ಕರ್ನಾಟಕ

karnataka

ETV Bharat / international

ಉಕ್ರೇನ್​ ಮೇಲೆ ರಷ್ಯಾ ಬಾಂಬ್​ ಹಾಕ್ತಿದ್ರೆ, ರಷ್ಯಾ ಮೇಲೆ ವಿಶ್ವದ ರಾಷ್ಟ್ರಗಳಿಂದ ಆರ್ಥಿಕ ಯುದ್ಧ

ಯುರೋಪಿಯನ್​ ರಾಷ್ಟ್ರಗಳ ಬ್ಯಾಂಕುಗಳನ್ನು ನಿಯಂತ್ರಿಸುವ 'ಸ್ವಿಫ್ಟ್​' ರಷ್ಯಾದ ಕರೆನ್ಸಿ ಮತ್ತು ಬ್ಯಾಂಕ್​ಗಳ ವಹಿವಾಟು ನಿಷೇಧಿಸಿದ ಬಳಿಕ ರೂಬಲ್​ ದಾಖಲೆಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

sanctions
ಆರ್ಥಿಕ ಯುದ್ಧ

By

Published : Feb 28, 2022, 10:43 AM IST

Updated : Feb 28, 2022, 10:55 AM IST

ಮಾಸ್ಕೋ:ರಷ್ಯಾ ಉಕ್ರೇನ್​ ಮೇಲೆ ಶಸ್ತ್ರಾಸ್ತ್ರಗಳಿಂದ ಯುದ್ಧ ನಡೆಸುತ್ತಿದೆ. ಇನ್ನೊಂದೆಡೆ, ಇದೇ ವೇಗದಲ್ಲಿ ವಿಶ್ವದ ಹಲವಾರು ರಾಷ್ಟ್ರಗಳು ರಷ್ಯಾವನ್ನು ಕಟ್ಟಿಹಾಕಲು ಆರ್ಥಿಕ ದಿಗ್ಬಂಧನಗಳನ್ನು ಹೇರುತ್ತಿವೆ. ಇದರಿಂದ ರಷ್ಯಾದ ರೂಬಲ್​ ಕರೆನ್ಸಿ ಡಾಲರ್​ ಮುಂದೆ ಶೇ.30 ರಷ್ಟು ಭಾರಿ ಕುಸಿತ ಕಂಡಿದೆ.

ಯುರೋಪಿಯನ್​ ರಾಷ್ಟ್ರಗಳ ಬ್ಯಾಂಕುಗಳನ್ನು ನಿಯಂತ್ರಿಸುವ 'ಸ್ವಿಫ್ಟ್​' ರಷ್ಯಾದ ಕರೆನ್ಸಿ ಮತ್ತು ಬ್ಯಾಂಕ್​ಗಳ ವಹಿವಾಟು ನಿಷೇಧಿಸಿದ ಬಳಿಕ ರೂಬಲ್​ ದಾಖಲೆಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ರೂಬಲ್​ ಕರೆನ್ಸಿ ಶೇ.30 ರಷ್ಟು ಕುಸಿತ ಕಂಡಿದ್ದರ ಮಧ್ಯೆಯೂ ಉಕ್ರೇನ್​ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯೂ ಏರಿಕೆ ಕಾಣುತ್ತಿದ್ದು, ಒಂದು ಬ್ಯಾರಲ್​ ಇದೀಗ 100 ಡಾಲರ್​ ಆಗಿದೆ.

ಯುರೋಪಿಯನ್ ಯೂನಿಯನ್, ಅಮೆರಿಕ, ಇಂಗ್ಲೆಂಡ್​ ಮತ್ತು ಮಿತ್ರರಾಷ್ಟ್ರಗಳು ಸ್ವಿಫ್ಟ್‌ನಿಂದ ರಷ್ಯಾದ ಹಲವಾರು ಬ್ಯಾಂಕ್‌ಗಳ ವಹಿವಾಟನ್ನು ಕಡಿತಗೊಳಿಸಿವೆ. ಅಲ್ಲದೇ, ರಷ್ಯಾದ ಕೇಂದ್ರ ಬ್ಯಾಂಕ್‌ನ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ. ರಷ್ಯಾದ ಸಾಗರೋತ್ತರ ವಹಿವಾಟು ಸಾಮರ್ಥ್ಯಕ್ಕೆ ಕಡಿವಾಣ ಹೇರಿವೆ.

ಇದನ್ನೂ ಓದಿ:'ಈ ಪರಿಸ್ಥಿತಿ ಯಾವ ಪೋಷಕರಿಗೂ ಬೇಡ..': ವಿಡಿಯೋ ಹಂಚಿಕೊಂಡ ರಾಹುಲ್ ಗಾಂಧಿ

Last Updated : Feb 28, 2022, 10:55 AM IST

ABOUT THE AUTHOR

...view details