ಕರ್ನಾಟಕ

karnataka

ETV Bharat / international

ಇರಾನ್​ನಲ್ಲಿ ಕೊರೊನಾಗೆ ಮತ್ತೆ 97 ಬಲಿ: ಸಾವಿನ ಸಂಖ್ಯೆ 611ಕ್ಕೆ ಏರಿಕೆ - ಇರಾನ್​ನಲ್ಲಿ ಸಾವಿನ ಸಂಖ್ಯೆ 611ಕ್ಕೆ ಏರಿಕೆ

ಇರಾನ್​ನಲ್ಲಿ ಸಾಂಕ್ರಾಮಿಕ ಕೊರೊನಾ ಸೋಂಕಿತರ ಸಂಖ್ಯೆ 12,729ಕ್ಕೆ ತಲುಪಿದ್ದು, ಮತ್ತೆ 97 ಸೋಂಕಿತರು ಪ್ರಾಣ ಕಾಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Iran says virus kills another 97,ಇರಾನ್​ನಲ್ಲಿ ಕೊರೊನಾಗೆ ಮತ್ತೆ 97 ಬಲಿ.
ಇರಾನ್​ನಲ್ಲಿ ಕೊರೊನಾಗೆ ಮತ್ತೆ 97 ಬಲಿ.

By

Published : Mar 14, 2020, 5:08 PM IST

ತೆಹ್ರಾನ್: ಕೊರೊನಾ ವೈರಸ್​ಗೆ ಇರಾನ್​ನಲ್ಲಿ ಒಂದೇ ದಿನ 97 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಮೃತರ ಸಂಖ್ಯೆ 611ಕ್ಕೆ ಏರಿಕೆಯಾಗಿದೆ.

ಇರಾನ್​ನಲ್ಲಿ ಕೊರೊನಾ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಲ್ಲಿನ ಹಲವಾರು ಹಿರಿಯ ಅಧಿಕಾರಿಗಳಿಗೂ ಕೊರೊನಾ ಸೋಂಕು ತಗುಲಿದೆ ಎಂದು ಮಾಹಿತಿ ಲಭ್ಯವಾಗಿದೆ. ಇರಾನ್​ನಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 12,729ಕ್ಕೆ ತಲುಪಿದೆ ಎಂದು ಹೇಳಲಾಗಿದೆ. ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎರಡು ವಾರಗಳವರೆಗೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಲ್ಲಿಸುವುದಾಗಿ ಸೌದಿ ಅರೇಬಿಯಾ ಹೇಳಿದೆ.

ಕಳೆದೊಂದು ವಾರದಲ್ಲಿ ಹೆಚ್ಚಿನ ಜನರು ವೈರಸ್‌ನಿಂದ ಚೇತರಿಸಿಕೊಳ್ಳುತ್ತಿರುವುದು ಕಂಡುಬಂದಿದ್ದರೂ, ವಿಶ್ವದಾದ್ಯಂತ 5,000 ಕ್ಕೂ ಹೆಚ್ಚು ಸಾವು ಸಂಭವಿಸಿವೆ. ಸುಮಾರು 1 ಲಕ್ಷದ 30 ಸಾವಿರಕ್ಕೂ ಹೆಚ್ಚು ಜನರಲ್ಲಿ ಈ ಸೋಂಕು ಪತ್ತೆಯಾಗಿದೆ.

ABOUT THE AUTHOR

...view details