ಕರ್ನಾಟಕ

karnataka

ETV Bharat / international

ಯುಕೆಯಲ್ಲಿ ಕೋವಿಡ್​ ಅಬ್ಬರ: 51,000 ಹೊಸ ಕೇಸ್​ ಪತ್ತೆ, ಒಮಿಕ್ರಾನ್​ ಪ್ರಕರಣಗಳಲ್ಲೂ ಏರಿಕೆ - ಬ್ರಿಟನ್​ ಕೋವಿಡ್​ ವರದಿ. ಕೋವಿಡ್ ಪ್ರಕರಣ

ಬ್ರಿಟನ್‌ನಲ್ಲಿ 161 ಹೊಸ ಕೋವಿಡ್​ ಸಂಬಂಧಿತ ಸಾವು ವರದಿಯಾಗಿದೆ. ಈ ಮೂಲಕ ಬ್ರಿಟನ್‌ನಲ್ಲಿ ಕೊರೊನಾ ಸೋಂಕಿತರ ಸಾವಿನ ಒಟ್ಟು ಸಂಖ್ಯೆಯು 1,45,987ರಷ್ಟಾಗಿದೆ.

UK coronavirus
ಯುಕೆ ಕೋವಿಡ್​

By

Published : Dec 9, 2021, 2:25 AM IST

ಲಂಡನ್ (ಯುಕೆ):ಬ್ರಿಟನ್‌ನಲ್ಲಿ ಕೋವಿಡ್​ ಅಬ್ಬರ ಜೋರಾಗಿದ್ದು, 51,342 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಪ್ರಮಾಣವು 10,610,958ಕ್ಕೆ ತಲುಪಿದೆ ಎಂದು ಬುಧವಾರ ಬಿಡುಗಡೆಯಾದ ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ.

ದೇಶದಲ್ಲಿ 161 ಹೊಸ ಕೋವಿಡ್​ ಸಂಬಂಧಿತ ಸಾವು ವರದಿಯಾಗಿದೆ. ಈ ಮೂಲಕ ಬ್ರಿಟನ್‌ನಲ್ಲಿ ಕೊರೊನಾ ಸೋಂಕಿತರ ಸಾವಿನ ಒಟ್ಟು ಸಂಖ್ಯೆಯು 1,45,987ರಷ್ಟಾಗಿದೆ. ಹೊಸ ಸೋಂಕಿತ ಪ್ರಕರಣಗಳಲ್ಲಿ ಬಹುಪಾಲು ಡೆಲ್ಟಾ ರೂಪಾಂತರವಾಗಿರುವ ಸಾಧ್ಯತೆಯಿದೆ, ಒಮಿಕ್ರಾನ್ ಪ್ರಕರಣಗಳೂ ಕೂಡ ಏರಿಕೆಯತ್ತ ಸಾಗಿವೆ. ಇದುವರೆಗೆ 568 ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ.

ಕೋವಿಡ್​ ಹೆಚ್ಚಳ ಹಿನ್ನೆಲೆಲ್ಲಿ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಜ್ಞಾನಿಗಳು ಸರ್ಕಾರಕ್ಕೆ ಕರೆ ನೀಡಿದ್ದಾರೆ. ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳೂ ಹೆಚ್ಚುತ್ತಲೇ ಇರುವುದರಿಂದ ಜನರು ಹೆಚ್ಚು ಜಾಗರೂಕರಾಗಿರಲು ಸೂಚಿಸಲಾಗಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಬ್ರಿಟನ್‌ನಲ್ಲಿ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಶೇ. 89ರಷ್ಟು ಜನರು ತಮ್ಮ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಶೇ.81ರಷ್ಟು ಜನರಿಗೆ ಎರಡೂ ಡೋಸ್‌ ಲಸಿಕೆ ನೀಡಲಾಗಿದೆ. ಶೇಕಡಾ 37ಕ್ಕಿಂತ ಹೆಚ್ಚು ಜನರು ಬೂಸ್ಟರ್ ಜಬ್ಸ್ ಅಥವಾ ಕೋವಿಡ್​​​ ಲಸಿಕೆಯ ಮೂರನೇ ಡೋಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:ಕೋವಿಶೀಲ್ಡ್‌ ಲಸಿಕೆ ತಯಾರಿಕೆಯಲ್ಲಿ ಪ್ರಮುಖರಾಗಿದ್ದ ಡಾ. ಸುರೇಶ್ ಜಾಧವ್​ ನಿಧನ

ABOUT THE AUTHOR

...view details