ಕರ್ನಾಟಕ

karnataka

ETV Bharat / international

ಹೆಂಡ್ತಿ ಪ್ರೀತಿ ಚೆಕ್​ ಮಾಡಲು ಕುಡಿದು ರೋಡ್​ನಲ್ಲಿ ನಿಂತ ಗಂಡ... ಮುಂದಾಗಿದ್ದೇನು ನೋಡಿ! - ಬೀಜಿಂಗ್​

ಬೀಜಿಂಗ್​: ಹೆಂಡತಿ ತನ್ನ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾಳೆ ಎಂಬುದನ್ನ ಚೆಕ್​ ಮಾಡಲು ಹೋದ ಕುಡುಕ ಗಂಡ ನಡು ರೋಡ್​​ನಲ್ಲಿ ನಿಂತು ರಂಪಾಟ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ.

ಕುಡಿದು ರೋಡ್​ನಲ್ಲಿ ನಿಂತ ಗಂಡ

By

Published : Mar 15, 2019, 9:56 PM IST

ಬೀಜಿಂಗ್​: ಹೆಂಡತಿ ತನ್ನ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿದ್ದಾಳೆ ಎಂಬುದನ್ನ ಚಕ್​ ಮಾಡಲು ಹೋದ ಕುಡುಕ ಗಂಡ ನಡು ರೋಡ್​​ನಲ್ಲಿ ನಿಂತು ರಂಪಾಟ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ.

ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದ ಗಂಡ, ಹೆಂಡತಿ ತನ್ನ ಮೇಲೆ ಇಟ್ಟುಕೊಂಡಿರುವ ಪ್ರೀತಿಯನ್ನ ಚಕ್​ ಮಾಡಲು ರಸ್ತೆ ಮಧ್ಯೆ ನಿಂತುಕೊಂಡಿದ್ದಾನೆ. ಈ ವೇಳೆ ಹೆಂಡತಿ ಆತನನ್ನ ಅನೇಕ ಸಲ ರೋಡ್​​ನಿಂದ ಹೊರಗಡೆ ಕರೆತಂದಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಆತ ಮತ್ತೆ ರೋಡ್​ಗೆ ಇಳಿದಿದ್ದಾನೆ. ಈ ವೇಳೆ ಟ್ರಕ್​ವೊಂದು ಆತನ ಮೇಲೆ ಹರಿದು ಹೋಗಿದ್ದು, ಗಾಯಗೊಂಡಿರುವ ಆತನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿರುವ ಮಿಸ್ಟರ್​ ಪಾನ್​ ಹೆಂಡತಿ ನನ್ನ ಮೇಲಿಟ್ಟಿರುವ ಪ್ರೀತಿ ಚೆಕ್​ ಮಾಡಲು ಈ ರೀತಿಯಾಗಿ ನಡೆದುಕೊಂಡಿರುವೆ ಎಂದಿದ್ದಾನೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್​ ಕೂಡ ಆಗಿದೆ. ಈ ಹುಚ್ಚಾಟದ ಬಗ್ಗೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿದು ಬಂದಿದೆ.

ABOUT THE AUTHOR

...view details