ಕರ್ನಾಟಕ

karnataka

ETV Bharat / international

ಸೇನೆಯ ಎಡವಟ್ಟಿನಿಂದ ನಡೆದ ಡ್ರೋನ್​ ದಾಳಿ: 90 ಜನರ ಸಾವು, ಅನೇಕರಿಗೆ ಗಾಯ, ಕ್ಷಮೆಯಾಚಿಸಿದ ಸೇನಾ ಮುಖ್ಯಸ್ಥ

Nigerian army drone strike: ಮಿಲಿಟರಿಯ ಒಂದು ಸಣ್ಣ ಎಡವಟ್ಟಿನಿಂದ ನಡೆದ ಡ್ರೋನ್​ ದಾಳಿಯಲ್ಲಿ ಸುಮಾರು ನೂರಾರು ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

At least 85 civilians killed  Nigerian army drone attack  deadly mistake  ಎಡವಟ್ಟಿನಿಂದ ನಡೆದ ಡ್ರೋನ್​ ದಾಳಿ  90 ಜನರ ಸಾವು  ಕ್ಷಮೆಯಾಚಿಸಿದ ಸೇನಾ ಮುಖ್ಯಸ್ಥ  ಡ್ರೋನ್​ ದಾಳಿ  ನೈಜೀರಿಯಾದಲ್ಲಿ ಸೇನೆಯ ಸಣ್ಣ ತಪ್ಪಿನಿಂದ  ಸೇನೆಯ ಡ್ರೋನ್ ದಾಳಿ  ಅಧ್ಯಕ್ಷ ಬೋಲಾ ಟಿನುಬು
ಸೇನೆಯ ಎಡವಟ್ಟಿನಿಂದ ನಡೆದ ಡ್ರೋನ್​ ದಾಳಿ

By ETV Bharat Karnataka Team

Published : Dec 6, 2023, 8:17 AM IST

ಅಬುಜಾ, ನೈಜೀರಿಯಾ:ಪಶ್ಚಿಮ ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನೈಜೀರಿಯಾದಲ್ಲಿ ಸೇನೆಯ ಸಣ್ಣ ತಪ್ಪಿನಿಂದಾಗಿ ಸುಮಾರು 90 ಜನರು ಸಾವನ್ನಪ್ಪಿದ್ದಾರೆ. ಸೇನೆಯ ಡ್ರೋನ್ ದಾಳಿಯ ನಂತರ ಇದುವರೆಗೆ 85 ಕ್ಕೂ ಹೆಚ್ಚು ನಾಗರಿಕರ ಶವಗಳನ್ನು ಸಮಾಧಿ ಮಾಡಲಾಗಿದೆ ಎಂದು ತುರ್ತು ಸೇವೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ ಹೆಚ್ಚಿನವರು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಿದ ಸೇನೆ

ಅಧ್ಯಕ್ಷ ಬೋಲಾ ಟಿನುಬು ಮಿಲಿಟರಿ ಡ್ರೋನ್ ದಾಳಿಯ ತನಿಖೆಗೆ ಆದೇಶಿಸಿದ್ದಾರೆ. ಉತ್ತರ ಕಡುನಾದಲ್ಲಿ ಈ ಮಾರಣಾಂತಿಕ ತಪ್ಪಿನ ನಂತರ ನೈಜೀರಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ತೌರಿಡ್ ಲಗ್ಬಾಜಾ ಟುಂಡುನ್ ಬಿರಿ ಗ್ರಾಮಕ್ಕೆ ಭೇಟಿ ನೀಡಿ ವೈಮಾನಿಕ ದಾಳಿಗೆ ಕ್ಷಮೆಯಾಚಿಸಿದ್ದಾರೆ. ಬಳಿಕ ಅವರು 60ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಕಡುನಾ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ಇನ್ನು ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅವರ ಹಿತಾಸಕ್ತಿ ಮತ್ತು ಇತರ ಸೌಲಭ್ಯಗಳನ್ನು ನೋಡಿಕೊಳ್ಳುವುದಾಗಿ ಸೇನಾ ಮುಖ್ಯಸ್ಥರು ಭರವಸೆ ನೀಡಿದ್ದಾರೆ.

ಆಂಗ್ಲ ಮಾಧ್ಯಮಗಳ ವರದಿ ಪ್ರಕಾರ, ಕಡುನಾ ತುಂಬಾ ತೊಂದರೆಗೊಳಗಾದ ಪ್ರದೇಶವಾಗಿದೆ. ಇದು ರಾಜಧಾನಿ ಅಬುಜಾದಿಂದ 163 ಕಿಮೀ ದೂರದಲ್ಲಿದೆ. ಈ ಪ್ರದೇಶವು ಹಲವಾರು ಶಸ್ತ್ರಸಜ್ಜಿತ ಗ್ಯಾಂಗ್‌ಗಳಿಂದ ಅಪಹರಣಗಳು ಮತ್ತು ಕೊಲೆಗಳ ಸರಣಿಯಿಂದ ತೊಂದರೆಗೊಳಗಾಗಿದೆ. ಸಮಸ್ಯೆ ಹೆಚ್ಚುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಭದ್ರತಾ ಪಡೆಗಳು ವಾಯುದಾಳಿಗಳನ್ನು ಬಳಸಿಕೊಂಡು ಈ ಗ್ಯಾಂಗ್‌ಗಳನ್ನು ತೊಡೆದುಹಾಕಲು ಪ್ರಯತ್ನಿಸುತ್ತಿವೆ. ಈ ಸಂಬಂಧವಾಗಿ, ಸೇನೆಯಿಂದ ಮಾರಣಾಂತಿಕ ಡ್ರೋನ್ ದಾಳಿಯ ಮೂಲಕ ವಾಯುವ್ಯ ನೈಜೀರಿಯಾದಲ್ಲಿ ಧಾರ್ಮಿಕ ಸಭೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿತ್ತು ಎಂದು ವರದಿಯಾಗಿದೆ.

ಡ್ರೋನ್​ ದಾಳಿಯಲ್ಲಿ ಗಾಯಗೊಂಡವರು

ಡ್ರೋನ್ ದಾಳಿಗೆ ಮೊದಲು ಏರ್ ಗಸ್ತು ಪಡೆಗಳು ಸ್ಥಳದಲ್ಲಿ ಜನರ ಗುಂಪನ್ನು ಗುರುತಿಸಿದವು ಮತ್ತು ತಂಡವು ಕೆಳಗಿರುವ ಗುಂಪಿನ ಚಲನವಲನವನ್ನು ತಪ್ಪಾಗಿ ಗ್ರಹಿಸುವ ಮೂಲಕ ಡ್ರೋನ್ ದಾಳಿ ಮಾಡಲಾಯಿತು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಿಂದ ಆಗುವ ತಪ್ಪುಗಳು ಮತ್ತೆ ಸಂಭವಿಸದಂತೆ ನಾವು ಪ್ರಯತ್ನಿಸುತ್ತೇವೆ ಎಂದು ಸೇನಾ ವಕ್ತಾರ ಒನಿಮಾ ನ್ವಾಚುಕ್ವು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ವಾರ್ಷಿಕ ಹಬ್ಬದ ಮೇಲೆ ಹಠಾತ್ ದಾಳಿ ನಡೆದ ನಂತರ ದೃಶ್ಯ ಭಯಾನಕವಾಗಿತ್ತು. ಸುತ್ತಲೂ ರಕ್ತ, ದೇಹದ ಭಾಗಗಳು ಮತ್ತು ಮೃತ ದೇಹಗಳು ಬಿದ್ದಿದ್ದವು. ರಾತ್ರಿ 9:00 ಗಂಟೆಯ ನಂತರ ಗ್ರಾಮಸ್ಥರಿಗೆ ಮೊದಲು ದೊಡ್ಡ ಶಬ್ದ ಕೇಳಿಸಿತು, ಕೆಲವರು ಸುರಕ್ಷಿತ ಸ್ಥಳಗಳತ್ತ ಓಡಿಹೋದರು ಮತ್ತು ಕೆಲವರು ಸ್ಥಳಕ್ಕೆ ತಲುಪಿದರು. ಸುಮಾರು ಅರ್ಧ ಗಂಟೆಯ ನಂತರ ಮತ್ತೊಂದು ಭೀಕರ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನೈಜೀರಿಯಾದ ಮಿಲಿಟರಿಯು ದಶಕಗಳಿಂದ ಉಗ್ರಗಾಮಿಗಳು ಮತ್ತು ಬಂಡುಕೋರರ ವಿರುದ್ಧ ಆಗಾಗ್ಗೆ ವಾಯುದಾಳಿಗಳನ್ನು ಕೈಗೊಳ್ಳುತ್ತಿರುತ್ತದೆ. ಇದರಿಂದಾಗಿ ನಾಗರಿಕರು ಸಾವನ್ನಪ್ಪುತ್ತಾರೆ. ಜನವರಿಯಲ್ಲಿ ನಸರವಾ ರಾಜ್ಯದಲ್ಲಿ ಹತ್ತಾರು ಜನರು ಸಾವನ್ನಪ್ಪಿದ್ದರು. ಡಿಸೆಂಬರ್ 2022 ರಲ್ಲಿ ಜಂಫರಾ ರಾಜ್ಯದಲ್ಲಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಲಾಗೋಸ್ ಮೂಲದ SBM ಇಂಟೆಲಿಜೆನ್ಸ್ ಭದ್ರತಾ ಸಂಸ್ಥೆಯ ಪ್ರಕಾರ, 2017 ರಿಂದ ದೇಶದ ಉತ್ತರದಲ್ಲಿ ಸಶಸ್ತ್ರ ಗುಂಪುಗಳನ್ನು ಗುರಿಯಾಗಿಸಿಕೊಂಡು ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 400 ನಾಗರಿಕರು ಸಾವನ್ನಪ್ಪಿರುವುದು ಗಮನಾರ್ಹ..

ಓದಿ:ಬಂಡೆಯಿಂದ ಉರುಳಿದ ಬಸ್​: 25 ಮಂದಿ ಸಾವು

ABOUT THE AUTHOR

...view details