ಕೈರೋ(ಈಜಿಫ್ಟ್):ವಿಚಿತ್ರವಾದ ಘಟನೆವೊಂದರಲ್ಲಿ ಇಡೀ ಮೊಬೈಲ್ ಫೋನ್ ನುಂಗಿರುವ ವ್ಯಕ್ತಿಯೋರ್ವ ನೈಸರ್ಗಿಕವಾಗಿ ಹೊರ ಬರುತ್ತದೆ ಎಂದು ಸುಮಾರು ಆರು ತಿಂಗಳ ಕಾಲ ಕಾಯ್ದಿರುವ ಘಟನೆ ನಡೆದಿದೆ. ಈ ಘಟನೆ ಈಜಿಫ್ಟನ್ನ ಕೈರೋದಲ್ಲಿ ನಡೆದಿದೆ. ಹೊಟ್ಟೆಯಲ್ಲಿ ಮೊಬೈಲ್ ಇರುವುದನ್ನ ನೋಡಿರುವ ವೈದ್ಯರು ದಿಢೀರ್ ಶಾಕ್ಗೊಳಗಾಗಿದ್ದಾರೆ.
ಘಟನೆಯ ವಿವರ ಇಂತಿದೆ
ಈಜಿಪ್ಟ್ನಲ್ಲಿ ವಾಸವಾಗಿದ್ದ ವ್ಯಕ್ತಿಯೋರ್ವ ಕಳೆದ ಆರು ತಿಂಗಳ ಹಿಂದೆ ಮೊಬೈಲ್ ಫೋನ್ ನುಂಗಿದ್ದಾನೆ. ದೇಹದ ಮೂಲಕ ನೈಸರ್ಗಿಕವಾಗಿ ಹೊರ ಬರುತ್ತದೆ ಎಂದು ಕಳೆದ ಆರು ತಿಂಗಳಿಂದಲೂ ಕಾಯ್ದು ಕುಳಿತಿದ್ದಾನೆ.
ಆದರೆ, ಅದು ಹೊರ ಬಂದಿಲ್ಲ. ಹೀಗಾಗಿ, ದಿನದಿಂದ ದಿನಕ್ಕೆ ಆತನ ಹೊಟ್ಟೆಯ ನೋವು ಹೆಚ್ಚಾಗಿದೆ. ಬಳಿಕ ಊದಿಕೊಳ್ಳಲು ಶುರುವಾಗಿದೆ. ಆತನಲ್ಲಿ ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಈ ವೇಳೆ ವೈದ್ಯರು ಆತನ ಹೊಟ್ಟೆಯ X-ray ಸ್ಕ್ಯಾನ್ ಮಾಡಿದ್ದಾರೆ. ಈ ವೇಳೆ ಮೊಬೈಲ್ ಇರುವುದನ್ನ ನೋಡಿ ದಿಢೀರ್ ಆಗಿ ಶಾಕ್ಗೊಳಗಾಗಿದ್ದಾನೆ. ಸಡನ್ ಆಗಿ ಆತನಿಗೆ ಶಸ್ತ್ರ ಚಿಕಿತ್ಸೆ ನಡೆಸಿರುವ ವೈದ್ಯರು ಮೊಬೈಲ್ ಹೊರ ತೆಗೆದಿದ್ದಾರೆ.
ಇದನ್ನೂ ಓದಿರಿ:T-20 World Cup: ಅಗ್ರ ತಂಡಗಳಿಗೂ ಅಚ್ಚರಿಯ ಆಘಾತ ನೀಡುತ್ತೇವೆ: ಸ್ಕಾಟ್ಲೆಂಡ್ ಸ್ಪಿನ್ನರ್ ವ್ಯಾಟ್
ಅಸ್ವಾನ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಆತನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಇದರ ಬಗ್ಗೆ ಮಾತನಾಡಿರುವ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿರುವ ಮೊಹಮ್ಮದ ಎಲ್ ದಶೌರಿ, ನನ್ನ ವೃತ್ತಿ ಜೀವನದಲ್ಲಿ ಇಂತಹ ಘಟನೆ ಇದೇ ಮೊದಲು ನೋಡಿದ್ದೇನೆ ಎಂದಿದ್ದಾರೆ.
ವ್ಯಕ್ತಿಯ ಆರೋಗ್ಯ ಸ್ಥಿತಿ ಯಾವ ರೀತಿಯಾಗಿದೆ ಎಂಬುದರ ಬಗ್ಗೆ ಹಾಗೂ ಯಾವ ಕಾರಣಕ್ಕಾಗಿ ಆತ ಮೊಬೈಲ್ ಫೋನ್ ನುಂಗಿದ್ದಾನೆ ಎಂಬುದರ ಬಗ್ಗೆ ಈವರೆಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.