ಕರ್ನಾಟಕ

karnataka

ETV Bharat / international

ಮೋಸ್ಟ್​ ವಾಂಟೆಡ್​ ಡೆಡ್ಲಿ ಉಗ್ರ ಬಗ್ದಾದಿ ಹೇಗೆ ಸತ್ತ... ಇಲ್ಲಿದೆ exclusive ವಿಡಿಯೋ... - ಅಲ್​ ಬಗ್ದಾದಿ

ಅಲ್​ ಬಗ್ದಾದಿ ಹತ್ಯೆ ಕಾರ್ಯಾಚರಣೆಯ ವಿಡಿಯೋ ದೃಶ್ಯಾವಳಿಗಳನ್ನು ಅಮೆರಿಕದ ಕೇಂದ್ರ ಭದ್ರತಾ ಇಲಾಖೆ ಹಂಚಿಕೊಂಡಿದೆ. 10 ಸೆಕೆಂಡ್​ಗಳ ಬ್ಲ್ಯಾಕ್ ಆ್ಯಂಡ್​ ವೈಟ್ ಡ್ರೋಣ್​​​ ವಿಡಿಯೋದಲ್ಲಿ ಗುಂಡಿನ ದಾಳಿ, ಬಾಂಬ್ ಆರ್ಭಟದ ಸದ್ದು ನೋಡಬಹುದು. ಇದಕ್ಕೂ ಮೊದಲು 3-4 ಬಾರಿ ಬಗ್ದಾದಿ ಸತ್ತಿದ್ದ ಎಂಬ ಸುದ್ದಿಗಳು ಹರಿದಾಡಿದ್ದವು. ಬಳಿಕ ಆತ ಬದುಕಿದ್ದಾನೆ ಎಂಬುದೂ ಸಾಬೀತಾಗಿತ್ತು. ಹೀಗಾಗಿ, ಆತ ಹತನಾಗಿದ್ದಾನೆ ಎಂದು ಹೇಗೆ ನಂಬುವುದು? ಆತ ಸತ್ತಿದ್ದಾನೆ ಎಂಬುದರ ಕಾರ್ಯಚರಣೆಯ ಯಾವ ಸಾಕ್ಷಿ ಇದೆ ಎಂದೂ ಸಹ ಹಲವರು ಪ್ರಶ್ನಿಸಿದ್ದರು. ಈ ಎಲ್ಲ ಪ್ರಶ್ನೆಗಳಿಗೆ ಅಮೆರಿಕ ಪಡೆ ಉತ್ತರ ನೀಡಿದೆ.

ಬಗ್ದಾದಿ

By

Published : Oct 31, 2019, 8:17 AM IST

ವಾಷಿಂಗ್ಟನ್​: ಐಸಿಸ್​ ಉಗ್ರ ಸಂಘಟನೆಯ ಸಂಸ್ಥಾಪಕ ಅಲ್​ ಬಗ್ದಾದಿ ಹತ್ಯೆಯ ಸೇನಾ ಕಾರ್ಯಾಚರಣೆ ವಿಡಿಯೋ ದೃಶ್ಯಾವಳಿಗಳನ್ನು ಅಮೆರಿಕದ ಕೇಂದ್ರ ಭದ್ರತಾ ಇಲಾಖೆ ಬಿಡುಗಡೆ ಮಾಡಿದೆ

ಇದಕ್ಕೂ ಮೊದಲು ಮೂರು - ನಾಲ್ಕು ಬಾರಿ ಬಗ್ದಾದಿ ಸತ್ತಿದ್ದ ಎಂಬ ಸುದ್ದಿಗಳು ಹರಿದಾಡಿದ್ದವು. ಬಳಿಕ ಆತ ಬದುಕಿದ್ದಾನೆ ಎಂಬುದೂ ಸಾಬೀತಾಗಿತ್ತು. ಹೀಗಾಗಿ, ಆತ ಹತನಾಗಿದ್ದಾನೆ ಎಂದು ಹೇಗೆ ನಂಬುವುದು? ಆತ ಸತ್ತಿದ್ದಾನೆ ಎಂಬುದರ ಕಾರ್ಯಚರಣೆಗೆ ಯಾವ ಸಾಕ್ಷಿ ಇದೆ ಎಂದೂ ಸಹ ಹಲವರು ಪ್ರಶ್ನಿಸಿದ್ದರು. ಈ ಎಲ್ಲ ಅನುಮಾನ, ಪ್ರಶ್ನೆಗಳಿಗೆ ಸಾಕ್ಷಿ ನೀಡಿದ ಅಮೆರಿಕ, ಇದೀಗ ಕಾರ್ಯಾಚರಣೆಯ 10 ಸೆಕೆಂಡ್​ಗಳ ವಿಡಿಯೋ ಬಿಡುಗಡೆ ಮಾಡಿದೆ.

ಬ್ಲ್ಯಾಕ್ ಆ್ಯಂಡ್​ ವೈಟ್​​ನ 10 ಸೆಕೆಂಡ್​ಗಳ ವಿಡಿಯೋದಲ್ಲಿ ಅಮೆರಿಕ ಸೈನಿಕರು ಬಗ್ದಾದಿ ಇರುವ ನೆಲೆ ಮೇಲೆ ಮುತ್ತಿಗೆ ಹಾಕುತ್ತಿರುವ ಡ್ರೋಣ್​​ ಸೆರೆ ಹಿಡಿದ ದೃಶ್ಯಾವಳಿಗಳನ್ನು ಕಾಣಬಹುದು. ಸುರಂಗದೊಳಗೆ ಅವಿತಿದ್ದ ಬಗ್ದಾದಿ ಅಮೆರಿಕ ಸೇನೆಯ ನಾಯಿಗಳು ಅಟ್ಟಿಸಿಕೊಂಡು ಬಂದ ಪರಿಣಾಮ ಭಯಗೊಂಡು ತನ್ನ ಮೈಗೆ ಅಂಟಿಸಿಕೊಂಡಿದ್ದ ಆತ್ಮಹತ್ಯಾ ಬಾಂಬ್ ಅನ್ನು ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದ. ಬಗ್ದಾದಿ, ತನ್ನ ಮೂವರು ಮಕ್ಕಳೊಂದಿಗೆ ಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಡಿಎನ್‌ಎ ಮಾದರಿ ಪಡೆದು, ಸತ್ತಿರುವುದು ಹಾಗೂ ಆತ್ಮಾಹುತಿ ಬಾಂಬ್​ ಸ್ಫೋಟಿಸಿಕೊಂಡಿರುವುದು ಬಗ್ದಾದಿ ಶವ ಎಂದು ಅಮೆರಿಕ ಸೇನೆ ಖಚಿತಪಡಿಸಿಕೊಂಡಿದೆ.

ABOUT THE AUTHOR

...view details