ಬ್ರಿಟನ್:ಕೋವಿಡ್-19 ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ 10 ಜನರಲ್ಲಿ ಏಳು ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಐದು ತಿಂಗಳ ನಂತರವೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಇಂಗ್ಲೆಂಡ್ನಲ್ಲಿ ನಡೆಸಿದ ಅಧ್ಯಯನವು ಕೋವಿಡ್ -19 ಬದುಕುಳಿದವರು ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಲೇ ಇದ್ದಾರೆ ಎಂದು ಹೇಳಿದೆ.
ಐದರಲ್ಲಿ ಒಬ್ಬರು ಹೊಸ ಅಂಗವೈಕಲ್ಯ ಎದುರಿಸಿದರು. ಇದೇ ಪ್ರಮಾಣದ ಜನರು ತಮ್ಮ ಉದ್ಯೋಗಗಳಲ್ಲಿ ನಿತ್ಯದ ಕೆಲಸ ನಿರ್ವಹಿಸುವಲ್ಲಿ ತೊಂದರೆಗಳನ್ನು ಎದುರಿಸಬೇಕಾಯಿತು. ಇದರಿಂದಾಗಿ ಕೆಲವರು ಕೆಲಸವನ್ನೇ ತ್ಯಜಿಸಿದದ್ದಾರೆ. ಇತರರು ಆರೋಗ್ಯ ಸಂಬಂಧಿತ ತೊಂದರೆಗಳಿಂದಾಗಿ ಉದ್ಯೋಗಗಳನ್ನು ಬದಲಾಯಿಸಬೇಕಾಯಿತು ಎಂದು ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದೆ.
ಕೋವಿಡ್-19ನಿಂದ ಬಳಲುತ್ತಾ ಸೋಂಕಿನ ತೊಡಕು ಎದುರಿಸಿದ ಬಹುಪಾಲು ಜನರಲ್ಲಿ ಮಧ್ಯವಯಸ್ಕ ಬಿಳಿ ಜನಾಂಗದ ಮಹಿಳೆಯರಿದ್ದಾರೆ. ಮಧುಮೇಹ, ಆಸ್ತಮಾ ಅಥವಾ ಹೃದಯ ಸಂಬಂಧಿತ ಕಾಯಿಲೆಗಳಂತಹ ಒಂದು ಅಥವಾ ಎರಡು ಆರೋಗ್ಯ ಕೊಮೊರ್ಬಿಡಿಟಿಗಳಿವೆ.
ಈ ಅಧ್ಯಯನವು ಕೋವಿಡ್ -19 ಸೋಂಕಿಗೆ ಒಳಗಾದ 1,077 ಗುಣಮುಖ ಸೋಂಕಿತರನ್ನು ಒಳಗೊಂಡಿತ್ತು. ಅವರೆಲ್ಲ 2020ರ ಮಾರ್ಚ್ ಮತ್ತು ನವೆಂಬರ್ ನಡುವೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರಿದ್ದರು. ಬಿಳಿ ಜನಾಂಗೀಯರು 67 ಪ್ರತಿಶತ, ಮಹಿಳೆಯರು 36 ಪ್ರತಿಶತ ಮತ್ತು 50 ಸಂವಾದಿಗಳು ಎರಡು ಅಥವಾ ಹೆಚ್ಚಿನ ಕೊಮೊರ್ಬಿಡಿಟಿ ಹೊಂದಿದವರು ಅಧ್ಯಯನದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಕೊರೊನಾ 2ನೇ ಅಲೆಗೆ ಪೇಟೆಯಲ್ಲಿ ಮಾರಾಟದ ಒತ್ತಡ: ಇಂದೂ 740 ಅಂಕ ಕುಸಿತ
ಐದು ತಿಂಗಳ ನಂತರ ಅಧ್ಯಯನದಲ್ಲಿ ಭಾಗವಹಿಸಿದವರ ಪೈಕಿ ಕೇವಲ 29 ಪ್ರತಿಶತದಷ್ಟು ಜನರು ತಾವು ಕೊರೊನಾ ವೈರಸ್ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆಂದು ಭಾವಿಸಿದರೆ, 90 ಪ್ರತಿಶತದಷ್ಟು ಜನರು ಕೋವಿಡ್ಗೆ ಮೊದಲು ಅನುಭವಿಸದ ಕನಿಷ್ಠ ಒಂದು ರೋಗಲಕ್ಷಣ ಅನುಭವಿಸಿದ್ದಾರೆ. ಕೇವಲ ಶೇ. 29ರಷ್ಟು ಜನರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. 20 ಪ್ರತಿಶತದಷ್ಟು ಜನರು ಹೊಸ ಅಂಗವೈಕಲ್ಯ ಹೊಂದಿದ್ದಾರೆ. ಶೇ. 19ರಷ್ಟು ಜನರು ಉದ್ಯೋಗದಲ್ಲಿ ಆರೋಗ್ಯ ಸಂಬಂಧಿತ ಬದಲಾವಣೆಯನ್ನು ಅನುಭವಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ನಂತರ ಕೋವಿಡ್-19ರ ದೈಹಿಕ, ಅರಿವಿನ ಮತ್ತು ಮಾನಸಿಕ ಆರೋಗ್ಯದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಾಯಿತು.
'ಮೈ-ಕೈ ನೋವು, ಸ್ನಾಯು ನೋವು, ಆಯಾಸ, ದೈಹಿಕ ನಿಧಾನತೆ, ದುರ್ಬಲ ನಿದ್ರೆಯ ಗುಣಮಟ್ಟ, ಕೀಲು ನೋವು, ಅಂಗ ದೌರ್ಬಲ್ಯ, ಉಸಿರಾಟ ತೊಂದರೆ, ಅಲ್ಪಾವಧಿಯ ಮೆಮೊರಿ ನಷ್ಟ, ಆಲೋಚನೆಯಲ್ಲಿ ನಿಧಾನಗತಿ, ಮೊದಲೇ ಕೊಮೊರ್ಬಿಡಿಟಿ ಹೊಂದಿರುವವರಲ್ಲಿ ನಿರಂತರ ರೋಗಲಕ್ಷಣಗಳ ಸಂಖ್ಯೆ ಹೆಚ್ಚಳವಾದವು ಎಂದು ಪೀರ್-ರಿವ್ಯೂ ಅಧ್ಯಯನ ತಿಳಿಸಿದೆ.