ನವ ದೆಹಲಿ: ಡ್ರಗ್ಸ್ ಸಂಬಂಧಿತ ಅಪರಾಧಗಳಿಗಾಗಿ ಸೌದಿ ಅರೇಬಿಯಾ ಕಳೆದ ಹತ್ತು ದಿನಗಳಲ್ಲಿ 12 ಜನರಿಗೆ ಮರಣ ದಂಡನೆ ವಿಧಿಸಿದೆ. ಇದರಲ್ಲಿ ಕೆಲವರನ್ನು ಕತ್ತಿಯಿಂದ ತಲೆ ಕಡಿದು ಸಾಯಿಸಲಾಗಿದೆ ಎಂದು ವರದಿ ತಿಳಿಸಿದೆ. ಹಿಂಸೆಗೆ ಸಂಬಂಧಿಸಿದ ಡ್ರಗ್ಸ್ ಆರೋಪದಲ್ಲಿ ಜೈಲಿಗಟ್ಟಲಾಗಿದ್ದ 12 ಆರೋಪಿಗಳಿಗೆ ಮರಣ ದಂಡನೆ ವಿಧಿಸಲಾಗಿತ್ತು. ಇದರಲ್ಲಿ ಪಾಕಿಸ್ತಾನದ ಮೂವರು, ಸಿರಿಯಾದ ನಾಲ್ವರು, ಜೋರ್ಡಾನಿನ ಇಬ್ಬರು ಮತ್ತು ಮೂವರು ಸೌದಿ ಅರೇಬಿಯಾದ ನಾಗರಿಕರು ಸೇರಿದ್ದಾರೆ.
ಕೊಲೆ, ಭಯೋತ್ಪಾದನೆ ಹೀಗೆ ವಿವಿಧ ಅಪರಾಧಗಳಲ್ಲಿ ಭಾಗಿಯಾದ 81 ಆರೋಪಿಗಳಿಗೆ ಈ ವರ್ಷದ ಮಾರ್ಚ್‌ನಲ್ಲಿ ಸೌದಿ ಅರೇಬಿಯಾ ಮರಣ ದಂಡನೆ ನೀಡಿತ್ತು. ಇತ್ತೀಚಿನ ಇತಿಹಾಸದಲ್ಲೇ ಇದು ಅತಿದೊಡ್ಡ ಪ್ರಮಾಣದ ಮರಣದಂಡನೆಯಾಗಿದೆ.
ಈ ವರ್ಷದ ಮಾರ್ಚ್‌ನಲ್ಲಿ ಸೌದಿ ಅರೇಬಿಯಾ ತನ್ನ ಆಧುನಿಕ ಇತಿಹಾಸದಲ್ಲಿ ಸಾಮ್ರಾಜ್ಯವು ನಡೆಸಿದ ಅತಿದೊಡ್ಡ ಸಾಮೂಹಿಕ ಮರಣದಂಡನೆಯಲ್ಲಿ ಹತ್ಯೆಗಳು ಮತ್ತು ಉಗ್ರಗಾಮಿ ಗುಂಪುಗಳಿಗೆ ಸೇರಿದವರು ಸೇರಿದಂತೆ ವಿವಿಧ ಅಪರಾಧಗಳಿಗೆ ಶಿಕ್ಷೆಗೊಳಗಾದ 81 ಜನರನ್ನು ಗಲ್ಲಿಗೇರಿಸಿತ್ತು.