ಜಿನೀವಾ/ಸ್ವಿಜರ್ಲ್ಯಾಂಡ್ :ಯುರೋಪ್ ಖಂಡದ ಎಂಟು ದೇಶಗಳಲ್ಲಿ ಕೋವಿಡ್ ವೈರಾಣುವಿನ ಹೊಸ ರೂಪಾಂತರ ಪತ್ತೆಯಾಗಿರುವುದಾಗಿ ಡಬ್ಲ್ಯುಹೆಚ್‌ಒನ ಯುರೋಪಿಯನ್ ಕಚೇರಿಯ ಮುಖ್ಯಸ್ಥ ಡಾ. ಹ್ಯಾನ್ಸ್ ಕ್ಲುಗೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವ ಅನಿವಾರ್ಯತೆ ಹೆಚ್ಚಿರುವ ಮಧ್ಯೆ, ಕೊರೊನಾದ ಹೊಸ ರೂಪಾಂತರ ಹಿಂದಿನ ಕೋವಿಡ್-19 ವೈರಸ್ಗಿಂತ ಭಿನ್ನವಾಗಿದೆ. ಕಿರಿಯ ವಯಸ್ಸಿನವರಲ್ಲಿ ಹರಡುತ್ತಿದೆ ಎಂದು ಡಬ್ಲ್ಯುಹೆಚ್‌ಒ ಯುರೋಪಿನ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲುಗೆ ಮಾಹಿತಿ ನೀಡಿದ್ದಾರೆ.
ಯುರೋಪ್ನ 8 ದೇಶಗಳಲ್ಲಿ ಈಗ ಹೊಸ ಕೊರೊನಾ ರೂಪಾಂತರ ವೈರಸ್ ಕಂಡು ಬಂದಿದೆ. ಈ ಹಿನ್ನೆಲೆ ಈಗಾಗಲೇ ಅಸ್ತಿತ್ವದಲ್ಲಿರುವ ರಕ್ಷಣಾತ್ಮಕ ಕ್ರಮಗಳನ್ನು ಬಲಪಡಿಸುವುದು ಬಹಳ ಮುಖ್ಯ.
ಸಾಮಾಜಿಕ ಅಂತರ, ಫೇಸ್ ಮಾಸ್ಕ್ ಎಲ್ಲವೂ ಕಡ್ಡಾಯ, ಇನ್ನು ವಿಶ್ವ ಆರೋಗ್ಯ ಸಂಸ್ಥೆ( WHO) ಹೊಸ ಕೊರೊನಾ ಪ್ರಭೇದದ ಕುರಿತು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದು, ಆ ಬಗ್ಗೆ ಮಾಹಿತಿ ನೀಡುವುದಾಗಿ ಹ್ಯಾನ್ಸ್ ಕ್ಲುಗೆ ಟ್ವೀಟ್ ಮಾಡಿದ್ದಾರೆ.