಾನಾಸ್ಪದ ಜೆಟ್ ಹಾರಾಟ: ಬೆನ್ನಟ್ಟಿದ ಎಫ್16ರ ವೇಗದ ಸದ್ದಿಗೆ ಬೆಚ್ಚಿಬಿದ್ದ ಜನ!!
ಮುಂದುವರೆದು ಮಾಧ್ಯಮದವರ ಪ್ರಶ್ನೆಗೆ ಕಿರ್ಬಿಯವರು, ನಾವು ಎಂದಿಗೂ ನಮ್ಮ ಸ್ನೇಹಿತರೊಡನೆ ನಮ್ಮಲ್ಲಿ ಇರುವ ಕಳವಳ ವ್ಯಕ್ತಪಡಿಸಲು, ಹೇಳಿಕೊಳ್ಳಲು ನಾಚಿಕೆ ಪಡುವುದಿಲ್ಲ. ಅದೇ ರೀತಿ ಈ ಭಾರತದ ಭೇಟಿಯಿಂದ ನಿಜವಾಗಿಯೂ ಈಗ ಇರುವ ಸಂಬಂಧವನ್ನು ಮುಂದುವರಿಸುವುದರ ಬಗ್ಗೆ ಮತ್ತು ಮುಂದೆ ಆಳವಾದ, ಬಲವಾದ ಪಾಲುದಾರಿಕೆ ಮತ್ತು ಸ್ನೇಹಕ್ಕಾಗಿ ನಾವು ಆಶಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.