ಕರ್ನಾಟಕ

karnataka

ETV Bharat / international

ಉಕ್ರೇನ್​​ನಲ್ಲಿ ಬ್ರೈನ್‌ಸ್ಟ್ರೋಕ್‌ನಿಂದ ಭಾರತೀಯ ವಿದ್ಯಾರ್ಥಿ ಸಾವು; ತಕ್ಷಣ ಖಾರ್ಕಿವ್​ ಬಿಡುವಂತೆ ತುರ್ತು ಸೂಚನೆ

ಉಕ್ರೇನ್​​ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಭಾರತದ ವಿದ್ಯಾರ್ಥಿಯೊಬ್ಬ ಬ್ರೈನ್​ ಸ್ಟ್ರೋಕ್​​ನಿಂದಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇದೇ ವೇಳೆ ಖಾರ್ಕಿವ್ ನಗರ ಬಿಡುವಂತೆ ಭಾರತೀಯ ಪ್ರಜೆಗಳಿಗೆ ಭಾರತ ತುರ್ತು ಸೂಚನೆ ಕೊಟ್ಟಿದೆ.

Second Indian dies in Ukraine
Second Indian dies in Ukraine

By

Published : Mar 2, 2022, 5:31 PM IST

ಕೀವ್​(ಉಕ್ರೇನ್​): ಕಳೆದ ಏಳು ದಿನಗಳಿಂದ ರಷ್ಯಾ-ಉಕ್ರೇನ್ ಮಧ್ಯೆ ತೀವ್ರ ಸ್ವರೂಪದ ಯುದ್ಧ ನಡೆಯುತ್ತಿದೆ. ಖಾರ್ಕಿವ್​ನಲ್ಲಿ ನಿನ್ನೆ ರಷ್ಯಾ ಮಿಲಿಟರಿ ಪಡೆ ನಡೆಸಿರುವ ಭೀಕರ ಶೆಲ್ ದಾಳಿಯಿಂದಾಗಿ ಕರ್ನಾಟಕದ ಹಾವೇರಿಯ ನವೀನ್​(21) ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಇಂದು ಭಾರತದ ಮತ್ತೋರ್ವ ವಿದ್ಯಾರ್ಥಿ ಬ್ರೈನ್​ ಸ್ಟ್ರೋಕ್​​ನಿಂದಾಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಉಕ್ರೇನ್​​ನ ವಿನ್ನಿಟ್ಸಿಯಾ ನ್ಯಾಷನಲ್​​ ಪೈರೋಗೋವ್​​ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡ್ತಿದ್ದ ಚಂದನ್ ಜಿಂದಾಲ್​(22) ಸಾವನ್ನಪ್ಪಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಚಂದನ್​, ಬ್ರೈನ್​​ ಸ್ಟ್ರೋಕ್​​ನಿಂದ ಬಳುಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಚಂದನ್ ಮೃತದೇಹವನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಈಗಾಗಲೇ ಉಕ್ರೇನ್​ ರಾಯಭಾರ ಕಚೇರಿಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ:3ನೇ ಮಹಾಯುದ್ಧ ಅಣ್ವಸ್ತ್ರಗಳಿಂದ ನಡೆಯಲಿದ್ದು ಅತ್ಯಂತ ವಿನಾಶಕಾರಿ: ರಷ್ಯಾ ವಿದೇಶಾಂಗ ಸಚಿವ

ಉಕ್ರೇನ್​​ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೋಸ್ಕರ ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಮಿಷನ್‌ ಹಮ್ಮಿಕೊಂಡಿದ್ದು, ಈಗಾಗಲೇ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್​ ಕರೆತಂದಿದೆ.

ತಕ್ಷಣವೇ ಖಾರ್ಕಿವ್​ ತೊರೆಯಿರಿ:ಉಕ್ರೇನ್​ನ ಖಾರ್ಕಿವ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಚುರುಕುಗೊಳಿಸಿದ್ದು ಕೇಂದ್ರ ಸರ್ಕಾರ ಅಲ್ಲಿರುವ ಭಾರತೀಯ ಪ್ರಜೆಗಳಿಗೆ ಮಹತ್ವದ ತುರ್ತು ಸೂಚನೆ ನೀಡಿದ್ದು, ತಕ್ಷಣವೇ ಖಾರ್ಕಿವ್ ತೊರೆಯುವಂತೆ ತಿಳಿಸಿದೆ.

ABOUT THE AUTHOR

...view details