ಕರ್ನಾಟಕ

karnataka

ETV Bharat / international

ಪ್ರತಿಪಕ್ಷಗಳೊಂದಿಗೆ MQM ಒಪ್ಪಂದ: ಅಧಿಕಾರ ಕಳೆದುಕೊಳ್ಳುತ್ತಾರಾ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌?

ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನ ಪ್ರಮುಖ ಮಿತ್ರ ಪಕ್ಷವಾದ (ಎಂಕ್ಯೂಎಂ) ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ ಪಕ್ಷವು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯೊಂದಿಗೆ (ಪಿಪಿಪಿ) ಒಪ್ಪಂದ ಮಾಡಿಕೊಂಡ ಬಳಿಕ ಪಿಟಿಐ ಭಾರಿ ಹೊಡೆತ ಅನುಭವಿಸುವಂತಾಗಿದೆ.

ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌

By

Published : Mar 30, 2022, 10:50 AM IST

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನ ಪ್ರಮುಖ ಮಿತ್ರ ಪಕ್ಷವಾದ (ಎಂಕ್ಯೂಎಂ) ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ ಪಕ್ಷವು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯೊಂದಿಗೆ (ಪಿಪಿಪಿ) ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಬಳಿಕ ಪಿಟಿಐ ಭಾರಿ ಹೊಡೆತ ಅನುಭವಿಸುವಂತಾಗಿದೆ.

ಇನ್ನೊಂದೆಡೆ, MQM ಮತ್ತು PPP, CEC ಪಕ್ಷಗಳ ಒಪ್ಪಂದದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ವಿವರಗಳನ್ನು ಹಂಚಿಕೊಳ್ಳುತ್ತೇವೆ ಎಂದು PPP ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಸೋಮವಾರ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ. ಮಾರ್ಚ್​ 31 ರಿಂದ ಸಂಸತ್‌ನಲ್ಲಿ ಈ ಕುರಿತು ಚರ್ಚೆಗಳು ನಡೆಯಲಿವೆ.

ಪಾಕಿಸ್ತಾನದ ಸಂಸತ್​​​​ನ ಒಟ್ಟಾರೆ ಬಲ 342, ಸರ್ಕಾರವನ್ನು ಉರುಳಿಸಲು 172 ಮತಗಳು ಬಂದರೆ ಸಾಕು. ಅವಿಶ್ವಾಸ ನಿರ್ಣಯ ಮಂಡಿಸಿರುವ ಪ್ರತಿಪಕ್ಷ ತನ್ನ ಬಳಿ 172 ಸದಸ್ಯ ಬಲವಿದೆ ಎಂದು ಹೇಳಿಕೊಂಡಿದೆ. ಇದರಿಂದಾಗಿ ಇಮ್ರಾನ್‌ ಖಾನ್ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ. ಈ ಬೆನ್ನಲ್ಲೇ ವಿದೇಶಿ ಹಣದ ಬಲದಿಂದ ಕೆಲವರು ತಮ್ಮ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ಗಂಭೀರವಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ:ಚಂಡೀಗಢದಲ್ಲಿ ಇನ್ಮುಂದೆ ಕೇಂದ್ರ ಸೇವಾ ನಿಯಮಗಳಷ್ಟೇ ಅನ್ವಯ: ಕೇಂದ್ರದ ಅಧಿಸೂಚನೆ

ABOUT THE AUTHOR

...view details