ಕರ್ನಾಟಕ

karnataka

ETV Bharat / international

ಸಿರಿಯಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ: ಇಬ್ಬರು ಸೈನಿಕರ ಸಾವು - ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್

ಇಸ್ರೇಲ್​ ಸೋಮವಾರ ರಾತ್ರಿ ಕ್ಷಿಪಣಿ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ಸೈನಿಕರು ಮೃತಪಟ್ಟು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ​ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

By

Published : Sep 1, 2020, 9:58 AM IST

ಡಮಾಸ್ಕಸ್(ಸಿರಿಯಾ): ಇಸ್ರೇಲ್ ಸೋಮವಾರ ರಾತ್ರಿ ಸಿರಿಯಾ ರಾಜಧಾನಿ ಡಮಾಸ್ಕಸ್​ನ ದಕ್ಷಿಣ ಭಾಗದಲ್ಲಿ ಕ್ಷಿಪಣಿ ದಾಳಿ ಮಾಡಿದ್ದರ ಪರಿಣಾಮ ಇಬ್ಬರು ಸೈನಿಕರು ಸಾವನ್ನಪ್ಪಿ, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ​ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ಷಿಪಣಿ ದಾಳಿ

ಡಮಾಸ್ಕಸ್​ನ ದಕ್ಷಿಣ ಭಾಗದಲ್ಲಿರುವ ಸಿರಿಯನ್ ಮಿಲಿಟರಿ ಪೋಸ್ಟ್​ಗಳನ್ನು ಇಸ್ರೇಲ್​ ಕ್ಷಿಪಣಿಗಳು ಗುರಿಯಾಗಿಸಿಕೊಂಡಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದು, ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾತ್ರಿ ಸುಮಾರು 10.40ಕ್ಕೆ ದಾಳಿ ಆರಂಭವಾಗಿದ್ದು, ಸಿರಿಯಾದ ಇಸ್ರೇಲ್ ಆಕ್ರಮಿತ ಪ್ರದೇಶವಾದ ಗೋಲನ್ ಹೈಟ್ಸ್​ ಎಂಬ ಪ್ರದೇಶದಿಂದ ಕ್ಷಿಪಣಿಗಳನ್ನು ಗುರಿ ಇಡಲಾಗಿದೆ. ಕ್ಷಿಪಣಿ ದಾಳಿಯ ನಂತರ ಸ್ಫೋಟದ ಸದ್ದು ಕೇಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬ್ರಿಟನ್​ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಸಿರಿಯಾ ಇಸ್ರೇಲ್​ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡಿದೆ ಎಂದು ಸ್ಪಷ್ಟನೆ ನೀಡಿದೆ. ಸಿರಿಯಾದಲ್ಲಿ ಇರಾನ್ ಸೇನೆ ಬೀಡು ಬಿಟ್ಟಿದ್ದು, ಇದೇ ಕಾರಣದಿಂದ ಇಸ್ರೇಲ್ ದಾಳಿ ನಡೆಸಿದೆ ಎನ್ನಲಾಗುತ್ತಿದ್ದು, ಕಳೆದ ಮೂರು ತಿಂಗಳಿನಲ್ಲಿ ಕನಿಷ್ಠ ಎಂಟು ಬಾರಿ ಇಸ್ರೇಲ್​ ವಾಯು ದಾಳಿ ನಡೆಸಿದೆ ಎಂದು ಸಿರಿಯಾ ಆರೋಪಿಸಿದೆ. ಇದಕ್ಕೂ ಮೊದಲು ಜುಲೈ 20ರಂದು ಇಸ್ರೇಲ್ ದಾಳಿ ನಡೆಸಿತ್ತು.

ಇರಾನ್ ಸಿರಿಯಾಗೆ ಮಿತ್ರ ರಾಷ್ಟ್ರವಾಗಿದ್ದು, ಇದು ಪಕ್ಕದ ಇಸ್ರೇಲ್​ಗೆ ಭೀತಿಯನ್ನುಂಟು ಮಾಡಿದೆ. ಇದರಿಂದಾಗಿ ಆಗಾಗ ಸಿರಿಯಾದಲ್ಲಿರುವ ಇರಾನ್ ಸೇನೆಯ ಮೇಲೆ ದಾಳಿ ಮಾಡುವುದೂ ಸಾಮಾನ್ಯವಾಗಿದೆ.

ABOUT THE AUTHOR

...view details