ಕರ್ನಾಟಕ

karnataka

ETV Bharat / international

ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧ ಹೇರಿ: ಅಮೆರಿಕ- ಐರೋಪ್ಯ ಒಕ್ಕೂಟ ಒತ್ತಾಯಿಸಿದ ಝೆಲೆನ್ಸ್ಕಿ - ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧ ಹೇರುವಂತೆ ಝೆಲೆನ್ಸ್ಕಿ ಮನವಿ

ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ವಿರುದ್ಧ ಮತ್ತಷ್ಟು ನಿರ್ಬಂಧಗಳನ್ನು ಹೇರುವಂತೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕರೆ ನೀಡಿದ್ದಾರೆ.

ಝೆಲೆನ್ಸ್ಕಿ
ಝೆಲೆನ್ಸ್ಕಿ

By

Published : Mar 7, 2022, 10:42 AM IST

ಉಕ್ರೇನ್‌: ರಷ್ಯಾದ ಪಡೆಗಳು ಶೆಲ್ ದಾಳಿಯನ್ನು ಹೆಚ್ಚಿಸುತ್ತಿರುವ ಹಿನ್ನೆಲೆ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ಮತ್ತಷ್ಟು ನಿರ್ಬಂಧಗಳನ್ನು ಹೇರುವ ಮೂಲಕ ಯುದ್ಧಕ್ಕೆ ಅಂತ್ಯ ಹಾಡಬೇಕೆಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ.

ಭಾನುವಾರ ಸಂಜೆ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಝೆಲೆನ್ಸ್ಕಿ, ರಷ್ಯಾದ ಸಶಸ್ತ್ರ ಪಡೆಗಳು ಉಕ್ರೇನಿಯನ್ ರಕ್ಷಣಾ ಉದ್ಯಮಗಳನ್ನು ಮತ್ತು ಕೈಗಾರಿಕೆಗಳನ್ನು ನಾಶಮಾಡಲು ಮುಂದಾಗಿವೆ. ಈ ಸಂಬಂಧ ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಟಣೆ ಹೊರಡಿಸಿ, ರಕ್ಷಣಾ ಸ್ಥಾವರಗಳ ಉದ್ಯೋಗಿಗಳಿಗೆ ಕೆಲಸಕ್ಕೆ ಹೋಗಬೇಡಿ ಎಂದು ಸೂಚನೆ ನೀಡಿದೆ. ಇದು ಅಹಿತಕರ ಬೆಳವಣಿಗೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಷ್ಯಾದ ಮೇಲೆ ನ್ಯಾಟೋ ದೇಶಗಳು ಸದ್ಯಕ್ಕೆ ಹೇರಿರುವ ನಿರ್ಬಂಧಗಳು ಸಾಕಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಯುತ್ತಿದೆ. ಆಕ್ರಮಣಕಾರಿ ದೇಶದ ವಿರುದ್ಧ ಕೂಡಲೇ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ;ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಜತೆ ಇಂದು ಪ್ರಧಾನಿ ಮೋದಿ ಮಾತುಕತೆ

ABOUT THE AUTHOR

...view details