ಕಾರ್ಕಿವ್ (ಉಕ್ರೇನ್): ರಷ್ಯಾ ಹಾಗೂ ಉಕ್ರೇನ್ ಯುದ್ಧ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಉಕ್ರೇನ್‌ನ ಎರಡನೇ ದೊಡ್ಡ ನಗರವಾದ ಕಾರ್ಕಿವ್ಗೆ ರಷ್ಯಾ ಪಡೆಗಳು ಪ್ರವೇಶಿಸಿದೆ ಎಂದು ಕಾರ್ಕಿವ್ ಪ್ರಾದೇಶಿಕ ಆಡಳಿತದ ಮುಖ್ಯಸ್ಥರು ತಿಳಿಸಿದ್ದಾರೆ.
ಕಾರ್ಕಿವ್ ನಗರವು ಉಕ್ರೇನ್ ರಾಜಧಾನಿ ಕೀವ್ನಿಂದ ಸುಮಾರು 480 ಕಿ.ಮೀ ದೂರದಲ್ಲಿದೆ. ಕಾರ್ಕಿವ್ನಲ್ಲಿರುವ ಗ್ಯಾಸ್ ಪೈಪ್‌ಲೈನ್ ಅನ್ನು ರಷ್ಯಾ ಸೇನೆ ಸ್ಫೋಟಿಸಿದ ಬಳಿಕ ಇದೀಗ ನಗರಕ್ಕೆ ನುಗ್ಗಿದೆ. "ರಷ್ಯಾದ ಶತ್ರುಗಳ ಲಘು ವಾಹನಗಳು ಕಾರ್ಕಿವ್ ನಗರಕ್ಕೆ ನುಗ್ಗಿವೆ. ಉಕ್ರೇನಿಯನ್ ಸಶಸ್ತ್ರ ಪಡೆಗಳು ಶತ್ರುಗಳನ್ನು ನಿರ್ಮೂಲನೆ ಮಾಡುತ್ತಿವೆ" ಎಂದು ಅವರು ಹೇಳಿದ್ದಾರೆ.
ಕಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲೇ ಭಾರತದ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅಲ್ಲಿನ ಮೆಟ್ರೋ ನಿಲ್ದಾಣ ಹಾಗೂ ಬಂಕರ್ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.