ಕರ್ನಾಟಕ

karnataka

ETV Bharat / international

ವಿಚಿತ್ರವಾದ್ರೂ ಇದು ಸತ್ಯ... ಹೆಣ್ಣು ಮೀನು ಗಂಡು ಮೀನಾಗಿ ಪರಿವರ್ತನೆ... ಇದು ಒಂಥರಾ ನಾಗವಲ್ಲಿ ಕಥೆನೇ! - ನಾಗವಲ್ಲಿ ಕಥೆನೇ

ಸೃಷ್ಟಿ ಎಷ್ಟು ವಿಚಿತ್ರವಾಗಿದೆ ಎಂದ್ರೆ ಕ್ಲೋನ್​ಫಿಶ್​ ಸೇರಿದಂತೆ 500 ಹೆಚ್ಚು ಮೀನುಗಳು ಬೇಕಾದ್ರೆ ಲಿಂಗ ಬದಲಿಸಿಕೊಳ್ತಾವಂತೆ. ಕೆಲವೇ ದಿನಗಳಲ್ಲಿ ಹೆಣ್ಣು ಮೀನುಗಳು ಸಂಪೂರ್ಣವಾಗಿ ಗಂಡು ಮೀನಾಗಿ ಪರಿವರ್ತನೆಯಾಗ್ತವಂತೆ. ಇದು ವಿಚಿತ್ರವಾದ್ರೂ ಸತ್ಯ..

ಹೆಣ್ಣು ಮೀನು ಗಂಡು ಮೀನಾಗಿ ಪರಿವರ್ತನೆ

By

Published : Jul 13, 2019, 1:53 PM IST

ಹೌದು, ಇಂತಹ ಘಟನೆಗಳು ನಂಬಲು ಸ್ವಲ್ಪ ಕಷ್ಟವೇ ಸರಿ. ಆದ್ರೆ ಇದಕ್ಕೆ ಕಾರಣ ಏನೆಂಬುದು ರಹಸ್ಯವಾಗಿಯೇ ಇತ್ತು. ಆದ್ರೆ ನ್ಯೂಜಿಲ್ಯಾಂಡ್​​ನ ಒಟಾಗೋ ಶಾಸ್ತ್ರಜ್ಞರು ಈ ರಹಸ್ಯವನ್ನು ಭೇದಿಸಿದ್ದಾರೆ. ಅತ್ಯಾಧುನಿಕ ಯಂತ್ರಗಳನ್ನು ಉಪಯೋಗಿಸಿ ಇದರ ಬಗ್ಗೆ ಡಾ. ಎರಿಕಾ ಟಾಡ್ ಸಂಶೋಧನೆ ನಡೆಸಿ​ ಈ ಮಾಹಿತಿ ಹೊರ ಹಾಕಿದ್ದಾರೆ.

ಕ್ಲೋನ್​ ಫಿಶ್​ ಸೇರಿದಂತೆ ನೀಲಿ ಬಣ್ಣದ ತಲೆಯುಳ್ಳ ಮೀನುಗಳು ಮಧ್ಯೆ ವಯಸ್ಸಿಗೆ ಬರುತ್ತಿದ್ದಂತೆ ಲಿಂಗ ಪರಿವರ್ತನೆಗೊಳ್ಳುತ್ತವೆ. ಇದಕ್ಕೆ ಸುತ್ತಮುತ್ತಲಿರುವ ಪರಿಸ್ಥಿತಿಯೇ ಕಾರಣ ಅಂತಾರೆ ಡಾ. ಎರಿಕಾ.

ಹೆಣ್ಣು ಮೀನಿನೊಂದಿಗೆ ಸಂಸಾರ ನಡೆಸಿದ್ದ ಗಂಡು ಮೀನುಗಳು ಸಾವನ್ನಪ್ಪಿತ್ತವೆ. ಆಗ ಹೆಣ್ಣು ಮೀನುಗಳು ಆ ಗಂಡು ಮೀನುಗಳ ಜಾಗ ತುಂಬುತ್ತವೆ. ಗಂಡು ಮೀನಾಗಿ ಜೀವನ ನಡೆಸಬೇಕೆಂದು ಅಂದುಕೊಳ್ಳುವುದೇ ತಡ ಆ ಮೀನಿನ ಶರೀರದಲ್ಲಿ ಬದಲಾವಣೆಗಳು ಪ್ರಾರಂಭವಾಗುತ್ತವೆ.

ಆ ಹೆಣ್ಣು ಮೀನಿನಲ್ಲಿ ಮೊದಲು ಗಂಡು ಮೀನಿನ ಲಕ್ಷಣಗಳು ಕಂಡುಬರುತ್ತವೆ. ಬಳಿಕ ಸಂಪೂರ್ಣವಾಗಿ ಗಂಡು ಮೀನಾಗಿ ಪರಿವರ್ತನೆಗೊಳ್ಳುತ್ತವೆ. ಗರ್ಭಾಶಯ ನಿರ್ವಹಣೆ ಸಲುವಾಗಿ ಹೆಣ್ಣು ಮೀನಿನಲ್ಲಿ ಉತ್ಪತ್ತಿಯಾಗುವ ಇಸ್ಟ್ರೋಜನ್​ ಹಾರ್ಮೋನ್​ ‘ಅರೋಮಾಟಸಿ’ ತನ್ನ ಕಾರ್ಯ ನಿಲ್ಲಿಸುತ್ತೆ. ಅದೇ ಸಮಯದಲ್ಲಿ ವೃಷಣಗಳು ರೂಪಗೊಂಡು ಕೇವಲ 10 ರಿಂದ 21 ದಿನಗಳಲ್ಲಿ ಗಂಡು ಮೀನಾಗಿ ಪರಿವರ್ತನೆಗೊಳ್ಳುತ್ತವೆ. ಆನಂತರ 10 ದಿನದಲ್ಲೇ ಪತ್ಯುತ್ಪತ್ತಿಗೆ ರೆಡಿಯಾಗ್ತವೆ ಎಂದು ಸಂಶೋಧನೆ ಮೂಲಕ ತಿಳಿದು ಬಂದಿದೆ.

ಇದೆಲ್ಲ ಆ ತಳಿಯ ಮೀನಗಳ ಜೀವನ ಪ್ರಕ್ರಿಯೆಯ ಭಾಗವಾಗಿದೆ. ಪರಿಸ್ಥಿತಿ ಅನುಗುಣವಾಗಿ ಆ ಮೀನುಗಳ ಜೀವನ ಶೈಲಿ ಬದಲಾಗುತ್ತವೆ. ಆಸಕ್ತಿಯುಳ್ಳ ಈ ಸಂಶೋಧನೆ ವಿವರ ಸೈನ್ಸ್​ ಅಡ್ವಾನ್ಸ್​ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇನ್ನು ಈ ಮೀನುಗಳ ಜೀವನ ಒಂಥರಾ ನಾಗವಲ್ಲಿ ಕಥೆ ತರನಾ ಇದೆ. ಆ ಚಿತ್ರದಲ್ಲಿ ನಟಿ ನಾಗವಲ್ಲಿಯಾಗಿ ಯಾವ ರೀತಿ ಪರಿವರ್ತನೆಗೊಳ್ಳುತ್ತಾಳೆ ಇಲ್ಲಿ ಈ ಮೀನುಗಳು ಸಹಾ ಗಂಡು ಮೀನಾಗಿ ಪರಿವರ್ತನೆಗೊಳ್ಳುತ್ತದೆ.

ABOUT THE AUTHOR

...view details