ಡೆವೊನ್ (ಯುನೈಟೆಡ್ ಕಿಂಗ್‌ಡಮ್):ತೆಂಗಿನ ಎಣ್ಣೆ ಉತ್ಪಾದನೆ ಪರಿಸರಕ್ಕೆ ಹಾನಿಕಾರಕ ಎಂದು ಸಂಶೋಧಕರು ಹೇಳಿದ್ದಾರೆ. ಪಾಮ್ ಆಯಿಲ್ ಅಥವಾ ಇತರ ವೆಜಿಟೇಬಲ್ ಆಯಿಲ್ ಉತ್ಪಾದನೆಗಿಂತತೆಂಗಿನ ಎಣ್ಣೆ ಉತ್ಪಾದನೆ ಹೆಚ್ಚು ಹಾನಿ ಉಂಟುಮಾಡಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಎಕ್ಸೆಟರ್ ವಿಶ್ವವಿದ್ಯಾನಿಲಯ ಈ ಸಂಶೋಧನೆ ನಡೆಸಿದೆ. ತೆಂಗಿನ ಎಣ್ಣೆ ಉತ್ಪಾದಿಸಲು ಹೆಚ್ಚೆಚ್ಚು ತೆಂಗಿನ ಮರಗಳನ್ನು ಬೆಳೆಯಲಾಗುತ್ತಿದೆ. ಇದು ಪರಿಸರದಲ್ಲಿರುವ ಇತರ ಜಾತಿಯ ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ ಅನ್ನೋದು ಅವರ ಅಂಬೋಣ.
ತೆಂಗಿನ ಎಣ್ಣೆ ಉತ್ಪಾದನೆ ಪರಿಸರಕ್ಕೆ ಹಾನಿ ಪ್ರತಿ ಮಿಲಿಯನ್ ಲೀಟರ್ನ ತೆಂಗಿನ ಎಣ್ಣೆಯ 20 ಇತರ ಜಾತಿಯ ಜೀವಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಉಳಿದಂತೆ ತಾಳೆ ಎಣ್ಣೆ ಪ್ರತಿ ಮಿಲಿಯನ್ ಲೀಟರ್‌ಗೆ 3.8 ಇತರ ಜಾತಿಯ ಜೀವಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಆಲಿವ್ (4.1) ಮತ್ತು ಸೋಯಾಬೀನ್ (1.3) ಪರಿಣಾಮ ಬೀರುತ್ತದೆ.
ಜಾಗತಿಕವಾಗಿ, ತೆಂಗಿನ ಬೆಳೆ 12.3 ದಶಲಕ್ಷ ಹೆಕ್ಟೇರ್ (30.4 ದಶಲಕ್ಷ ಎಕರೆ) ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅದರ ಮೂರನೇ ಎರಡರಷ್ಟು ಪ್ರದೇಶವನ್ನು ಪಾಮ್ ಬೆಳೆ ಹೊಂದಿದೆ.
ಪಾಶ್ಚಿಮಾತ್ಯ ದೇಶಗಳ ಅನೇಕ ಗ್ರಾಹಕರು ತೆಂಗಿನಕಾಯಿ ಉತ್ಪನ್ನಗಳು ಆರೋಗ್ಯಕರವಾಗಿದ್ದು, ಅವುಗಳ ಉತ್ಪಾದನೆಯಿಂದ ಪರಿಸರಕ್ಕೆ ಹಾನಿಯಿಲ್ಲ ಎಂದು ಭಾವಿಸುತ್ತಾರೆ. ಆದರೆ ಇದು ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.