ಕ್ಯಾಲಿಫೋರ್ನಿಯಾ( ಅಮೆರಿಕ): ಆ್ಯಪಲ್ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) 2023 ಸೋಮವಾರ ಭಾರತೀಯ ಕಾಲಮಾನ ರಾತ್ರಿ 10:30 ಕ್ಕೆ ಪ್ರಾರಂಭವಾಗಿದೆ. ಜೂನ್ 9 ರವರೆಗೆ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋದಲ್ಲಿರುವ ಆಪಲ್ ಪಾರ್ಕ್‌ನಲ್ಲಿ ಈವೆಂಟ್ ನಡೆಯುತ್ತಿದೆ. ಈ ಈವೆಂಟ್ಸ್ನಲ್ಲಿ ಆ್ಯಪಲ್ ಅನೇಕ ಹೊಸ ಗೆಜೆಟ್ಸ್ಗಳನ್ನು ಬಿಡುಗಡೆ ಗೊಳಿಸಲಿದೆ.
ಆ್ಯಪಲ್ ಕಂಪನಿಯ ಸಿಇಒ ಟಿಮ್ ಕುಕ್ ಈವೆಂಟ್ ಅನ್ನು ಉದ್ಘಾಟಿಸಿದ್ದು, ಈ ಬಾರಿಯ ಕಾನ್ಫರೆನ್ಸ್ ತುಂಬಾ ವಿಶೇಷವಾಗಿರಲಿದೆ. ಪ್ರಪಂಚದಾದ್ಯಂತದ ಡೆವಲಪರ್‌ಗಳ ಜೊತೆಗೆ ಆ್ಯಪಲ್ ಬಳಕೆದಾರರಿಗೆ ನಾವು ಹೊಸ ಅನುಭವವನ್ನು ನೀಡಲು ಪ್ರಯತ್ನಿಸಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ 2203 ಈವೆಂಟ್‌ನಲ್ಲಿ ಆ್ಯಪಲ್ ಏನೆಲ್ಲ ಘೊಷಣೆ ಮಾಡಲಿದೆ ಎಂದು ಜನರಲ್ಲಿ ಕುತೂಹಲ ಹೆಚ್ಚಾಗಿದೆ.
ಆ್ಯಪಲ್ ವಿಷನ್ ಪ್ರೊ ಬಿಡುಗಡೆ:ಮೊದಲದಿನದ ವಾರ್ಷಿಕ ಈವೆಂಟ್‌ನಲ್ಲಿ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್ ಅನ್ನು ಆ್ಯಪಲ್ ಅನಾವರಣ ಗೊಳಿಸಿದೆ. ಆ್ಯಪಲ್ ಮೊದಲಬಾರಿಗೆ ಮಿಶ್ರ ರಿಯಾಲಿಟಿ ಹೆಡ್‌ಸೆಟ್ ಅನ್ನು ಪರಿಚಯಿಸಿದ್ದು, ಇದಕ್ಕೆ 'ಆ್ಯಪಲ್ ವಿಷನ್ ಪ್ರೊ' ಎಂದು ಹೆಸರಿಸಲಾಗಿದೆ.
ವಿಷನ್ ಪ್ರೋನ ವಿಶೇಷತೆ ಎಂದರೆ ಡಿಜಿಟಲ್ ವೀಕ್ಷಣೆಯನ್ನು ನೈಜ ವೀಕ್ಷಣೆಗೆ ಪರಿವರ್ತಿಸುವ ಕೆಲಸ ಮಾಡುತ್ತದೆ. ನೈಜ ವೀಕ್ಷಣೆ ಅನುಭವಕ್ಕಾಗಿ ಇದರಲ್ಲಿ ಹಲವು ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಇದನ್ನು ವರ್ಚುಯಲ್ ರಿಯಾಲಿಟಿ ಮತ್ತು ಆಗ್ಮೆಂಟೆಡ್ ರಿಯಾಲಿಟಿಯೊಂದಿಗೆ ಸಜ್ಜುಗೊಳಿಸಿದೆ. ಈ ಹೆಡ್ಸೆಟ್ ಅನ್ನು ಕನ್ನಡಕದಂತೆ ಧರಿಸಬೇಕಾಗಿದ್ದು, ಅದರಲ್ಲಿ ಡಿಸ್ಪ್ಲೇ ಕಣ್ಣುಗಳಿಗೆ ನೇರವಾಗಿರಲಿದೆ. ಈ ಸಾಧನದಲ್ಲಿ ಸಿನಿಮಾ, ಡಿಜಿಟಲ್ ಚಿತ್ರಗಳು ಸೇರಿದಂತೆ ಗೇಮಿಂಗ್ಗೂ ಈ ಸಾಧನ ಉತ್ತಮವಾಗಿರಲಿದ್ದು, ಇದನ್ನು ಧರಿಸಿ ಬಳಕೆದಾರರು ನೈಜತೆಯ ಅನುಭವ ಪಡೆಯಬಹುದಾಗಿದೆ.