ಕೀವ್: ರಷ್ಯಾದ ಕಪ್ಪು ಸಮುದ್ರದ ನೌಕಾಪಡೆಯ ಪ್ರಧಾನ ಕಚೇರಿ ಮೇಲೆ ಡ್ರೋನ್ ಮೂಲಕ ಹೊತ್ತೊಯ್ಯಲಾದ ಕಡಿಮೆ ಪ್ರಮಾಣದ ಸ್ಫೋಟಕ ಸಾಧನವೊಂದು ಸ್ಫೋಟಗೊಂಡಿದ್ದು, ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ.
ಸೆವಾಸ್ಟೊಪೋಲ್ ನಗರದ ನೌಕಾ ಪ್ರಧಾನ ಕಚೇರಿಯ ಅಂಗಳದಲ್ಲಿ ಭಾನುವಾರ ದಾಳಿ ನಡೆದಿದೆ. ಪರಿಣಾಮ ರಷ್ಯಾ ನೌಕಾಪಡೆಯ ರಜಾದಿನ ರದ್ದುಗೊಳಿಸಲಾಗಿದೆ. ಕಡಿಮೆ ಪ್ರಮಾಣದ ಸ್ಫೋಟಕ ವಸ್ತು ಈ ಡ್ರೋನ್ನಲ್ಲಿತ್ತು ಎಂದು ತಿಳಿದು ಬಂದಿದೆ. ರಷ್ಯಾದ ಪಡೆಗಳನ್ನು ಓಡಿಸಲು ಪ್ರಯತ್ನಿಸುತ್ತಿರುವ ಉಕ್ರೇನಿಯನ್ ದಂಗೆಕೋರರ ಕೆಲಸವಿದು ಎಂದು ರಷ್ಯಾ ಆರೋಪಿಸಿದೆ.