ಕರ್ನಾಟಕ

karnataka

ETV Bharat / international

ಅಮೆರಿಕದಲ್ಲಿ ಗುಂಡಿನ ದಾಳಿ: ಐವರು ಸಾವು

ಅಮೆರಿಕದ ಸೆಂಟ್ರಲ್ ಟೆಕ್ಸಾಸ್​ನ ಹೊರವಲಯದಲ್ಲಿ ಗುರುವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ಈ ದುರಂತದಲ್ಲಿ ಐವರು ಮೃತಪಟ್ಟಿದ್ದಾರೆ.

shooting in Central Texas  people found dead in Central Texas  McGregor Independent School District  ಪತ್ತೆಯಾಗಿರುವ ಶವಗಳ ಮೇಲೆ ಗುಂಡೇಟಿನ ಗಾಯ  ಅಮೆರಿಕಾದಲ್ಲಿ ಗುಂಡಿನ ದಾಳಿ  ಸೆಂಟ್ರಲ್ ಟೆಕ್ಸಾಸ್​ನ ಹೊರ ವಲಯದಲ್ಲಿ ಗುಂಡಿನ ದಾಳಿ  ದುರಂತದಲ್ಲಿ ಐವರು ಮೃತ  ದಾಳಿ ನಡೆದಿರುವುದರ ಬಗ್ಗೆ ಅಧಿಕಾರಿಗಳು ಮೌನ
ಅಮೆರಿಕಾದಲ್ಲಿ ಗುಂಡಿನ ದಾಳಿ

By

Published : Sep 30, 2022, 8:21 AM IST

ಟೆಕ್ಸಾಸ್​, ಅಮೆರಿಕ:ಸೆಂಟ್ರಲ್ ಟೆಕ್ಸಾಸ್​ನ ಹೊರವಲಯದಲ್ಲಿ ಗುಂಡಿನ ದಾಳಿ ನಡೆದಿದೆ. ಬಂದೂಕುದಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ವ್ಯಾಕೊದಿಂದ 32 ಕಿ.ಮೀ ದೂರದಲ್ಲಿರುವ ಮೆಕ್ಗ್ರೆಗರ್​ನ​ಲ್ಲಿ ಐವರು ಶವವಾಗಿ ಪತ್ತೆಯಾಗಿದ್ದಾರೆ. ಅಲ್ಲಿ ನಡೆದ ಘಟನೆ ಬಗ್ಗೆ ವಿವರ ಕಲೆಹಾಕಲಾಗುತ್ತಿದೆ. ಸಾವಿನ ಕಾರಣ ಇನ್ನೂ ಪತ್ತೆ ಹಚ್ಚಬೇಕಾಗಿದೆ. ಈ ಬಗ್ಗೆ ಶಂಕಿತನನ್ನು ಬಂಧಿಸಲಾಗಿದೆ. ಸಾರ್ವಜನಿಕರು ಈ ಘಟನೆಯಿಂದ ಭಯಪಡಬೇಕಾಗಿಲ್ಲ. ಮೃತರ ಗುರುತು ಹಚ್ಚಲಾಗುತ್ತಿದೆ ಎಂದು ಸಾರ್ವಜನಿಕ ಸುರಕ್ಷತೆಯ ಟೆಕ್ಸಾಸ್ ಇಲಾಖೆಯ ವಕ್ತಾರ ರಿಯಾನ್​ ಹೂವಾರ್ಡ್​ ತಿಳಿಸಿದ್ದಾರೆ.

ಪತ್ತೆಯಾಗಿರುವ ಶವಗಳ ಮೇಲೆ ಗುಂಡು ತಗುಲಿರುವ ಗಾಯಗಳಾಗಿರುವ ಬಗ್ಗೆ ಮತ್ತು ಶಂಕಿತ ಮೇಲೆ ಗುಂಡು ಹಾರಿಸಿರುವ ಕುರಿತು ಮಾಹಿತಿ ನೀಡಲು ವಕ್ತಾರ ರಿಯಾನ್ ಹೊವಾರ್ಡ್ ನಿರಾಕರಿಸಿದರು. ಘಟನೆ ಬಳಿಕ ಸ್ಥಳೀಯ ಆಡಳಿತವು ಗುರುವಾರ ಸಂಜೆ ನಡೆಯಬೇಕಾಗಿದ್ದ ಅನೇಕ ಕಾರ್ಯಕ್ರಮ ಮತ್ತು ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಿದೆ. ಮೃತರಿಗೆ ಜಿಲ್ಲಾಡಳಿತ ಸಂತಾಪ ಸೂಚಿಸಿದೆ.

ಓದಿ:ಬೆಳ್ಳಂಬೆಳಗ್ಗೆ ಕಣಿವೆ ನಾಡಿನಲ್ಲಿ ಗುಂಡಿನ ಮೊರೆತ: ಎರಡು ಕಡೆಗಳಲ್ಲಿ ಎನ್​ಕೌಂಟರ್​ ಶುರು

ABOUT THE AUTHOR

...view details