ಮರಿಯುಪೋಲ್:ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಷ್ಯಾದ ಮಿಲಿಟರಿ ಪಡೆ ಮರಿಯುಪೋಲ್ ಆಯಕಟ್ಟಿನ ಬಂದರಿಗೆ ಮುತ್ತಿಗೆ ಹಾಕಿದ್ದು, ಉಕ್ರೇನ್ ಪಡೆಗಳಿಗೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ನಗರದಿಂದ ನಿರ್ಮಿಸುವಂತೆ ಹೇಳಿತು. ಆದರೆ, ಈ ಪ್ರಸ್ತಾಪವನ್ನು ಉಕ್ರೇನ್ ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಮಾಡಿಕೊಂಡ ಒಪ್ಪಂದಂತೆ ಅಜೋವ್ ಸಮುದ್ರ ಬಂದರಿನ ಸುರಕ್ಷಿತ ಮಾರ್ಗಗಳನ್ನು ಬಳಸಿಕೊಂಡು ತಮ್ಮ ನಾಗರಿಕರನ್ನು ಕರೆದುಕೊಂಡು ಸೋಮವಾರದೊಳಗೆ ಉಕ್ರೇನ್ ಸೈನಿಕರು ಬಂದರನ್ನು ತೊರೆಯಬಹುದು. ಒಂದೊಮ್ಮೆ ಸೈನಿಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾದರೆ ಮರಿಯುಪೋಲ್‌ನಿಂದ ಸುರಕ್ಷಿತವಾಗಿ ತೆರಳುವ ವ್ಯವಸ್ಥೆ ಮಾಡಲಾಗುವುದು ಎಂಬ ಪ್ರಸ್ತಾವನ್ನು ರಷ್ಯಾ ಕರ್ನಲ್ ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಉಕ್ರೇನ್ ಮುಂದಿಟ್ಟಿದ್ದಾರೆ. ಆದರೆ ಈ ಪ್ರಸ್ತಾಪವನ್ನು ಉಕ್ರೇನ್ ಸೈನಿಕರು ಸ್ಪಷ್ಟವಾಗಿ ತಳ್ಳಿ ಹಾಕಿದ್ದಾರೆ.
ಉಕ್ರೇನ್ ಪಡೆಗಳು ಮಾರಿಯುಪೋಲ್ ಅನ್ನು ತೊರೆಯುವ ರಷ್ಯಾದ ಪ್ರಸ್ತಾಪಕ್ಕೆ ಕೈವ್ನಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಸೋಮವಾರದವರೆಗೆ ಕಾದು ನೋಡುತ್ತೇವೆ. ಒಂದೊಮ್ಮೆ ನಮ್ಮ ಪ್ರಸ್ತಾಪವನ್ನು ಉಕ್ರೇನ್ ಪಡೆಗಳು ಒಪ್ಪಿಕೊಂಡರೆ, ಮಾನವೀಯ ನೆಲೆಯಲ್ಲಿ ಅಗತ್ಯ ಸಾಮಗ್ರಿಗಗಳನ್ನು ಒದಗಿಸಲಾಗುತ್ತದೆ. ಮರಿಯುಪೋಲ್ ಅನ್ನು ತೊರೆಯಬೇಕೆ ಅಥವಾ ನಗರದಲ್ಲಿ ಉಳಿಯಬೇಕೆ ಎಂಬುದನ್ನು ಆಯ್ಕೆ ಮಾಡಲು ನಾಗರಿಕರು ಸ್ವತಂತ್ರರು ಎಂದು ರಷ್ಯಾ ಪಡೆ ಹೇಳಿದೆ.