ಮಾಸ್ಕೋ (ರಷ್ಯಾ):ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿದ್ದು, ಉಕ್ರೇನ್ಗೆ ಬೆಂಬಲ ನೀಡಲು ಹೊರಟಿರುವ ಪಶ್ಚಿಮದಲ್ಲಿರುವ ಅದರ ಮಿತ್ರರಾಷ್ಟ್ರಗಳಿಗೆ ಕೂಲ್ ವಾರ್ನಿಂಗ್ ನೀಡಿದ್ದಾರೆ ಎಂದು ಎಂದು ಡೈಲಿ ಮೇಲ್ ವರದಿ ಮಾಡಿದೆ.
ದೂರದರ್ಶನದಲ್ಲಿ ಮಾತನಾಡಿರುವ ಪುಟಿನ್ ಹೊರಗಿನಿಂದ ಹಸ್ತಕ್ಷೇಪ ಮಾಡುವ ಕೆಲಸ ಮಾಡಿದರೆ ನೀವು ಇತಿಹಾಸದಲ್ಲಿ ಎಂದಿಗೂ ಕಂಡರಿಯದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪಶ್ಚಿಮ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆಯನ್ನು ಕರೆದಿತ್ತು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ರಷ್ಯಾ ಅಧ್ಯಕ್ಷ ಪುಟಿನ್ ಬಳಿ ನಿಮ್ಮ ಪಡೆಗಳು ಉಕ್ರೇನ್ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಿ, ಶಾಂತಿಗೆ ಅವಕಾಶ ನೀಡಿ. ಈಗಾಗಲೇ ಹಲವಾರು ಜನರು ಸಾವನ್ನಪ್ಪಿದ್ದಾರೆ ಎಂದು ಮನವಿ ಮಾಡಿದೆ.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ದಾಳಿಗೆ ಕಾರಣಗಳೇನು ಗೊತ್ತಾ?
ಈ ಮನವಿಯನ್ನು ನಿರ್ಲಕ್ಷಿಸಿರುವ ಪುಟಿನ್, ಉಕ್ರೇನ್ ಮೇಲೆ ಯುದ್ಧ ಸಾರಿದ್ದು, ತಮ್ಮ ಆಕ್ರಮಣವನ್ನು "ವಿಶೇಷ ಮಿಲಿಟರಿ ಆಕ್ರಮಣ" ಎಂದು ಟಿವಿಯಲ್ಲಿ ಹೇಳಿಕೆ ನೀಡಿದ್ದಾರೆ.