ಕರ್ನಾಟಕ

karnataka

ETV Bharat / international

ಯೆಮನ್​ನಲ್ಲಿ ಜನಸಮೂಹದ ಮೇಲೆ ಹೌತಿ ಬಂಡುಕೋರರ ದಾಳಿ: 6 ಮಂದಿ ಬಲಿ

ಯೆಮನ್​​ನ 1962ರ ಕ್ರಾಂತಿಯ 59ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದ ಜನಸಮೂಹದ ಮೇಲೆ ಹೌತಿ ಬಂಡುಕೋರರು ವೈಮಾನಿಕ ದಾಳಿ ನಡೆಸಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ.

By

Published : Sep 26, 2021, 2:05 PM IST

ಬ್ಯಾಲಿಸ್ಟಿಕ್ ಕ್ಷಿಪಣಿ
ಬ್ಯಾಲಿಸ್ಟಿಕ್ ಕ್ಷಿಪಣಿ

ಸನಾ (ಯೆಮನ್): ವಾಯುವ್ಯ ಯೆಮೆನ್ ಪ್ರಾಂತ್ಯದ ಹಜ್ಜಾದಲ್ಲಿ ನಿನ್ನೆ ರಾತ್ರಿ ಸಾರ್ವಜನಿಕ ರಜಾದಿನವನ್ನು ಆಚರಿಸುತ್ತಿದ್ದ ಜನಸಮೂಹದ ಮೇಲೆ ಹೌತಿ ಬಂಡುಕೋರರು ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ದಾಳಿ ನಡೆಸಿದ್ದು, 6 ಮಂದಿ ಬಲಿಯಾಗಿದ್ದಾರೆ.

20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಯೆಮನ್​​ನ 1962ರ ಕ್ರಾಂತಿಯ 59ನೇ ವಾರ್ಷಿಕೋತ್ಸವವನ್ನು ಸರ್ಕಾರಿ ನಿಯಂತ್ರಣದಲ್ಲಿರುವ ಕರಾವಳಿ ನಗರವಾದ ಮಿಡಿ ಸಿಟಿಯಲ್ಲಿ ಜನರು ಆಚರಿಸುತ್ತಿದ್ದರು. ಈ ವೇಳೆ ಹೌತಿ ಬಂಡುಕೋರರು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಭಯೋತ್ಪಾದನೆಯನ್ನು ಸಾಧನವನ್ನಾಗಿ ಬಳಸಿಕೊಳ್ಳುವ ರಾಷ್ಟ್ರಗಳಿಗೂ ಅದು ಅಪಾಯಕಾರಿ: ಪ್ರಧಾನಿ ಮೋದಿ

1962ರ ಸೆಪ್ಟೆಂಬರ್ 26 ರಂದು ನಡೆದ ಕ್ರಾಂತಿಯು ದೇಶವನ್ನು ಗಣರಾಜ್ಯವನ್ನಾಗಿಸಿತು. ಇದರ ವಾರ್ಷಿಕೋತ್ಸವವನ್ನು ಯೆಮೆನ್ ಸಾರ್ವಜನಿಕ ರಜಾದಿನವಾಗಿ ಆಚರಿಸುತ್ತಾ ಬಂದಿದೆ.

ಇರಾನ್ ಬೆಂಬಲಿತ ಹೌತಿ ಬಂಡುಕೋರರು 2014 ರಲ್ಲಿ ಯೆಮೆನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡ ಬಳಿಕ ಯುದ್ಧ ಮತ್ತು ದಾಳಿ ನಡೆಸುತ್ತಾ ಬಂದಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಯೆಮೆನ್ ಅಂತರ್ಯುದ್ಧದಲ್ಲಿ 10 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದು, 40 ಲಕ್ಷಕ್ಕೂ ಅಧಿಕ ಮಂದಿ ಸ್ಥಳಾಂತರವಾಗಿದ್ದಾರೆ.

ABOUT THE AUTHOR

...view details