ಕರ್ನಾಟಕ

karnataka

ETV Bharat / international

ಮಾನವನ ಮೇಲೆ ಕೋವಿಡ್​ -19 ಲಸಿಕೆ ಪ್ರಯೋಗ ಪ್ರಾರಂಭಿಸಿದ ಇಸ್ರೇಲ್​​​ - ಮಾನವನ ಮೇಲೆ ಕೋವಿಡ್​-19 ಲಸಿಕೆ ಪ್ರಯೋಗ ಸುದ್ದಿ

ಕೊರೊನಾ ವೈರಸ್​​ ಬಿಕ್ಕಟ್ಟಿನಿಂದ ಹೊರ ಬರುವುದು ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿಪಡಿಸುವುದರ​ ಮೇಲೆ ಅವಲಂಬಿತವಾಗಿದೆ ಎಂದು ಶೆಬಾ ಆಸ್ಪತ್ರೆಗೆ ಭೇಟಿ ನೀಡಿದ್ದ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಹೇಳಿದ್ದಾರೆ. ಸದ್ಯ ಇಲ್ಲಿನ ಎರಡು ಆಸ್ಪತ್ರೆಗಳಲ್ಲಿ ಮಾನವನ ಮೇಲೆ ಕೋವಿಡ್​ ಲಸಿಕೆ ಪ್ರಯೋಗ ಪ್ರಾರಂಭವಾಗಿದ್ದು, ಮೊದಲ ಹಂತದಲ್ಲಿ ಸುಮಾರು 80 ಕ್ಕೂ ಹೆಚ್ಚು ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗಿದೆ.

vaccine
ಮಾನವನ ಮೇಲೆ ಕೋವಿಡ್​-19 ಲಸಿಕೆ ಪ್ರಯೋಗ ಪ್ರಾರಂಭಿಸಿದ ಇಸ್ತ್ರೇಲ್​

By

Published : Nov 2, 2020, 12:06 PM IST

ಜೆರುಸಲೆಂ: ಇಸ್ರೇಲ್ ಕೋವಿಡ್​ -19 ಲಸಿಕೆಯ ಮಾನವ ಪ್ರಯೋಗಗಳನ್ನು ಪ್ರಾರಂಭಿಸಿದೆ ಎಂದು ಹಡಸ್ಹಾ ಮತ್ತು ಶೆಬಾ ವೈದ್ಯಕೀಯ ಕೇಂದ್ರಗಳು ತಿಳಿಸಿವೆ.

ಮಧ್ಯ ಇಸ್ರೇಲ್‌ನಲ್ಲಿರುವ ಶೆಬಾ ಆಸ್ಪತ್ರೆಯಲ್ಲಿ, 26 ವರ್ಷದ ವಿದ್ಯಾರ್ಥಿಗೆ ಇಸ್ರೇಲಿ ಇನ್‌ಸ್ಟಿಟ್ಯೂಟ್ ಆಫ್ ಬಯೋಲಾಜಿಕಲ್ ರಿಸರ್ಚ್ (ಐಐಬಿಆರ್) ತಯಾರಿಸಿದ "ಬ್ರೈಲೈಫ್" ಲಸಿಕೆ ನೀಡಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದೇ ವೇಳೆ, ಜೆರುಸಲೆಂನಲ್ಲಿರುವ ಹಡಸ್ಹಾ ಆಸ್ಪತ್ರೆಯಲ್ಲಿ 34 ವರ್ಷದ ಸ್ವಯಂ ಸೇವಕನಿಗೆ ಈ ಲಸಿಕೆ ನೀಡಲಾಗಿದೆ.

ಈ ಹಿನ್ನೆಲೆ ಭಾನುವಾರ ಶೆಬಾ ಆಸ್ಪತ್ರೆಗೆ ಭೇಟಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಕೊರೊನಾ ವೈರಸ್​​ ಬಿಕ್ಕಟ್ಟಿನಿಂದ ಹೊರಬರುವುದು ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿಪಡಿಸುವುದರ​ ಮೇಲೆ ಅವಲಂಬಿತವಾಗಿದೆ. ಆದ್ದರಿಂದ, ಇದು ಬಹಳ ಮಹತ್ವದ ದಿನವಾಗಿದೆ ಎಂದಿದ್ದಾರೆ. ಈ ತಿಂಗಳು, ಎರಡು ಆಸ್ಪತ್ರೆಗಳಲ್ಲಿ ಸುಮಾರು 80 ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗುವುದು, ಇವರಲ್ಲಿ ಅರ್ಧದಷ್ಟು ಮಂದಿ ಲಸಿಕೆ ಮತ್ತು ಇತರರು ಪ್ಲಸೀಬೊ ಲಸಿಕೆ ಪಡೆಯಲಿದ್ದಾರೆ.

ಎರಡನೇ ಹಂತದ ಹ್ಯೂಮನ್​ ಟ್ರಯಲ್​ ಡಿಸೆಂಬರ್​ಗೆ ನಿಗದಿಯಾಗಲಿದ್ದು, 960 ಸ್ವಯಂ ಸೇವಕರ ಮೇಲೆ ಲಸಿಕೆ ಪ್ರಯೋಗ ನಡೆಸಲು ತಯಾರಿ ಮಾಡಿಕೊಳ್ಳಲಾಗ್ತಿದೆ. ಇನ್ನೂ 3ನೇ ಹಂತದದ ಲಸಿಕೆ ಪ್ರಯೋಗದ ವೇಳೆ ಸುಮಾರು 30 ಸಾವಿರ ಸ್ವಯಂ ಸೇವಕರಿಗೆ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಲಸಿಕೆ ನೀಡಲು ಯೋಜಿಸಲಾಗಿದೆ.

ABOUT THE AUTHOR

...view details