ಕರ್ನಾಟಕ

karnataka

ETV Bharat / international

ಗುಜರಾತ್​ ಸೇತುವೆ ದುರಂತ: ಜೋ ಬೈಡನ್​, ಕಮಲಾ ಹ್ಯಾರಿಸ್​ ಸಂತಾಪ - ಅಮೆರಿಕಾದ ಅಧ್ಯಕ್ಷ ಜೋ ಬಿಡನ್

ಮೋರ್ಬಿ ಸೇತುವೆ ಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸೋಮವಾರ 134ಕ್ಕೇರಿದೆ. ದುರ್ಘಟನೆಗೆ ಜಾಗತಿಕ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

US President Joe Biden, Vice President Kamala Harris Condolences
ಯುಎಸ್​ ಅಧ್ಯಕ್ಷ ಜೋ ಬಿಡನ್​, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಸಂತಾಪ

By

Published : Nov 1, 2022, 7:27 AM IST

ವಾಷಿಂಗ್ಟನ್:ಗುಜರಾತ್​ನ ಮೋರ್ಬಿ ನಗರದಲ್ಲಿ ಭಾನುವಾರ ಸಂಭವಿಸಿದ ಭೀಕರ ಸೇತುವೆ ಕುಸಿತದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 134 ಮಂದಿ ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಂತ್ರಸ್ತರಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​​ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಜೋ ಬೈಡನ್​, ಸೇತುವೆ ಕುಸಿತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಜಿಲ್ (ಪತ್ನಿ)​ ಹಾಗೂ ನಾನು ಸಂತಾಪ ಸೂಚಿಸುತ್ತೇವೆ. ಹಲವಾರು ಜೀವಗಳನ್ನು ಕಳೆದುಕೊಂಡಿರುವ ಜನರ ಜೊತೆಗೆ ನಮ್ಮ ಯೋಚನೆಗಳಿವೆ ಎಂದು ಹೇಳಿದ್ದಾರೆ.

ಕಮಲಾ ಹ್ಯಾರಿಸ್​ ಟ್ವೀಟ್​ನಲ್ಲಿ, ನಮ್ಮ ಹೃದಯವು ದುರಂತದಲ್ಲಿ ಮಡಿದ ಕುಟುಂಬಗಳೊಂದಿಗೆ ಇರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಗುಜರಾತ್​ನಲ್ಲಿ ಭಾರಿ ದುರುಂತ.. ಬ್ರಿಡ್ಜ್​ ಕುಸಿದು 60ಕ್ಕೂ ಹೆಚ್ಚು ಜನ ದುರ್ಮರಣ

ABOUT THE AUTHOR

...view details