ಬೀಜಿಂಗ್: ಅಮೆರಿಕವು ಅಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿ ನಡೆಸಿ ಅಲ್ ಕೈದಾ ಮುಖ್ಯಸ್ಥ ಉಗ್ರ ಅಲ್ ಜವಾಹಿರಿಯನ್ನು ಹತ್ಯೆ ಮಾಡಿದ ಕ್ರಮಕ್ಕೆ ಕಮ್ಯುನಿಸ್ಟ್ ರಾಷ್ಟ್ರ ಚೀನಾ ಅತ್ಯಂತ ರಕ್ಷಣಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಎಲ್ಲ ರೀತಿಯ ಭಯೋತ್ಪಾದನಾ ಕೃತ್ಯಗಳಿಗೆ ತನ್ನ ವಿರೋಧವಿದೆ. ಆದರೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ದ್ವಿಮುಖ ನೀತಿ ಅನುಸರಿಸುವುದಕ್ಕೆ ಮತ್ತು ಇನ್ನೊಂದು ರಾಷ್ಟ್ರದ ಸಾರ್ವಭೌಮತ್ವದ ಮೇಲೆ ಸವಾರಿ ಮಾಡುವುದಕ್ಕೆ ತನ್ನ ಸಮರ್ಥನೆ ಇಲ್ಲ ಎಂದು ಚೀನಾ ಹೇಳಿದೆ.
ಕಾಬೂಲ್‌ನಲ್ಲಿ ಸಿಐಎ ಡ್ರೋನ್ ದಾಳಿಯಲ್ಲಿ ಅಲ್-ಜವಾಹಿರಿ ಸಾವಿನ ಬಗ್ಗೆ ಚೀನಾದ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ, "ನಾವು ಸಂಬಂಧಿತ ವರದಿಗಳನ್ನು ನೋಡಿದ್ದೇವೆ" ಎಂದು ಸಹಾಯಕ ವಿದೇಶಾಂಗ ಸಚಿವ ಹುವಾ ಚುನ್‌ಯಿಂಗ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.