ಕರ್ನಾಟಕ

karnataka

ETV Bharat / international

ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ ಸೇನೆ: ಹೋರಾಟ ಮುಂದುವರೆದಿದೆ ಎಂದ ಉಕ್ರೇನ್​ ಅಧ್ಯಕ್ಷ! - ಖೆರ್ಸನ್ ಮೇಯರ್ ಇಗೊರ್ ಕೊಲಿಖೇವ್

ಉಕ್ರೇನ್​​​ನ ಮೇಲೆ ರಷ್ಯಾ ಭೀಕರ್ ದಾಳಿ ಮುಂದುವರಿದಿದೆ. ರಷ್ಯಾ ಸೇನೆ ದಕ್ಷಿಣದ ನಗರ ಖೆರ್ಸನ್ ಅನ್ನು ವಶಪಡಿಸಿಕೊಂಡಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ ಸೇನೆ: ಹೋರಾಟ ಮುಂದುವರೆದಿದೆ ಎಂದು ಉಕ್ರೇನ್​ ಅಧ್ಯಕ್ಷ!
ಖೆರ್ಸನ್ ನಗರ ವಶಪಡಿಸಿಕೊಂಡ ರಷ್ಯಾ ಸೇನೆ: ಹೋರಾಟ ಮುಂದುವರೆದಿದೆ ಎಂದು ಉಕ್ರೇನ್​ ಅಧ್ಯಕ್ಷ!

By

Published : Mar 3, 2022, 8:00 AM IST

Updated : Mar 3, 2022, 2:00 PM IST

ಕೀವ್​( ಉಕ್ರೇನ್​):ರಷ್ಯಾ ಸೇನೆ 8 ದಿನವೂ ಉಕ್ರೇನ್​ ಮೇಲೆ ದಾಳಿ ಮುಂದುವರಿಸಿದೆ. ಉಕ್ರೇನ್​​ನ ಇತರ ನಗರಗಳನ್ನು ಸುತ್ತುವರೆದಿರುವ ಸೇನೆ, ಈಗ ಖೆರ್ಸನ್​ ನಗರವನ್ನು ತನ್ನ ವಶಕ್ಕೆ ಪಡೆದಿದೆ. ಈ ವಿಷಯವನ್ನು ಖೆರ್ಸನ್​ ನಗರದ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಖೆರ್ಸನ್ ಮೇಯರ್ ಇಗೊರ್ ಕೊಲಿಖೇವ್ ಅವರು ರಷ್ಯಾದ ಪಡೆಗಳು ಬಂದರು ನಗರವನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿವೆ ಎಂದು ದೃಢಪಡಿಸಿದ್ದಾರೆ. ಆದರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಚೇರಿ ಹೋರಾಟ ಇನ್ನೂ ಮುಂದುವರೆದಿದೆ ಎಂದು ಹೇಳಿದೆ. ರಷ್ಯಾದ ಅಧಿಕಾರಿಗಳು ಖೆರ್ಸನ್ ತಮ್ಮ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಘೋಷಿಸಿದ್ದಾರೆ.

ಮೇಯರ್ ಇಗೊರ್ ಕೊಲಿಖೇವ್ ಅವರು ರಷ್ಯಾದ ಸೈನಿಕರು ಖೆರ್ಸನ್​ ನಗರದಲ್ಲಿದ್ದಾರೆ ಮತ್ತು ನಗರ ಆಡಳಿತ ಕಟ್ಟಡಕ್ಕೆ ಸೈನಿಕರು ದಾಂಗುಡಿ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಮೇಯರ್​ ನಾಗರಿಕರ ಮೇಲೆ ಗುಂಡು ಹಾರಿಸದಂತೆ ಹಾಗೂ ಶವಗಳನ್ನು ತೆಗೆದುಕೊಳ್ಳಲು ಅವಕಾಶ ಕಲ್ಪಿಸುವಂತೆ ರಷ್ಯಾ ಸೇನೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆಗಳಾದ ರಾಯಿಟರ್ಸ್ ಮತ್ತು ಎಪಿ ವರದಿ ಮಾಡಿವೆ.

ಜನರ ಮೇಲೆ ಗುಂಡು ಹಾರಿಸಬೇಡಿ ಎಂದು ನಾವು ಅವರನ್ನು ಕೇಳಿದ್ದೇವೆ ಎಂದು ಮೇಯರ್ ಇಗೊರ್ ಕೊಲಿಖೇವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ಯಾವುದೇ ಉಕ್ರೇನಿಯನ್ ಪಡೆಗಳನ್ನು ಹೊಂದಿಲ್ಲ, ಕೇವಲ ನಾಗರಿಕರು ಮತ್ತು ಇಲ್ಲಿ ವಾಸಿಸಲು ಬಯಸುವ ಜನರು ಮಾತ್ರವೇ ನಗರದಲ್ಲಿದ್ದೇವೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ಖೆರ್ಸನ್ 3,00,000 ಜನಸಂಖ್ಯೆ ಹೊಂದಿರುವ ನಗರವಾಗಿದೆ. ಇದು ಕಪ್ಪು ಸಮುದ್ರ ಸೇರುವ ಡ್ನೀಪರ್ ನದಿಯ ದಡದಲ್ಲಿ ಇರುವ ಆಯಕಟ್ಟಿನ ಸ್ಥಳವಾಗಿದೆ. ರಷ್ಯಾದ ಪಡೆಗಳು ಈ ನಗರವನ್ನು ವಶಕ್ಕೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ನೀರಿನ ಕಾಲುವೆ ಮೇಲಿದ್ದ ನಿರ್ಬಂಧ ತೆರೆವುಗೊಳಿಸಿ, ಕ್ರಿಮಿಯಾಕ್ಕೆ ನೀರು ಸರಬರಾಜು ಮರುಸ್ಥಾಪಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದನ್ನು ಓದಿ:ಮುಂದುವರಿದ ರಷ್ಯಾ ಆಕ್ರಮಣ.. ಉಕ್ರೇನ್​ ಸ್ಥಿತಿ ಇನ್ನಷ್ಟು ಭೀಕರ.. 2 ಸಾವಿರ ನಾಗರಿಕರ ಸಾವು

Last Updated : Mar 3, 2022, 2:00 PM IST

ABOUT THE AUTHOR

...view details