ನೈಸ್, (ಫ್ರಾನ್ಸ್):ಬ್ಯಾಗೇಜ್ ಇಂತಿಷ್ಟೇ ಭಾರ ಇರ್ಬೇಕು ಅಂತಾ ವಿಮಾನಯಾನ ಸಂಸ್ಥೆಗಳು ರೂಲ್ಸ್ ಮಾಡಿರ್ತವೆ. ನಿಗದಿತ ವೇಟ್ಗಿಂತ ಹೆಚ್ಚಿದ್ರೇ ಅದಕ್ಕಾಗಿ ಹೆಚ್ಚುವರಿ ಹಣ ಪಾವತಿಸಲೇಬೇಕು. ಆದರೆ, ಅಗತ್ಯ ವಸ್ತುಗಳನ್ನೂ ತಗೊಂಡು ಹೋಗಿದ್ದಲ್ಲದೇ, ಹೆಚ್ಚುವರಿ ಹಣ ಪಾವತಿಸದೇ ಇರೋದಕ್ಕೆ ಇಲ್ಲೊಬ್ಬ ಐಡಿಯಾ ಮಾಡಿದ್ದ. ಅದೇನ್ ಅಂತಾ ನೋಡಿದ್ರೇ ನೀವೂ ಬಿದ್ದು, ಬಿದ್ದೂ ನಗ್ತೀರಿ.
ವಿಮಾನ ಪ್ರಯಾಣದ ವೇಳೆ ನಿಗದಿಗಿಂತ ಹೆಚ್ಚುವರಿ ಲಗೇಜ್ ಹೊಂದಿದ್ದ ಫ್ರಾನ್ಸ್ನ ಗ್ಲಾಸ್ಗೋ ನಿವಾಸಿಯೊಬ್ಬ ಹೆಚ್ಚುವರಿ ವೆಚ್ಚ ತಪ್ಪಿಸಲು ಮಾಡಿದ್ದ ಐಡಿಯಾ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನಗೆಬುಗ್ಗೆ ಉಕ್ಕಿಸುತ್ತಿದೆ. ಜಾನ್ ಇರ್ವೀನ್ ಎಂಬಾತ ತನ್ನ ಕುಟುಂಬ ಸಮೇತ, ನೈಸ್ ಏರ್ಪೋರ್ಟ್ನಿಂದ Easy ಜೆಟ್ ಏರ್ಪ್ಲೇನ್ನಲ್ಲಿ ಎಡಿನ್ಬರ್ಗ್ಗೆ ಹೊರಡಬೇಕಿತ್ತು. ಆದರೆ, ಬ್ಯಾಗೇಜ್ 8 ಕೆಜಿ ಮೀರಬಾರದೆಂಬ ನಿಯಮವಿತ್ತು. ಎಷ್ಟು ಕೆಜಿ ಹೆಚ್ಚುವರಿ ಭಾರವಿತ್ತೋ ಅದಕ್ಕಾಗಿ ಹಣ ಪೇ ಮಾಡ್ಬೇಕಿತ್ತು. ಇರ್ವೀನ್ ಮಾತ್ರ ಒಂದ್ ಐಡಿಯಾ ಮಾಡಿದರು.