ಕರ್ನಾಟಕ

karnataka

ETV Bharat / international

ಪ್ರಧಾನಿ ರೇಸ್​​ನಲ್ಲಿ ಮತ್ತಷ್ಟು ಮುನ್ನಡೆ.. 4ನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದ ರಿಷಿ ಸುನಕ್​​

ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ನಡೆದಿರುವ ಸ್ಪರ್ಧೆಯಲ್ಲಿ ರಿಷಿ ಸುನಕ್ ಮತ್ತಷ್ಟು ಮುನ್ನಡೆ ಸಾಧಿಸಿದ್ದು, 4ನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ಹುದ್ದೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

By

Published : Jul 19, 2022, 8:15 PM IST

Rishi Sunak won the fourth round
Rishi Sunak won the fourth round

ಲಂಡನ್​​(ಯುಕೆ):ಲಂಡನ್​ ಪ್ರಧಾನಿ ಹುದ್ದೆಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಮೂಲದ ರಿಷಿ ಸುನಕ್​​ ಇದೀಗ 4ನೇ ಸುತ್ತಿನಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ. ಈ ಮೂಲಕ ಪಿಎಂ ರೇಸ್​​ನಲ್ಲಿ ಮತ್ತಷ್ಟು ಮುನ್ನಡೆ ಪಡೆದುಕೊಂಡಿದ್ದಾರೆ. ಸದ್ಯ ಪ್ರಧಾನಿ ಹುದ್ದೆ ಪಡೆದುಕೊಳ್ಳುವ ಸ್ಪರ್ಧಾಳುಗಳ ಸಂಖ್ಯೆ 5ರಿಂದ 3ಕ್ಕೆ ಇಳಿಕೆಯಾಗಿದ್ದು, ಮುಂಚೂಣಿಯಲ್ಲಿ ರಿಷಿ ಸುನಕ್​ ಇದ್ದಾರೆ.

ಪ್ರಧಾನಿ ಹುದ್ದೆಗೋಸ್ಕರ ನಡೆದ 4ನೇ ಸುತ್ತಿಯಲ್ಲಿ ರಿಷಿ ಸುನಕ್​​ 118 ಮತ ಪಡೆದುಕೊಂಡು ಅಗ್ರಸ್ಥಾನದಲ್ಲಿದ್ದಾರೆ. ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ರಿಷಿ ಸುನಕ್​​ ಲಂಡನ್​​​ನ ಮುಂದಿನ ಪ್ರಧಾನಿ ಎಂದು ಬಿಂಬಿತವಾಗಿದ್ದು, ಕನ್ಸರ್ವೆಟಿವ್​ ಪಕ್ಷದ ನಾಯಕನಾಗಿ ಹೊರಹೊಮ್ಮುವ ಎಲ್ಲ ಲಕ್ಷಣ ಗೋಚರವಾಗ್ತಿವೆ.

ಇಂದು ನಡೆದ 4ನೇ ಸುತ್ತಿನಲ್ಲಿ ರಿಷಿ ಸುನಕ್​ 118 ಮತ ಪಡೆದುಕೊಂಡಿದ್ದು, ಪೆನ್ನಿ ಮೊರ್ಡಾಂಟ್​ 92 ಮತ, ವಿದೇಶಾಂಗ ಕಾರ್ಯದರ್ಶಿ ಲಿಜ್​ ಟ್ರಸ್​ 86 ಮತ ಪಡೆದುಕೊಂಡಿದ್ದಾರೆ. ಶಾಸಕ ಕೆಮಿ ಬಡೆನೊಚ್​ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7 ರಂದು ಕನ್ಸರ್ವೇಟಿವ್ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು.

ಸೆಪ್ಟೆಂಬರ್ 5 ರಂದು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸುವವರೆಗೂ ಅವರು ಪ್ರಧಾನ ಮಂತ್ರಿಯಾಗಿಯೇ ಇರುತ್ತಾರೆ. ಹಲವು ಹಗರಣಗಳು, ಕೊರೊನಾ ಸಂದರ್ಭದಲ್ಲಿ ನಿಯಮ ಮೀರಿ ಸಂತೋಷಕೂಟ ಸೇರಿದಂತೆ ಅನೇಕ ಗಂಭೀರ ಪ್ರಕರಣಗಳು ಕೇಳಿ ಬಂದ ಕಾರಣ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿರಿ:ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಸ್ಪರ್ಧಿಗಳ ನಡುವೆ ಪೈಪೋಟಿ: ಯುಕೆ ಟಿವಿ ಚರ್ಚೆ ರದ್ದು

ABOUT THE AUTHOR

...view details