ಕರ್ನಾಟಕ

karnataka

ETV Bharat / international

ಈ ಪ್ರಾಣಿಗಳ ಮಾಂಸ ತಿಂದ ಹದ್ದುಗಳ ದುರ್ಮರಣ.. 10 ಪಕ್ಷಿಗಳು ಅಸ್ವಸ್ತ.. ಕಾರಣ?

ಅಮೆರಿಕದ ಮಿನ್ನೇಸೋಟಾ ಲ್ಯಾಂಡ್​ಪಿಲ್​ ಪ್ರದೇಶದಲ್ಲಿ 13 ಹದ್ದುಗಳು ದಯಾಮರಣಗೊಳಿಸಿದ ಪ್ರಾಣಿಯ ಮೃತದೇಹ ಸೇವಿಸಿ ಅಸ್ವಸ್ತಗೊಂಡಿವೆ.

3 bald eagles die, 10 sick after eating euthanised animals
ದಯಾಮರಣಗೊಳಿಸಿದ ಪ್ರಾಣಿ ಸೇವಿಸಿ 3 ಹದ್ದು ಸಾವು, 10 ಹದ್ದುಗಳು ಅಸ್ವಸ್ತ...

By

Published : Dec 12, 2022, 4:40 PM IST

ಇನ್ವರ್ ಗ್ರೋವ್ ಹೈಟ್ಸ್(ಅಮೆರಿಕ): ದಯಾಮರಣಕ್ಕೊಳಗಾದ ಪ್ರಾಣಿಗಳ ಶವಗಳನ್ನು ತಿಂದ 13 ಹದ್ದುಗಳು ಮಿನ್ನೇಸೋಟಾದ ಲ್ಯಾಂಡ್​ಫಿಲ್​ ಪ್ರದೇಶದಲ್ಲಿ ಅನುಚಿತವಾಗಿ ಅಸ್ವಸ್ತಗೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದರಲ್ಲಿ ಮೂರು ಹದ್ದುಗಳು ಮೃತಪಟ್ಟಿವೆ.

ಮಿನ್ನೇಸೋಟ ವಿಶ್ವವಿದ್ಯಾಲಯದ ರಾಪ್ಟರ್​ ಕೇಂದ್ರದಲ್ಲಿ ಹತ್ತು ಪಕ್ಷಿಗಳನ್ನು ತೀವ್ರ ನಿಗಾದಲ್ಲಿಟ್ಟಿದ್ದು, ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ವಿಕ್ಟೋರಿಯಾ ಹಾಲ್​ ಪಕ್ಷಿಗಳು ಚೇತರಿಸಕೊಳ್ಳುವ ಆಶಾವಾದ ವ್ಯಕ್ತಪಡಿಸಿದ್ದಾರೆ. ‘ಹದ್ದುಗಳು ಪತ್ತೆಯಾದಾಗ ಚಲನರಹಿತವಾಗಿ ಹಿಮದಲ್ಲಿ ಮುಖಮಾಡಿ ಮಲಗಿದ್ದವು.

ಪಶುವೈದ್ಯರು ಹದ್ದುಗಳನ್ನು ಪರೀಕ್ಷಿಸಿದಾಗ ಪೆಂಟೊಬಾರ್ಬಿಟಲ್​ ಎಂಬ ಕೆಮಿಕಲ್​ನಿಂದ ದಯಾಮರಣಗೊಳಿಸಲಾದ ಪ್ರಾಣಿ ಮೃತದೇಹವನ್ನು ತಿಂದು ಇವುಗಳು ಅಸ್ವಸ್ತಗೊಂಡಿವೆ ಎಂದು ಶಂಕಿಸಲಾಗಿದೆ. ರಾಸಾಯನಿಕವಾಗಿ ದಯಾಮರಣಕ್ಕೆ ಒಳಗಾದ ಪ್ರಾಣಿಗಳನ್ನು ಇತರ ಪ್ರಾಣಿಗಳು ಸೇವಿಸದ ಹಾಗೆ ವಿಲೇವಾರಿ ಮಾಡಬೇಕು ಎಂಬ ನಿಯಮವಿದೆ ಎಂದು ವೈದ್ಯ ಹಾಲ್​ ತಿಳಿಸಿದ್ದಾರೆ.

ದಿ ರಾಪ್ಟರ್​ ಸೆಂಟರ್​ಗೆ ತರಲಾದ 11 ಹದ್ದುಗಳಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಮೂರು ಹದ್ದುಗಳ ದೇಹದಲ್ಲಿ ಸೀಸದ ಅಂಶ ಪತ್ತೆಯಾಗಿದ್ದು, ಒಂದು ಹದ್ದು ಹಕ್ಕಿಜ್ವರದಿಂದ ಮೃತಪಟ್ಟಿದೆ. ಉಳಿದ ಹದ್ದುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಹದ್ದುಗಳ ಆರೈಕೆಗೆ ಸಹಾಯ ಮಾಡಲು ನಿಧಿಯನ್ನು ಸ್ಥಾಪಿಸಲಾಗಿದೆ ಎಂದು ವಿಕ್ಟೋರಿಯಾ ಹಾಲ್​ ತಿಳಿಸಿದರು.

ಇದನ್ನೂ ಓದಿ:ಅಫ್ಘಾನಿಸ್ತಾನದಿಂದ ಶೆಲ್​ ದಾಳಿ: ಪಾಕಿಸ್ತಾನದ 7 ಜನ ಸಾವು

ABOUT THE AUTHOR

...view details