ಕರ್ನಾಟಕ

karnataka

ETV Bharat / international

ಒತ್ತೆಯಾಳುಗಳ ಬಿಡುಗಡೆ ಕೋರಿ ವಿಶೇಷ ಅಧಿವೇಶನದಲ್ಲಿ ಪ್ರಧಾನಿ​ ನೆತನ್ಯಾಹು ಭಾಷಣಕ್ಕೆ ಅಡ್ಡಿ

ಸೆನೆಟ್​ನ ಗ್ಯಾಲರಿಯಲ್ಲಿ ತಮ್ಮ ಪ್ರೀತಿಪಾತ್ರರ ಬಿಡುಗಡೆ ಕೋರಿ ಅವರ ಫೋಟೋ ಮತ್ತು ಹೆಸರಿನ ಪೋಸ್ಟರ್​​ಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ ದೃಶ್ಯಗಳು ಕಂಡು ಬಂದವು.

Disruption of Netanyahus speech in the session demanding the release of the hostages
Disruption of Netanyahus speech in the session demanding the release of the hostages

By ETV Bharat Karnataka Team

Published : Dec 26, 2023, 10:26 AM IST

ಟೆಲ್​ ಅವೀವ್​( ಇಸ್ರೇಲ್​) :ಇಸ್ರೇಲ್​ನಲ್ಲಿ ಸೋಮವಾರ ನಡೆದ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಬೆಂಬಮಿನ್​ ಭಾಷಣಕ್ಕೆ ಅಡ್ಡಿ ಪಡಿಸಿದ ಘಟನೆ ನಡೆದಿದೆ. ಗಾಜಾದಲ್ಲಿ ಹಮಾಸ್​ ಉಗ್ರರ ಒತ್ತೆಯಾಳುಗಳಾಗಿರುವ ತಮ್ಮ ಕುಟುಂಬಸ್ಥರ ಬಿಡುಗಡೆಗೆ ಆಗ್ರಹಿಸಿ​ ಅಧಿವೇಶನಕ್ಕೆ ಅಡ್ಡಿ ಪಡಿಸಲಾಯಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು​ ವರದಿ ಮಾಡಿದೆ.

ಇತ್ತೀಚೆಗಷ್ಟೇ ಯುದ್ಧ ಪ್ರದೇಶ ಗಾಜಾದಿಂದ ಹಿಂದಿರುಗಿದ ನೆತನ್ಯಾಹು, ಒತ್ತೆಯಾಳುಗಳ ಬಿಡುಗಡೆಗೆ ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧದ ಕಾರ್ಯಾಚರಣೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದರು. ಪ್ರಧಾನಿ ಈ ಕಾರ್ಯಕ್ಕೆ ಕುಟುಂಬಸ್ಥರಿಂದ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದು, ತಮ್ಮ ಪ್ರೀತಿಪಾತ್ರರ ಬಿಡುಗಡೆ ಕೋರಿ ಅವರ ಫೋಟೋ ಮತ್ತು ಹೆಸರಿನ ಪೋಸ್ಟರ್​​ಗಳನ್ನು ಹಿಡಿದು ಬೇಸರ ವ್ಯಕ್ತಪಡಿಸಿದ ದೃಶ್ಯಗಳು ಕಂಡು ಬಂದವು. ಇದೇ ವೇಳೆ, ಪ್ರಧಾನಿ ಹೇಳಿಕೆಗೆ ವಿರೋಧಿಸಿ ಘೋಷಣೆ ಕೂಗಿದ ಅವರು, ಯಾವುದೇ ಸಮಯವಿಲ್ಲ. ಈಗಲೇ ತಮ್ಮ ಕುಟುಂಬಸ್ಥರ ಬಿಡುಗಡೆಯಾಗಬೇಕು ಎಂಬ ಘೋಷಣೆ ಕೂಗಿದರು.

ಈ ಹಿಂದೆ ಮೃತಪಟ್ಟ ಐಡಿಎಫ್​​ ಕುಟುಂಬಸ್ಥರೊಂದಿಗಿನ ಸಂವಾದದಲ್ಲಿ ಮಾತನಾಡಿದ ನೆತನ್ಯಾಹು, ನಮ್ಮ ಮಕ್ಕಳ ಸಾವು ವ್ಯರ್ಥವಲ್ಲ. ಸಾಯಬೇಕು ಎಂದು ಬಯಸಿದವರ ಮೇಲೆ ಸಂಪೂರ್ಣ ಜಯ ಸಾಧಿಸುವವರೆಗೂ ನಾವು ಯುದ್ಧವನ್ನು ನಿಲ್ಲಿಸುವುದಿಲ್ಲ. ಈ ಮಾತುಗಳನ್ನು ಅನುಸರಿಸಿ, ಸೆನೆಟ್​​ನ ಗ್ಯಾಲರಿಯಲ್ಲಿ ಕುಳಿತ ಸದಸ್ಯರು, ತಮ್ಮ ಪ್ರೀತಿಪಾತ್ರರು ಈಗಲೇ ಆಗಬೇಕು ಎಂದು ಒತ್ತಾಯಿಸಿದರು.

ಒತ್ತೆಯಾಳುಗಳ ಕುಟುಂಬಗಳಿಂದ ತೀವ್ರ ಆಕ್ರೋಶ: ಸರ್ವ ಪ್ರಯತ್ನ ಮಾಡ್ತೇವಿ ಎಂದು ಪ್ರಧಾನಿ ಅಭಯ:- ಅವರನ್ನು ಕರೆ ತರುತ್ತೀರಿ ಎಂದು ನಾವು ನಂಬಿದ್ದೇವೆ. 80 ನಿಮಿಷ, ಪ್ರತಿ ನಿಮಿಷವೂ ನರಕ ಎಂಬ ಸಂದೇಶಗಳನ್ನು ಪೋಸ್ಟರ್​​ಗಳ ಮೂಲಕ ಪ್ರಧಾನಿಗೆ ಮನವರಿಗೆ ಮಾಡುವ ಯತ್ನ ನಡೆಸಿದರು. ನಿಮ್ಮ ಮಗಳು, ತಂದೆ ಮತ್ತು ಸಹೋದರಲ್ಲಿ ಅಲ್ಲಿದ್ದರೇ ಏನು ಎಂಬ ಪ್ರಶ್ನೆಗಳ ಪೋಸ್ಟರ್​​ಗಳು ಕಂಡು ಬಂದವು. ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ, ನಮ್ಮ ಪ್ರಯತ್ನಗಳು ಬಿಡುವುದಿಲ್ಲ ಎಂಬ ಭರವಸೆ ನೀಡಿದರು.

ಸರ್ಕಾರ ಒತ್ತೆಯಾಳುಗಳನ್ನು ಕರೆತರಲು ಅವಿರತ ಶ್ರಮ ಹಾಕುತ್ತಿದೆ. ಅಪಹರಣಕ್ಕೆ ಒಳಗಾದವರನ್ನು ಮರಳಿ ತರಲು ಎಲ್ಲ ಪ್ರಯತ್ನ ನಡೆಸಲಾಗುವುದು. ಪ್ರತಿಯೊಬ್ಬರ ಜೀವ ಅಮೂಲ್ಯ. ಯುದ್ಧ ಆರಂಭವಾದಗಿನಿಂದಲೂ ಅಪಹರಣಕ್ಕೆ ಒಳಗಾದ ಅವರ ಕುಟುಂಬವನ್ನು ಭೇಟಿ ಮಾಡಿ, ಅವರ ವೈಯಕ್ತಿಕ ಕಥೆಗಳನ್ನು ಕೇಳಿದ್ದಾರೆ. ಈ ಪವಿತ್ರ ಕಾರ್ಯಾಚರಣೆ ಎಲ್ಲರನ್ನೂ ಒಂದುಗೂಡಿಸುತ್ತದೆ ಎಂದು ನೆತನ್ಯಾಹು ಧೈರ್ಯ ತುಂಬುವ ಕೆಲಸ ಮಾಡಿದರು.

ಅಪಹರಣಕ್ಕೆ ಒಳಗಾದವರನ್ನು ಕರೆತರುವ ಪ್ರಯತ್ನದ ನಡುವೆಯೂ ಗಾಜಾದಲ್ಲಿ ಇನ್ನೂ 129 ಮಂದಿ ಒತ್ತೆಯಾಳುಗಳಿದ್ದಾರೆ. ಅದರಲ್ಲಿ 22 ಮಂದಿ ಸಾವನ್ನಪ್ಪಿದ್ದು ಅವರ ದೇಹಗಳು ಬದುಕುಳಿದಿರುವ 107 ಮಂದಿ ಜೊತೆಯಲ್ಲಿ ಗಾಜಾದಲ್ಲೇ ಇವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಇಸ್ರೇಲ್​ ಮತ್ತು ಹಮಾಸ್​ ನಡುವಿನ ಈ ಭೀಕರ ಯುದ್ಧ ಮಾನವೀಯತೆ ಬಿಕ್ಕಟ್ಟಿಗೆ ಕಾರಣವಾಗಿದೆ. ಅಕ್ಟೋಬರ್​​ 7ರಂದು ಹಮಾಸ್​​ ದಾಳಿ ಆರಂಭವಾದಗಿನಿಂದ 1,200 ಮಂದಿ ಇಸ್ರೇಲಿಗರು ಸಾವು ನೋವು ಕಂಡಿದ್ದು, 20,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹಮಾಸ್​​ ನಿಯಂತ್ರಿತ ಆರೋಗ್ಯ ಸಚಿವರು ತಿಳಿಸಿದ್ದಾರೆ. (ಎಎನ್​ಐ)

ಇದನ್ನೂ ಓದಿ:ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ; ಐಡಿಎಫ್​ ನಾಶ ಮಾಡುತ್ತೇವೆಂದ ಸಿನ್ವರ್

ABOUT THE AUTHOR

...view details