ಕರ್ನಾಟಕ

karnataka

ETV Bharat / international

ಜಿಂಬಾಬ್ವೆಯಲ್ಲಿ ಕಂದಕಕ್ಕೆ ಬಿದ್ದ 106 ಪ್ರಯಾಣಿಕರಿದ್ದ ಬಸ್‌: 35 ಮಂದಿ ಸಾವು

ನತದೃಷ್ಟ ಬಸ್​ನಲ್ಲಿ ಸುಮಾರು 106 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಉಬ್ಬುತಗ್ಗಾದ ರಸ್ತೆಯಿಂದಾಗಿ ಬಸ್ ತಿರುಗಿ ಆಳವಾದ ಕಂದಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ.

ಜಿಂಬಾಬ್ವೆಯಲ್ಲಿ ಕಂದಕಕ್ಕೆ ಬಿದ್ದ ಬಸ್​
ಜಿಂಬಾಬ್ವೆಯಲ್ಲಿ ಕಂದಕಕ್ಕೆ ಬಿದ್ದ ಬಸ್​

By

Published : Apr 15, 2022, 5:43 PM IST

ಮುತಾರೆ (ಜಿಂಬಾಬ್ವೆ): ಪೂರ್ವ ಜಿಂಬಾಬ್ವೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಈಸ್ಟರ್ ನಿಮಿತ್ತ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಕಂದಕಕ್ಕೆ ಉರುಳಿ ಬಿದ್ದು 35 ಮಂದಿ ಮೃತಪಟ್ಟಿದ್ದಾರೆ. ಜಿಂಬಾಬ್ವೆಯ ಪೂರ್ವ ಮಣಿಕಾಲ್ಯಾಂಡ್ ಪ್ರಾಂತ್ಯದ ಚಿಪಿಂಗ್ ಜಿಲ್ಲೆಯ ಬಳಿ ಶುಕ್ರವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ.

ಬಸ್​ನಲ್ಲಿ ಸುಮಾರು ನೂರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಉಬ್ಬುತಗ್ಗಾದ ರಸ್ತೆಯಿಂದಾಗಿ ಬಸ್ ತಿರುಗಿ ಆಳ ಕಂದಕಕ್ಕೆ ಬಿದ್ದಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಈಸ್ಟರ್ ರಜೆ ಹಿನ್ನೆಲೆಯಲ್ಲಿ ಜಿಯಾನ್ ಚರ್ಚ್‌ನ ಸದಸ್ಯರನ್ನು ಈ ಬಸ್‌ ಸಾಗಿಸುತ್ತಿತ್ತು.

ಇಲ್ಲಿನ ಕೆಟ್ಟ ರಸ್ತೆಗಳ ಪರಿಣಾಮವಾಗಿಯೇ ಆಗಾಗ್ಗೆ ಬಸ್ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೇ, ಚಾಲಕರು ವಾಹನದಲ್ಲಿ ಮಿತಿಮೀರಿದ ಪ್ರಯಾಣಿಕನ್ನು ಸಾಗಿಸುತ್ತಾರೆ ಮತ್ತು ಅತಿ ವೇಗವಾಗಿ ವಾಹನಗಳನ್ನು ಚಲಾಯಿಸುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಾಳಿ, ಎಂಟು ಸೈನಿಕರು ಮೃತ

ABOUT THE AUTHOR

...view details