ಕೀವ್, ಉಕ್ರೇನ್: ರಷ್ಯಾ ಸೇನಾ ಕಾರ್ಯಾಚರಣೆಯಿಂದಾಗಿ ಉಕ್ರೇನ್ನಲ್ಲಿ ಉದ್ವಿಗ್ನತೆ ಆವರಿಸಿದೆ. ಉಕ್ರೇನ್ನ ಸದ್ಯದ ಪರಿಸ್ಥಿತಿ ಕುರಿತಂತೆ ವಿದೇಶಿಗರಿಗೆ ಮಾಹಿತಿ ನೀಡಲು ವೆಬ್ಸೈಟ್ ಅನ್ನು ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರಂಭಿಸಿದ್ದು, ಈ ವೆಬ್ಸೈಟ್ ಮೂಲಕ ಪರಿಶೀಲಿಸಿದ ಮಾಹಿತಿಯನ್ನು ಒದಗಿಸಲಾಗುತ್ತದೆ ಎಂದು ಉಕ್ರೇನ್ ಹೇಳಿಕೊಂಡಿದೆ.
ಬುಧವಾರ ಟ್ವಿಟರ್ನಲ್ಲಿ ಈ ಕುರಿತು ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದ್ದು, ಉಕ್ರೇನ್ ಅನ್ನು ಬೆಂಬಲಿಸುವ ಮತ್ತು ಯುದ್ಧ ವಿರೋಧಿ ಆಯಾಮವನ್ನು http://war.ukraine.ua ವೆಬ್ಸೈಟ್ನಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ಹೇಳಿಕೊಂಡಿದೆ.