ಕರ್ನಾಟಕ

karnataka

ETV Bharat / international

ಸುಮ್ಮನೇ ಶರಣಾಗಿ.. ಇಲ್ಲ ಸರ್ವನಾಶವಾಗ್ತೀರಿ ಎಂದ ಪುಟಿನ್​.. ಪ್ರಾಣ ಬಿಡ್ತೀವಿ ಹೊರತು ತಲೆಬಾಗಲ್ಲ ಎಂದ ಝೆಲೆನ್ಸ್ಕಿ - ಉಕ್ರೇನ್ ಸೈನ್ಯವು ಮೈಕೋಲೈವ್ ಹೊರಗೆ ರಷ್ಯಾದ ಪಡೆಗಳೊಂದಿಗೆ ಮಾಡು ಇಲ್ಲವೇ ಮಡಿ ಹೋರಾಟ

ರಷ್ಯಾ ಉಕ್ರೇನ್​​ನ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಉಕ್ರೇನ್​ ತೊರೆಯುತ್ತಿದ್ದಾರೆ. ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ನಿರಾಶ್ರಿತರ ಸಂಖ್ಯೆ 1.5( 15 ಲಕ್ಷ) ಮಿಲಿಯನ್ ದಾಟಿದೆ.

Vladimir Putin Calls On Ukraine To Surrender
Vladimir Putin Calls On Ukraine To Surrender

By

Published : Mar 7, 2022, 10:46 AM IST

Updated : Mar 7, 2022, 11:11 AM IST

ಕೀವ್​​/ ಮಾಸ್ಕೋ:ಸುಮ್ಮನೆ ನೀವು ಶರಣಾಗಿ ಇಲ್ಲ ಸರ್ವನಾಶ ಆಗೀರಾ ಎಂದು ರಷ್ಯಾ ಅಧ್ಯಕ್ಷ ಪುಟಿನ್​ ಕರೆ ನೀಡಿದ್ದಾರೆ. ಅಷ್ಟೇ ಅಲ್ಲ ಕೀವ್​ ಶರಣಾಗದ ಹೊರತು ಉಕ್ರೇನ್‌ನ ಮೇಲೆ ತಮ್ಮ ಆಕ್ರಮಣ ಮುಂದುವರಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಜ್ಞೆ ಮಾಡಿದ್ದಾರೆ. ಆದರೆ ಅತ್ತ ಉಕ್ರೇನ್ ಸೈನ್ಯವು ಮೈಕೋಲೈವ್ ಹೊರಗೆ ರಷ್ಯಾದ ಪಡೆಗಳೊಂದಿಗೆ ಮಾಡು ಇಲ್ಲವೇ ಮಡಿ ಹೋರಾಟ ಮುಂದುವರೆಸಿದೆ. ಪ್ರಾಣಕೊಟ್ಟೇವು, ಆದರೆ ತಲೆಭಾಗಲ್ಲ ಎಂದು ಹೋರಾಟ ಮಾಡುತ್ತಿವೆ.

ಈ ಮಧ್ಯೆ ರಷ್ಯಾ ಉಕ್ರೇನ್​​ನ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಉಕ್ರೇನ್​ ತೊರೆಯುತ್ತಿದ್ದಾರೆ. ಉಕ್ರೇನ್‌ನಿಂದ ಪಲಾಯನ ಮಾಡುತ್ತಿರುವ ನಿರಾಶ್ರಿತರ ಸಂಖ್ಯೆ 1.5( 15 ಲಕ್ಷ) ಮಿಲಿಯನ್ ದಾಟಿದೆ.

  • ಮರಿಯುಪೋಲ್‌ನಿಂದ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಗಳು ಎರಡನೇ ಬಾರಿಗೂ ವಿಫಲವಾಗಿವೆ. ನಗರದ ನಿವಾಸಿಗಳು ವಿದ್ಯುತ್, ನೀರು ಇಲ್ಲದೇ ಪರದಾಡುತ್ತಿದ್ದಾರೆ.
  • ಉಕ್ರೇನ್ ಸೇನೆಯು ಮೈಕೊಲೈವ್‌ನ ಹೊರಗೆ ರಷ್ಯಾದ ಪಡೆಗಳೊಂದಿಗೆ ಸಮರ್ಥ ಹೋರಾಟ ಮಾಡುವಲ್ಲಿ ನಿರತವಾಗಿವೆ.
  • ರಷ್ಯಾ ಉಕ್ರೇನ್‌ನಲ್ಲಿರುವ ವಿನ್ನಿಟ್ಸಿಯಾ ವಿಮಾನ ನಿಲ್ದಾಣ ನಾಶಪಡಿಸಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
  • ಇರ್ಪಿನ್‌ನಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ನಾಗರಿಕರು ರಷ್ಯಾ ಆರ್ಟಿಲರಿ ದಾಳಿಗೆ ಬಲಿಯಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
  • ಜಾಗತಿಕ ಸ್ಟ್ರೀಮಿಂಗ್ ಮನರಂಜನಾ ಸೇವೆ ನೆಟ್‌ಫ್ಲಿಕ್ಸ್, ಉನ್ನತ ಲೆಕ್ಕಪರಿಶೋಧಕ ಸಂಸ್ಥೆಗಳಾದ KPMG ಮತ್ತು PWC, ಮತ್ತು ಹಣಕಾಸು ಸೇವೆಗಳ ಸಂಸ್ಥೆ ಅಮೆರಿಕನ್ ಎಕ್ಸ್‌ಪ್ರೆಸ್​ ರಷ್ಯಾದೊಂದಿಗಿನ ಸಂಬಂಧಗಳನ್ನು ಕಡಿತಗೊಳಿಸಿತು.
  • ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ರಷ್ಯಾದಾದ್ಯಂತ ನಡೆದ ಪ್ರತಿಭಟನೆಗಳಲ್ಲಿ 4,600 ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
  • ಸಂಧಾನ ಅಥವಾ ಯುದ್ಧದ ಮೂಲಕ ನಮ್ಮ ಗುರಿಯನ್ನು ಸಾಧಿಸುತ್ತೇವೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಘೋಷಿಸಿದ್ದಾರೆ
  • ಪುಟಿನ್​ ಈ ಘೋಷಣೆ ನಡುವೆ ಉಕ್ರೇನ್ ಮತ್ತು ರಷ್ಯಾ ನಡುವೆ ಇಂದು ಮೂರನೆ ಸುತ್ತಿನ ಮಾತುಕತೆ ನಡೆಯಲಿದೆ.
Last Updated : Mar 7, 2022, 11:11 AM IST

ABOUT THE AUTHOR

...view details