ಕರ್ನಾಟಕ

karnataka

ETV Bharat / international

ಬರೋಬ್ಬರಿ ಐದು ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ಪತ್ನಿ! - ಐದು ತಿಂಗಳ ಬಳಿಕ ಕಾಣಿಸಿಕೊಂಡ ಕಿಮ್​ ಪತ್ನಿ

2012ರಲ್ಲಿ ಕಿಮ್ ಜಾಂಗ್ ಉನ್​ ಸರ್ವಾಧಿಕಾರಿ ಆಗಿ ಅಧಿಕಾರ ವಹಿಸಿಕೊಂಡ ನಂತರ ಒಂದೂವರೆ ವರ್ಷದ ನಂತರ ಸೋಲ್​ ಜು ಹೆಸರು ಬಹಿರಂಗಗೊಂಡಿತ್ತು. ಇದಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪವಾಗಿದೆ..

North Korean leader Kim Jong Un wife
North Korean leader Kim Jong Un wife

By

Published : Feb 2, 2022, 5:11 PM IST

ಸಿಯೋಲ್​(ಉತ್ತರ ಕೊರಿಯಾ) :ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಪತ್ನಿ ರಿ ಸೋಲ್​ ಜು ಬರೋಬ್ಬರಿ ಐದು ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಕಳೆದ ಕೆಲ ತಿಂಗಳಿಂದ ಉಂಟಾಗಿದ್ದ ಅನೇಕ ರೀತಿಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಉತ್ತರ ಕೊರಿಯಾ ರಾಜಧಾನಿಯಲ್ಲಿ ಆಯೋಜನೆಗೊಂಡಿದ್ದ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇಶದ ಸಂಸ್ಥಾಪನಾ ದಿನದ ವಾರ್ಷಿಕೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಂಗೀತ ಸಮಾರಂಭದಲ್ಲಿ ಭಾಗಿಯಾಗಿದ್ದ ಕಿಮ್​ ಜಾಂಗ್ ಉನ್ ಮತ್ತು ಅವರ ಪತ್ನಿ ರಿ ಸೋಲ್ ಜು ಒಟ್ಟಿಗೆ ಫೋಟೋ ಶೂಟ್​ನಲ್ಲೂ ಕಾಣಿಸಿದ್ದಾಗಿ ಅಲ್ಲಿನ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿರಿ:ಸಿಎಂ ಯೋಗಿ ಆದಿತ್ಯನಾಥ್​ ವಿರುದ್ಧ ಕಪ್ಪು ಬಾವುಟ ತೋರಿಸಿದ್ದ ವಿದ್ಯಾರ್ಥಿನಿಗೆ ಎಸ್​ಪಿ ಟಿಕೆಟ್​!

ಈ ಹಿಂದೆ ಸೆಪ್ಟೆಂಬರ್​​ 9ರಂದು ಕಿಮ್ ದಂಪತಿ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ದಕ್ಷಿಣ ಕೊರೊಯಾದಲ್ಲಿ ಕೊರೊನಾ ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, ಇದೇ ಕಾರಣಕ್ಕಾಗಿ ಅವರು ಹೆಚ್ಚಾಗಿ ಹೊರಗಡೆ ಕಾಣಿಸಿಕೊಳ್ಳುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ. ಇದರ ಜೊತೆಗೆ ಅವರು ಗರ್ಭಿಣಿಯಾಗಿರುವ ಕಾರಣ ಹೊರಗಡೆ ಕಾಣಸಿಕ್ಕಿಲ್ಲ ಎಂದು ಹೇಳಲಾಗುತ್ತಿತ್ತು. ಇದೀಗ ಅದಕ್ಕೆ ತೆರೆ ಬಿದ್ದಿದೆ.

2012ರಲ್ಲಿ ಕಿಮ್ ಜಾಂಗ್ ಉನ್​ ಸರ್ವಾಧಿಕಾರಿ ಆಗಿ ಅಧಿಕಾರ ವಹಿಸಿಕೊಂಡ ನಂತರ ಒಂದೂವರೆ ವರ್ಷದ ನಂತರ ಸೋಲ್​ ಜು ಹೆಸರು ಬಹಿರಂಗಗೊಂಡಿತ್ತು. ಇದಾದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪವಾಗಿದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details