ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ದಾಳಿ ವಿನಾಶಕ್ಕೆ ಕಾರಣವಾಗಲಿದೆ. ರಷ್ಯಾದ ಈ ಕ್ರಮದ ವಿರುದ್ಧ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಸೂಕ್ತ ಮತ್ತು ನಿರ್ಣಾಯಕ ರೀತಿಯಲ್ಲಿ ಉತ್ತರಿಸಲಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಅವರು, ರಷ್ಯಾದ ಮಿಲಿಟರಿ ಪಡೆಗಳಿಂದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ದಾಳಿಗೆ ಒಳಗಾದ ಉಕ್ರೇನ್ ಜನರೊಂದಿಗೆ ಇಡೀ ಪ್ರಪಂಚವಿದೆ. ಪುಟಿನ್ ಪೂರ್ವಯೋಜಿತವಾಗಿ ಯುದ್ಧವನ್ನು ಶುರು ಮಾಡಿದ್ದಾರೆ. ಇದು ಭಾರಿ ದುರಂತ, ಜೀವಹಾನಿ ಮತ್ತು ಮಾನವನ ವಿನಾಶಕ್ಕೆ ನಾಂದಿ ಹಾಡಲಿದೆ. ಇದಕ್ಕೆ ರಷ್ಯಾವೇ ಪೂರ್ಣ ಹೊಣೆಯಾಗಲಿದೆ ಎಂದು ಹೇಳಿದ್ದಾರೆ.