ವಿಶ್ವಸಂಸ್ಥೆ:ಹಲವು ನಿರ್ಬಂಧಕ್ಕೊಳಗಾದ ರಾಷ್ಟ್ರ, ಸಂಘಟನೆಗಳಿಗೆ ಮಾನವೀಯ ಆಧಾರದ ಮೇಲೆ ನೆರವು ನೀಡುವ ವಿಶ್ವಸಂಸ್ಥೆಯ ನಿರ್ಧಾರದಿಂದ ಭಾರತ ದೂರವುಳಿದಿದೆ. ಅಮೆರಿಕ ಮತ್ತು ಐರ್ಲೆಂಡ್ ವಿಶ್ವಸಂಸ್ಥೆಯಲ್ಲಿ ಮಂಡಿಸಿದ ನಿರ್ಣಯದ ಮತದಾನದಲ್ಲಿ ಭಾರತ ಮತ ಹಾಕಿಲ್ಲ. ಈ ನಿರ್ಣಯದ ಮೇಲೆ 15 ಕೌನ್ಸಿಲ್ ಸದಸ್ಯರಲ್ಲಿ 14 ಸದಸ್ಯರು ಪರವಾಗಿ ಮತ ಚಲಾಯಿಸಿದರು. ಭಾರತ ಮಾತ್ರ ಏಕೈಕ ರಾಷ್ಟ್ರವಾಗಿ ಗೈರಾಯಿತು.
ಬಳಿಕ ವಿವರಣೆ ನೀಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ರುಚಿರಾ ಕಾಂಬೋಜ್ ಅವರು, 1267 ರ ಅಡಿ ನಿಷೇಧಿತ ಸಂಘಟನೆ, ರಾಷ್ಟ್ರಗಳಿಗೆ ಮಾನವೀಯ ನೆರವು ನೀಡುವಾಗ ಭಾರತ ಎಚ್ಚರಿಕೆ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತದೆ. ಭಯೋತ್ಪಾದಕರ ಸ್ವರ್ಗವೆಂದು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಪ್ರದೇಶಗಳಲ್ಲಿ ಈಗಲೂ ಅವರು ರಾಜಾರೋಷವಾಗಿ ಬದುಕುತ್ತಿದ್ದಾರೆ. ಹೀಗಾಗಿ ಅವರಿಗೆ ನೆರವು ನೀಡುವ ಅಗತ್ಯವಿಲ್ಲ ಎಂದು ಪಾಕಿಸ್ತಾನದ ಹೆಸರೇಳದೇ ಕುಟುಕಿದರು.